ವೆಬ್ ಸೈಟ್ ಮೂಲಕ ರೇಪಿಸ್ಟುಗಳ ಜಾತಕ ಹರಾಜು

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಆರ್ ಪಿ ಎನ್ ಸಿಂಗ್ ಅವರು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗಕ್ಕೆ (National Crime Records Bureau) ಗುರುವಾರ ಈ ಸೂಚನೆ ನೀಡಿದ್ದಾರೆ. ಕೇವಲ ಸೈಟಿನಲ್ಲಿ ಇದನ್ನು ಪ್ರಕಟಿಸಿ, ಸುಮ್ಮನಾಗುವುದಿಲ್ಲ. ಇದರ ಜತೆಗೆ ಪೊಲೀಸ್ ಇಲಾಖೆಯ ವೆಬ್ ಸೈಟುಗಳಲ್ಲೂ ಅತ್ಯಾಚಾರಿಗಳ ಮಾನ ಹರಾಜು ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಾನಭಂಗ ಮಾಡುವವರ ಮಾನ ಹರಾಜು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹವಾಗಿದೆ. 'ದೇಶದ ಯಾವುದೇ ಮೂಲೆಯಲ್ಲಿ ಅಡಗಿರಲಿ ಮೊದಲು ಅತ್ಯಾಚಾರಿಯ ವಿವರವಾದ ಡೇಟಾ ಬೇಸ್ ಸಿದ್ಧಪಡಿಸಿ. ನಂತರ ಎಲ್ಲ ಅತ್ಯಾಚಾರಿಗಳ ಹೆಸರು, ಭಾವಚಿತ್ರ, ವಿಳಾಸವನ್ನು ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಿ' ಎಂದು ಸರಕಾರ ಖಡಕ್ ಆದೇಶ ಹೊರಡಿಸಿದೆ.
ಆರಂಭಿಕ ಹಂತದಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಬಳಿಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಈ ಯೋಜನೆ ಜಾರಿಯಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ.












Click it and Unblock the Notifications