Get Updates
Get notified of breaking news, exclusive insights, and must-see stories!

ಜಗನ್ ಕೇಸ್ : ಬಿಸಿಸಿಐ ಶ್ರೀನಿವಾಸನ್ ಗೆ ಸಿಬಿಐ ಸಮನ್ಸ್

CBI Summons N Srinivasan
ಹೈದರಾಬಾದ್, ಜೂ.8: ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಗಣ್ಯರ ಹೆಸರುಗಳು ಬಹಿರಂಗಗೊಳ್ಳತೊಡಗಿದೆ. ಸಿಬಿಐ ತಂಡ ತನ್ನ ಮುಂದಿನ ದಾಳವನ್ನು ಉರುಳಿಸಿದ್ದು, ಬೋರ್ಡ್ ಆಫ್ ಕ್ರಿಕೆಟ್ ಇನ್ ಇಂಡಿಯಾ(BCCI) ಅಧ್ಯಕ್ಷ ಹಾಗೂ ಇಂಡಿಯಾ ಸಿಮೆಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್ ಶ್ರೀನಿವಾಸನ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಜಗನ್ ಮೋಹನ್ ರೆಡ್ಡಿ ಅವರ ಒಡೆತನದ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಉದ್ಯಮಿಗಳ ಮೇಲೆ ಸಿಬಿಐ ಕಣ್ಣಿರಿಸಿದೆ. ಶ್ರೀನಿವಾಸನ್ ಅವರು ಜಗನ್ ಅವರ ಸಿಮೆಂಟ್ ಕಂಪನಿಯಲ್ಲಿ ತೊಡಗಿಸಿರುವ ಬಂಡವಾಳದ ಬಗ್ಗೆ ಸಿಬಿಐ ಪ್ರಶ್ನಿಸಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಟಿ ಸಚಿವ ಪೊನ್ನಲಾ ಲಕ್ಷ್ಮಯ್ಯ ಅವರನ್ನು ಸಿಬಿಐ ಪ್ರಶ್ನಿಸಿದೆ. ವೈಎಸ್ ರಾಜಶೇಖರ ರೆಡ್ಡಿ ಅವರ ಅಧಿಕಾರವಿದ್ದ ಕಾಲದಲ್ಲಿ 2004-2009 ಸರ್ಕಾರಿ ಆದೇಶ ಹೊರಡಿಸಿದ ತಪ್ಪಿಗೆ ಲಕ್ಷ್ಮಯ್ಯ ಅವರು ಸಿಬಿಐ ಬಲೆಗೆ ಬಿದ್ದಿದ್ದಾರೆ. ರಾಜಶೇಖರ್ ರೆಡ್ಡಿ ಕಾಲದಲ್ಲಿ ನೀರಾವರಿ ಸಚಿವರಾಗಿದ್ದ ಲಕ್ಷ್ಮಯ್ಯ ಅವರು ಸಿಮೆಂಟ್ ಕಂಪನಿಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡಿದ ಆರೋಪ ಹೊತ್ತಿದ್ದಾರೆ.

ಜಗನ್ ಮೋಹನ್ ರೆಡ್ಡಿ ಅಲ್ಲದೆ ಜಗನ್ ಅವರ ಆರ್ಥಿಕ ಸಲಹೆಗಾರ ವಿ ವಿಜಯ್ ಸಾಯಿ ರೆಡ್ಡಿ, ಮಾಜಿ ಆಂಧ್ರ ಸಚಿವ ಮೋಪಿದೇವಿ ವೆಂಕಟರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಹಾಗೂ ಸರ್ಕಾರಿ ಅಧಿಕಾರಿ ಕೆವಿ ಬ್ರಹ್ಮಾನಂದ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ನಡುವೆ ಜಗನ್ ಮೋಹನ್ ರೆಡ್ಡಿ ಅವರ ನ್ಯಾಯಾಂಗ ಬಂಧನ ಅವಧಿ ಜೂ.11ರ ತನಕ ಇರುವುದರಿಂದ ಜಗನ್ ಚಂಚಲಗುಡ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಐದು ದಿನಗಳ ಕಾಲ ಸಿಬಿಐ ವಶದಲ್ಲಿದ್ದ ಜಗನ್ ಅವರಿಗೆ ಗುರುವಾರ ಮುಕ್ತಿ ಸಿಕ್ಕಿತ್ತು. ಆದರೆ, ಇನ್ನೂ ಮೂರು ದಿನಗಳ ಕಾಲ ವಿಚಾರಣೆಗೆ ಜಗನ್ ಅವರನ್ನು ಒದಗಿಸುವಂತೆ ಸಿಬಿಐ ತಂಡ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+