ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲು

ಈ ಹಿಂದೆ ತತ್ಕಾಲ್ ಟಿಕೆಟ್ ವಿತರಣೆ ಅವಧಿಯನ್ನು ಈ ಹಿಂದಿನ 48 ಗಂಟೆಗೆ ಬದಲಾಗಿ 24 ಗಂಟೆಗಳಲ್ಲಿ ನೀಡಲು ಭಾರತೀಯ ರೈಲ್ವೆ ತೀರ್ಮಾನಿಸಿತ್ತು. ತತ್ಕಾಲ್ ಟಿಕೆಟ್ ರದ್ದು ಮಾಡಿದರೆ ಹಣವಾಪಸ್ ಮಾಡಲಾಗುವುದಿಲ್ಲ ಎಂದು ಕೂಡಾ ರೈಲ್ವೇ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ, ತತ್ಕಾಲ್ ಟಿಕೆಟ್ ಮುಂಗಡ ಬುಕ್ಕಿಂಗ್ ಬೆಳಗ್ಗೆ 8 ಕ್ಕೆ ಬದಲಾಗಿ 10 ಗಂಟೆ ಟ್ರೈನ್ ಹೊರಡುವ ಸ್ಥಳದಿಂದ 24 ಗಂಟೆ ಮೊದಲು ಕಾಯ್ದಿರಿಸಬಹುದಾಗಿದೆ. ರೈಲ್ವೆ ಇಲಾಖೆ ಈ ಪ್ರಾಯೋಗಿಕ ಯೋಜನೆ ಸದ್ಯದಲ್ಲೆ ಜಾರಿಗೆ ತರುವ ನಿರೀಕ್ಷೆಯಿದೆ.
ತತ್ಕಾಲ್ ಟಿಕೆಟ್ ವಿತರಣೆಯಲ್ಲಿ ಇರುವ ಲೋಪದೋಷಗಳು ಅವ್ಯವಸ್ಥೆಯ ಬಗ್ಗೆ ನಾಗರೀಕರು ಅನೇಕ ದೂರುಗಳನ್ನು ನೀಡಿದ ಬಳಿಕ ತತ್ಕಾಲ್ ವ್ಯವಸ್ಥೆ ಬದಲಾಯಿಸಲು ನಿರ್ಧರಿಸಿದ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಈ ಹೊಸ ವ್ಯವಸ್ಥೆಯಿಂದ ಟಿಕೆಟ್ ಬುಕ್ಕಿಂಗ್ ಕೌಂಟರ್ ಗಳಲ್ಲಿ ಒತ್ತಡ ಕಮ್ಮಿಯಾಗಲಿದೆ. ಸಾಮಾನ್ಯದರ ಹಾಗೂ ತತ್ಕಾಲ್ ಟಿಕೆಟ್ ಎರಡನ್ನು ಏಕಕಾಲಕ್ಕೆ ಕಾಯ್ದಿರಿಸಬಹುದಾಗಿದೆ. ತತ್ಕಾಲ್ ಟಿಕೆಟ್ ಗಾಗಿ ಹೆಚ್ಚು ಹೊತ್ತು ಕಾಯುವ ಅಗತ್ಯವಿರುವುದಿಲ್ಲ. ದೊಡ್ಡ ದೊಡ್ಡ ಕ್ಯೂನಲ್ಲಿ ನಿಂತು ಸಮಯ ವ್ಯರ್ಥವಾಗುವುದನ್ನು ತಪ್ಪಿಸಲಾಗುವುದು.
ಅಲ್ಲದೆ, ಇ ಟಿಕೆಟಿಂಗ್ ವೆಬ್ ತಾಣದ ಟ್ರಾಫಿಕ್ ಕೂಡಾ ನಿಯಂತ್ರಣಕ್ಕೆ ಬರಲಿದ್ದು, ಸುಲಭವಾಗಿ ಟಿಕೆಟ್ ಖರೀದಿಸಬಹುದಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ತತ್ಕಾಲ್ ಎಂಬ ಅಪದ್ಬಾಂದವ: ಯೋಜಿತವಲ್ಲದ, ಅನಿರೀಕ್ಷಿತ ಪ್ರಯಾಣಕ್ಕೆ ತತ್ಕಾಲ್ ವರದಾನವಾಗಿದೆ. ಒಂದು ತತ್ಕಾಲ್ ಪಿಎನ್ಆರ್ ನಲ್ಲಿ ಗರಿಷ್ಠ 4 ಟಿಕೆಟ್ ಮಾತ್ರ ಖರೀದಿಸಬಹುದು. ಐಡೆಂಟೆಟಿ ದಾಖಲೆ ಜೊತೆಗಿದ್ದರೆ ಮಾತ್ರ ತತ್ಕಾಲ್ ಟಿಕೆಟ್ ಪಡೆಯಬಹುದಾಗಿದೆ.
ಚಾಲ್ತಿಯಲ್ಲಿರುವ ಮುಂಗಡ ಬುಕ್ಕಿಂಗ್ ಕೌಂಟರ್ ಗಳ ಜೊತೆಗೆ ಹೆಚ್ಚಿನ ತತ್ಕಾಲ್ ಕೌಂಟರ್ ಗಳನ್ನು ಆರಂಭಿಸಲು ರೈಲ್ವೇ ಇಲಾಖೆ ಚಿಂತಿಸಿದೆ. ಸಿಸಿಟಿವಿ ಕೆಮೆರಾಗಳ ಅಳವಡಿಕೆ, ಟಿಕೆಟ್ ನೀಡುವ ಕ್ಲರ್ಕ್ ಗಳಿಗೆ ಮೊಬೈಲ್ ಬಳಕೆ ನಿಷೇಧ, ಪೊಲೀಸ್ ಗಸ್ತು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದೆ.
ಸದ್ಯಕ್ಕೆ 2677 ರೈಲುಗಳು 1.71 ಲಕ್ಷ ಬರ್ಥ್ ಗಳಿಗೆ ತತ್ಕಾಲ್ ಸೇವೆ ಲಭ್ಯವಿದೆ. 2011-12ರಲ್ಲಿ ತತ್ಕಾಲ್ ಯೋಜನೆಯೊಂದರಿಂದಲೇ ಇಲಾಖೆಗೆ 847 ಕೋಟಿ ರು ಆದಾಯ ಗಳಿಸಿದೆ. ತತ್ಕಾಲ್ ಯೋಜನೆಯ ಜನಪ್ರಿಯತೆ ಹಾಗೂ ಅವವ್ಯವಸ್ಥೆಯನ್ನು ಅಧ್ಯಯನ ನಡೆಸಿರುವ ಇಲಾಖೆ ಅನೇಕ ಬದಲಾವಣೆಗಳನ್ನು ತರಲು ನಿರ್ಧರಿಸಿದೆ.
ಐದು ದಿನಗಳ ಬದಲಿಗೆ 24 ಗಂಟೆಮೊದಲು ಬುಕ್ಕಿಂಗ್ ಅವಕಾಶ, ವೆಬ್ ಏಜೆಂಟ್ ಗಳಿಗೆ ಮೊದಲ ಒಂದು ಗಂಟೆ ಬುಕ್ಕಿಂಗ್ ನಿರ್ಬಂಧ ಮುಂತಾದ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಈಗ ಟಿಕೆಟ್ ಬುಕ್ಕಿಂಗ್ ಅವಧಿ ಬದಲಾವಣೆಗೆ ಮುಂದಾಗಿದೆ.(ಪಿಟಿಐ)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications