ಅಂತೂ ಉದ್ಯೋಗಿಗಳ ಸಂಬಳ ಏರಿಸಿದ ಇನ್ಫೋಸಿಸ್

ಈ ಸುದ್ದಿಯನ್ನು ಇನ್ಫೋಸಿಸ್ ಸಿಇಓ ಎಸ್.ಡಿ. ಶಿಬುಲಾಲ್ ಅವರು ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. ಸಂಬಳ ಏರಿಕೆಯ ಪ್ರಮಾಣವನ್ನು ಅಧಿಕೃತವಾಗಿ ಘೋಷಿಸಲಿಲ್ಲದಿದ್ದರೂ, ಶೇ.6ರಿಂದ 8ರಷ್ಟು ಏರಿಸಬಹುದೆಂದು ಹೇಳಲಾಗಿದೆ.
ಇದು ಇನ್ಫೋಸಿಸ್ ಸಿಬ್ಬಂದಿಗಳಲ್ಲಿ ಸಂತಸದ ಹೊನಲು ಹರಿಸಿದ್ದರಲ್ಲಿ ಅನುಮಾನವಿಲ್ಲ. ಏಕೆಂದರೆ, ಮೊದಲ ತ್ರೈಮಾಸಿಕ ಫಲಿತಾಂಶ ಬಂದಾಗ ಅಷ್ಟೇನು ಲಾಭ ಗಳಿಸಿದಿದ್ದ ಇನ್ಫೋಸಿಸ್, ಕೇವಲ 20 ಸಾವಿರ ಉದ್ಯೋಗಿಗಳಿಗೆ ಮಾತ್ರ ಸಂಬಳವನ್ನು ಹೆಚ್ಚಿಸಿತ್ತು ಮತ್ತು ಅನೇಕ ಸಿಬ್ಬಂದಿಗಳ ವೇರಿಯೇಬರ್ ಪೇ ಕಟ್ ಮಾಡಿ, ಉದ್ಯೋಗಿಗಳು ಕಿಡಿಕಾರುವಂತೆ ಮಾಡಿತ್ತು.
ಕಂಪನಿ ತೊರೆಯುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು, ಇರುವವರ ಸಂಬಳ ಹೆಚ್ಚಿಸುವ ಮುಖಾಂತರ ಕಂಪನಿ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂಬ ಸಂದೇಶವನ್ನು ಸಾರಲು ಬಯಸುತ್ತೇವೆ ಎಂದು ಸಿಬ್ಬಂದಿ ನೇಮಕಾತಿ ಸಂಸ್ಥೆ ಟೀಮ್‌ಲೀಸ್‌ನ ಸಹಸಂಸ್ಥಾಪಕಿ ಸಂಗೀತಾ ಲಾಲ್ ಹೇಳಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ 2,610 ಉದ್ಯೋಗಿಗಳನ್ನು ಇನ್ಫೋಸಿಸ್ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.
ವ್ಯಾಪಾರ ವಹಿವಾಟು ಏರುಪೇರಾಗುತ್ತಿದ್ದಂತಹ ಸಂದರ್ಭದಲ್ಲಿ, ಅನೇಕ ಕಂಪನಿಗಳು ಉದ್ಯೋಗಿಗಳ ಸಂಬಳವನ್ನು ತುಸುಮಟ್ಟಿಗಾದರೂ ಏರಿಸಿದ್ದರೆ, ಇನ್ಫೋಸಿಸ್ ಪಗಾರವನ್ನು ಏರಿಸಿರಲಿಲ್ಲ. ಇದರಿಂದಾಗಿ ಉದ್ಯೋಗಿಗಳಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಆದರೆ, ಭಡ್ತಿ ನೀಡಿದವರಿಗೆ ಮಾತ್ರ ಸಂಬಳ ಏರಿಸಲಾಗಿತ್ತು. 2009ರಲ್ಲಿ ಕೂಡ ಸಂಬಳ ಏರಿಕೆಯನ್ನು ಮುಂದೂಡಿ, ವ್ಯಾಪಾರ ಮತ್ತಷ್ಟು ಕುದುರಿದಾಗ ಸಂಬಳ ಏರಿಕೆ ಮಾಡಿತ್ತು.
ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ವಿ ಬಾಲಕೃಷ್ಣನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಕೂಡ ಶುಕ್ರವಾರ ಇನ್ಫೋಸಿಸ್ ಪ್ರಕಟಿಸಿದೆ. ಅವರು ರಾಜೀನಾಮೆ ನೀಡಿದ್ದರೂ ನಿರ್ದೇಶಕ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ. ಅವರ ಸ್ಥಾನವನ್ನು ಹಣಕಾಸು ವಿಭಾಗದ ಉಪಾಧ್ಯಕ್ಷ ರಾಜೀವ್ ಬನ್ಸಾಲ್ ಅವರು ತುಂಬಲಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications