ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ತಯಾರಿಕೆ ವೃತ್ತಿ ಹಾಗೂ ಜೀವನಾಧಾರವಾದರೆ!!

By ಮಾಹಿತಿ ಸಂಗ್ರಹ ಬರಹ: ಮಲೆನಾಡಿಗ
|
Google Oneindia Kannada News

ಬೆಂಗಳೂರಿನಲ್ಲಿ ಸ್ಫೋಟಗೊಂಡ ಸ್ಥಳಗಳಿಗೆ ದೆಹಲಿಯ ವಿಶೇಷ ತಜ್ಞರ ತಂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಹಲವಾರು ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಅಮೋನಿಯಂ ನೈಟ್ರೈಟ್ ಬಳಸಲಾಗಿದೆ ಎಂದು ತಿಳಿದು ಬಂದಿದೆ. ಬಾಂಬ್ ತಯಾರಿಸಿದವರು ವೃತ್ತಿಪರರು ಎನ್ನಲಾಗಿದೆ ಎಂದು ಸುದ್ದಿ ಹೊರಬಂದ ಮೇಲೆ .. ಬಾಂಬ್ ತಯಾರಿಕೆಯ ಸುತ್ತಾ ಒಂದು ನೋಟ ಬೀರಿದಾಗ ದೊರೆತ ಮಾಹಿತಿಯ ಸಾರ ಇಲ್ಲಿದೆ.

ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್

ಹಲೋ, .......?
ಹ್ಞು....

ಹೇಳಿ ಬಾಂಬ್ ತಯಾರಿಕೆಗೆ ಹೇಗೆ ಶುರು ಮಾಡಿದ್ದು?
-ಈ ಮುಂಚೆ ನಮ್ಮ ತಂದೆ ಈ ದಂಧೆಯಲ್ಲಿದ್ದ ನಾನು ಈಗ ಇಳಿದಿದ್ದೇನೆ. ಬೆಂಗಳೂರಿನಲ್ಲಿ ಸಿಡಿದ ಬಾಂಬ್ ತರಹ ನೂರಾರು ಬಾಂಬ್ ತಯಾರಿಸಿದ್ದೇನೆ.

ಬಾಂಬ್ ತಯಾರಿಸುವುದು ಅಷ್ಟು ಸುಲಭವೇ?
-ಉತ್ತರಪ್ರದೇಶ ಮೂಲದ ಯುವಕನೊಬ್ಬ ಈ ರೀತಿಯ ಬಾಂಬ್ ತಯಾರಿಸಲು 7 ನಿಮಿಷ ಸಾಕು ಎಂದು ಹೇಳಿದಾಗ. ಉಗುಳು ನುಂಗುವಂತಾಯ್ತು.
ಆತ ಮುಂದುವರೆಸುತ್ತಾ.. ಇದಕ್ಕೆ ತಗಲುವ ವೆಚ್ಚ ಕೇವಲ 25 ರು. ಬಾಂಬ್ ತಯಾರಿಸಿದ ಮೇಲೆ ಅದನ್ನು 300 ರಿಂದ 500 ರು.ಗಳಿಗೆ ಮಾರಲಾಗುತ್ತದೆ. ಇದೇ ನಮ್ಮ ಕಸುಬು ಇದರಲ್ಲಿ ಯಾವ ಮತದ ಬೆಂಬಲ ಬೇಕಿಲ್ಲ. ಹೊಟ್ಟೆ ಹೊರೆಯಲು ಡ್ರಗ್ಸ್ ತೆಗೆದುಕೊಳ್ಳಲು ಕೈ ಖರ್ಚಿಗೆ ರೊಕ್ಕ ಸಿಕ್ಕರೆ ಸಾಕು.

ಸಾಮಾನ್ಯವಾಗಿ ಎಲ್ಲಿ ನಡೆಯುತ್ತೆ ತಯಾರಿ?
-ಬಾಂಬ್ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಮನೆಯ ಬದಲು ಬಯಲು ಪ್ರದೇಶವನ್ನು ಆರಿಸಿಕೊಳ್ಳುತ್ತೇವೆ. ನಿರ್ಜನವಾದ ನೀರವ ರಾತ್ರಿಗಳಲ್ಲಿ ಹೆಸರಾಂತ ತಂಬಾಕು ಕಂಪನಿಯ ಡಬ್ಬಿಗಳಲ್ಲಿ ರಾಸಾಯನಿಕಗಳನ್ನು ಒಯ್ಯುತ್ತೇವೆ. ಈ ಡಬ್ಬಗಳನ್ನೇ ಹೊದಿಕೆಯಾಗಿ ಮಾರ್ಪಾಟುಮಾಡಲಾಗುತ್ತದೆ. ಸಾಮಾನ್ಯವಾಗಿ ಸಲ್ಫರ್(ರಂಜಕ), ಬೆಳ್ಳಿ ಬಣ್ಣದ ಪೋಟ್ಯಾಸಿಯಂ ನೈಟ್ರೈಟ್ ಬಳಸಲಾಗುವುದು ಎಲ್ಲವನ್ನು ಸಮಪ್ರಮಾಣದಲ್ಲಿ ಮಿಶ್ರಣಮಾಡಿ, ಆಮ್ಲಗಳನ್ನು ಸೇರಿಸಿ, ಉಪ್ಪು ಸೇರಿಸಿ ಒಣಗಿಸಲಾಗುತ್ತದೆ. ಸ್ಫೋಟಗೊಂಡಾಗ ಇದರಿಂದ ಜನರಿಗೆ ಕಣ್ಣು ಉರಿ ಶುರುವಾಗುತ್ತದೆ.

crude bombs

ಕೆಮಿಕಲ್ ಬಳಸುತ್ತೀರಾ ರಿಸ್ಕ್ ಅಲ್ವಾ?
-ಹ್ಞು.... ಬಾಂಬ್ ತಯಾರಿಸುವುದು ತುಂಬಾ ರಿಸ್ಕ್ , ಬಾಂಬ್ ಮಾಡುವಾಗ ಸ್ವಲ್ಪ ಕೂಡ ಕೈ ಅಲುಗಬಾರದು. ಇಲ್ಲವಾದರೆ, ಸ್ಫೋಟಗೊಂಡು ನಮಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು. (ಆತ ಈ ವಾಕ್ಯ ಹೇಳುವಾಗ ನನಗೆ ಅತಿಥಿ ಚಿತ್ರದಲ್ಲಿ ಬಾಂಬ್ ತಯಾರಿಸಲು ಹೋಗಿ ಕಾಲು ಮುರಿದು ಕೊಳ್ಳುವ ಪ್ರಕಾಶ್ ರೈ ಅಭಿನಯದ ದೃಶ್ಯ ನೆನಪಿಗೆ ಬಂತು) ಇದಕ್ಕಾಗಿ ನೀರಿನ ಬಕೀಟು ಬಳಿಯೇ ಅಂತಿಮ ಹಂತದ ಬಾಂಬ್ ರೂಪ ನೀಡಲಾಗುತ್ತದೆ.

ಪೊಲೀಸ್‌ಗೆ ಮಾಹಿತಿ ಸಿಗಲ್ವಾ, ತಡೆಯೋಕೆ ಸಾಧ್ಯವಿಲ್ವಾ?
-ಬೆಂಗಳೂರಿನಲ್ಲಿ ಬಳಸಿದಂತಹ ಅಲ್ಪಶಕ್ತಿಯ ಬಾಂಬ್‌ಗಳ ತಯಾರಿಕೆಯನ್ನು ತಡೆಗಟ್ಟುವುದು ಸ್ವಲ್ಪ ಕಷ್ಟವೇ. ಕಾರಣ, ಇದು ಬೃಹತ್ ಪ್ರಮಾಣದಲ್ಲಿ ಒಂದೆಡೆ ಕೂತು ಮಾಡುವ ಕ್ರಿಯೆಯಲ್ಲ. ಕೆಲ ನಿಮಿಷಗಳಲ್ಲಿ ತಯಾರಿಸಿ, ಸ್ಫೋಟಕ್ಕೆ ಅಣಿಮಾಡಬಹುದಾದ ಆಟಿಕೆ.

ಕೆಮಿಕಲ್ ಬಿಟ್ಟು ಬೇರೆ ಏನು ಉಪಯೋಗಿಸುತ್ತೀರಾ?
-ಕಚ್ಚಾ ಬಾಂಬ್ ತಯಾರಿಕೆಗೆ ಇಂತದ್ದೇ ಬೇಕು ಅಂತೇನೂ ಇಲ್ಲ. ಮುರಿದ ಗೋಲಿಗಳು, ಮೊಳೆ, ಕಬ್ಬಿಣದ ಚೂರು, ನಳಿಕೆ, ನಟ್ ಬೋಲ್ಟ್, ಗಾಜಿನ ತುಂಡು ಇತ್ಯಾದಿ ಬಳಕೆಯಾಗುತ್ತದೆ. ಕೆಮಿಕಲ್ ಕೆಳಗಡೆ ಇಟ್ಟು ಈ ವಸ್ತುಗಳನ್ನು ಹೊರ ಪದರದಲ್ಲಿ ಬಳಸಲಾಗುತ್ತದೆ, ಕಾರ್ ಬಾಂಬ್ ತಯಾರಿಸುವಾಗ ಪೆಟ್ರೋಲ್ ಬೆರೆತ ಹತ್ತಿಯನ್ನು ಬಳಸುವುದುಂಟು. ಎಲೆಕ್ಟ್ರಿಕ್ ಕೇಬಲ್ ವಯರ್‌ಗಳನ್ನು ಬಳಸಿ ಈ ಎಲ್ಲಾವನ್ನು ಬಿಗಿಯಾಗಿ ಸುತ್ತಿಡಲಾಗುತ್ತದೆ. ಜಿಲೇಟನ್ ಕಡ್ಡಿಯನ್ನೂ ಬಳಸಲಾಗುತ್ತದೆ. ಟೈಮರ್ ಬಳಕೆ ಇದ್ದದ್ದೇ. ಕಾಸಿಗೆ ತಕ್ಕಂತೆ ಬಾಂಬ್ ತಯಾರಿಸಲಾಗುತ್ತದೆ.

ಜೀವನೋಪಾಯಕ್ಕೆ ಇನ್ನೇನೂ ಮಾಡಿಕೊಂಡಿದ್ದೀರಾ? ಈ ಕೆಲಸ ಕೆಟ್ಟದ್ದು ಅನ್ನಿಸಿಲ್ವಾ ಎಂದೂ?
-ನನಗೂ ಕಳೆದ ವರ್ಷ ಮದುವೆ ಆಯ್ತು. ಈಗ ಸಣ್ಣ ಹೆಣ್ಣು ಮಗು ಇದೆ. ಕೆಟ್ಟ ಕೆಲಸ ಅಂತ ಅನ್ನಿಸಿದರೂ, ಹೊಟ್ಟೆ ಹೊರೆಯೊಕೆ ಬೇರೆ ವಿದ್ಯೆ ತಿಳಿದಿಲ್ಲ. ಕೆಟ್ಟ ಜನರ ಸಹವಾಸ ವಂಶ ಪಾರಂಪರ್ಯವಾಗಿ ಬಂದು ಬಿಟ್ಟಿದೆ. ಕೆಲಸ ಬಿಡುವ ಯೋಚನೆ ಕೂಡ ಇದೆ.

ಬಾಂಬ್ ತಯಾರಿಕೆ ಈ ದಿನಗಳಲ್ಲಿ ಮಾಮೂಲಿ ಆಗಿ ಬಿಟ್ಟಿದೆ. ಎಲ್ಲೋ ಪಾಳುಬಿದ್ದ ಮನೆಗಳಲ್ಲಿ ವಾಸಮಾಡಿಕೊಂಡು ಜೀವಿಸುವ ಗತಿ ಬಂದಿಲ್ಲ. ಎಲ್ಲಾ ಜನರ ನಡುವೆ ಇದ್ದು ಇದನ್ನು ಒಂದು ಕೆಲಸದಂತೆ ಮಾಡಿಕೊಂಡು ಹೋಗುವವರು ಇದ್ದಾರೆ. ಕೆಲಸ ಸಿಕ್ಕಾಗ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಅಲ್ಲೆಲ್ಲೋ ಬೆಂಕಿ ಬಿದ್ದಾಗ ನೀವು ವರದಿ ಮಾಡದೆ ಸುಮ್ಮನೆ ಮರುಕಪಡುವುದಿಲ್ಲ ಅಂದುಕೊಂಡಿದ್ದೀನಿ. ಹಾಗೆ ಬಾಂಬ್ ತಯಾರಿಕೆ ನನಗೆ ವೃತ್ತಿಯೂ ಹೌದು, ಜೀವನಾಧಾರವೂ ಹೌದು.

ಇನ್ನೂ ಹೆಚ್ಚೆನೂ ಕೇಳಲು ತೊಚದೆ ಎರಡೂ ಬದಿಯಲ್ಲಿ ಮೌನ ಆವರಿಸಿದಾಗ. ಫೋನ್‌ಗಳು ನಿಷ್ಕ್ರಿಯಗೊಂಡವು.

English summary
Here is an interview with the person who prepares crude bombs to earn his bread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X