Get Updates
Get notified of breaking news, exclusive insights, and must-see stories!

ವಾಹನ ಸವಾರರೇ ಎಚ್ಚರ ಇಂದು ಹಾರ್ನ್ ಮಾಡಬೇಡಿ

ಬೆಂಗಳೂರು, ನ.19: ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಪರೂಪವಾಗಿರುವ 'No Horn Please' ಎಂಬ ಸೂಚನಾ ಫಲಕಕ್ಕೆ ಮತ್ತೆ ಶುಕ್ರದೆಸೆ ಬಂದಿದೆ. ಹೌದು ವಾಮನ ಆಚಾರ್ಯ ಎಂಬ ವೈದ್ಯರು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದೇ ತಡ ಒಂದಷ್ಟು ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಹಾರ್ನ್ ರಹಿತ ಸೋಮವಾರ: ಮೊನ್ನೆ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಸದ್ದಡಗಿಸುವಲ್ಲಿ ಯಶಸ್ವಿಯಾದ ಡಾ. ಆಚಾರ್ಯರು ಈಗ ವಾಹನಗಳು ಬಳಸುವ ಕರ್ಕಶ ಹಾರ್ನ್ ಗಳ ಸದ್ದಡಗಿಸಲು 'ಎಚ್ಚರಿಕೆಯ ಹಾರ್ನ್' ಮೊಳಗಿಸಿದ್ದಾರೆ. ಹಾಗಾಗಿ ಇಂದು ಸೋಮವಾರ ಹಾರ್ನ್ ಮಾಡಲೇಬೇಡಿ ಎಂದು ವಾಹನ ಸವಾರರಿಗೆ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

bangalore-to-be-silent-on-mondays-no-horn-pls-kspcb

ಪ್ರಾಯೋಗಿಕವಾಗಿ ಇನ್ನು ಮುಂದೆ ಪ್ರತಿ ಸೋಮವಾರವನ್ನು ಹಾರ್ನ್ ರಹಿತ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೋರಮಂಗಲ, ಯಶವಂತಪುರ, ಜಯನಗರ ಸೇರಿದಂತೆ ಆರಂಭದಲ್ಲಿ ಕೆಲವು ಆಯ್ದ ಪ್ರದೇಶಗಳಲ್ಲಿ ಈ ನೀತಿ ಜಾರಿಗೆ ಬಂದಿದೆ. ಓದುಗರೇ, ನಿಮ್ಮ reaction ಏನು ಎಂಬುದನ್ನು silent ಆಗಿ ತಿಳಿಸಿ.

ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲೆಡೆ ಎಲ್ಲ ದಿನಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ. ಸಿಗ್ನಲ್‌ಗ‌ಳಲ್ಲಿ ಡೆಸಿಬಲ್‌ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ಡೆಸಿಬಲ್‌ ಪ್ರಮಾಣ ತಿಳಿಯಬಹುದಾಗಿದೆ. ಕೋರಮಂಗಲ ಪ್ರದೇಶವು ಬೆಂಗಳೂರಿನಲ್ಲೇ ಅತ್ಯಂತ ಶಬ್ದ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 95 ಡೆಸಿಬಲ್‌ಗಿಂತ ಹೆಚ್ಚು ಡೆಸಿಬಲ್‌ ಹೊಂದಿದೆ. ಆರೋಗ್ಯಕರ ಶಬ್ದದ ಮಟ್ಟವೆಂದರೆ 55 ಡೆಸಿಬಲ್‌ಗಿಂತ ಕಡಿಮೆ ಇರಬೇಕು.

'ಅನಗತ್ಯ ಸ್ಥಳಗಳಲ್ಲಿ ವಾಹನ ಸವಾರರು ಹಾರ್ನ್ ಮಾಡಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಅಲ್ಲದೆ, ಚಿತ್ರ-ವಿಚಿತ್ರ ಶಬ್ದಗಳಿಂದ ನಗರದ ಜನತೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಅನವಶ್ಯಕವಾಗಿ ಹಾರ್ನ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಜಾರಿ ಮಾಡುವುದರಿಂದ ಎಲ್ಲೆಂದರಲ್ಲಿ ಹಾರ್ನ್ ಮಾಡುವುದು ನಿಯಂತ್ರಣಕ್ಕೆ ಬರಲಿದೆ' ಎಂದು ಡಾ. ಆಚಾರ್ಯರು ಹೇಳಿದ್ದಾರೆ.

'ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ನ್ಯಾಯಾಲಯದ 100 ಅಡಿ ಸುತ್ತಮುತ್ತ ಹಾರ್ನ್ ಮಾಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಸಬೇಕು. ರಾತ್ರಿ ವೇಳೆ ಸಂಚಾರ ದಟ್ಟಣೆಯಿಲ್ಲದಿದ್ದರೂ, ಯುವಕರು ಹಾರ್ನ್ ಮಾಡಿ ಕಿರಿಕಿರಿ ಉಂಟು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹಾರ್ನ್ ಮಾಡುವುದನ್ನು ನಿಷೇಧಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಕೆಲವು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವಿದ್ದು, ಮುಂದಿನ ದಿನಗಳಲ್ಲಿ ಆ ಅಸ್ತ್ರವನ್ನು ಬಳಸಲಾಗುವುದು' ಎಂದು ಡಾ. ಆಚಾರ್ಯರು ಎಚ್ಚರಿಸಿದ್ದಾರೆ.

'ಆರ್‌ಟಿಓ ಅಧಿಕಾರಿಗಳಿಗೆ ಹಾರ್ನ್ ಮಾಡುವವರ ವಿರುದ್ಧ ದಂಡ ವಸೂಲಿ ಮಾಡುವಂತೆ ಸಾರಿಗೆ ಇಲಾಖೆಯು ಸೂಚನೆ ನೀಡಿದ್ದು, ತಿಂಗಳಿಗೆ ಇಂತಿಷ್ಟು ದಂಡ ವಸೂಲಿಯ ಟಾರ್ಗೆಟ್‌ ನೀಡಿದೆ. ದಂಡ ವಸೂಲಿಯಿಂದ ಜನರಿಗೆ ಭಯ ಬಂದು ಹಾರ್ನ್ ಮಾಡುವುದು ಕಡಿಮೆ ಮಾಡಲಿದ್ದಾರೆ' ಎಂದು ತಿಳಿಸಿದ ಅವರು, 'ಹಾರ್ನ್ ಕಡಿಮೆ ಮಾಡುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ನ. 31ರವರೆಗೆ ಜಾಥಾ ಮುಂದುವರಿಯಲಿದೆ' ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+