ಗುಡಿ: ಜಾನಪದ ಕಲಾಕೃತಿಗಳ ಮಾರಾಟ ಮಳಿಗೆ

gudi artಬೆಂಗಳೂರು, ಮಾ.6: "ಟೆರ ಕೋಟಾ ವೀಕ್" ಹೆಸರಿನಡಿ ಆವೆಮಣ್ಣಿನಿಂದ (terra cotta) ತಯಾರಿಸಲಾದ ಮನೆಯ, ಕಚೇರಿಯ ಒಳಾಂಗಣ ಮತ್ತು ಹೊರಾಂಗಣದ ಅಂದವನ್ನು ಹೆಚ್ಚಿಸುವ ಸುಂದರ ಕಲಾಕೃತಿಗಳು ಮತ್ತು ದಿನೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾರ್ಚ್ 6ರಿಂದ 13ರ ತನಕ ಕುಭಂಸ್ ಅವರ ಸಹಯೋಗದೊಂದಿಗೆ "ಗುಡಿ" ಸಂಸ್ಥೆ ಏರ್ಪಡಿಸಿದೆ.

ಅಷ್ಟೇ ಅಲ್ಲದೇ ಎಂದಿನಂತೆ ನಮ್ಮ ರಾಜ್ಯದ ಮೈಸೂರು ಶೈಲಿಯ ಮರದ ಕೆತ್ತನೆಗಳು, ಚನ್ನಪಟ್ಟಣದ ಬೊಂಬೆಗಳು, ಮಧ್ಯ ಪ್ರದೇಶದ ಪ್ರಖ್ಯಾತ ಬಸ್ತಾರ್ ನ ಲೋಹದಿಂದ ಮಾಡಿದ ಕುಸುರಿ ವಸ್ತುಗಳು,ರಾಜಸ್ತಾನದ ಸೂಕ್ಷ್ಮ ಕುಸುರಿ ವಸ್ತುಗಳು (miniature), ಆಂಧ್ರ ಪ್ರದೇಶದ ಚರ್ಮದ ಬೊಂಬೆ ಗಳು, ಮಹಿಳೆಯರಿಗೆ ಮತ್ತು ಪುರುಷರಿಗೆ ಕೈಮಗ್ಗದ ವಸ್ತ್ರಗಳು ,ವಿಶೇಷವಾದ ಒಡವೆಗಳು , ಪ್ರಾಚೀನ ವಸ್ತುಗಳು , ಮನೆಯ ಶೋಭೆ ಹೆಚ್ಚಿಸುವ ಪುರಾತನ ಕರಿಮರದ ಸ್ತಂಭಗಳು ಇತ್ಯಾದಿ ದೊರೆಯುತ್ತವೆ.

"ಗುಡಿ" ದೇಶದ ಎಲ್ಲ ರಾಜ್ಯಗಳ ಆದಿವಾಸಿ ಮತ್ತು ಜಾನಪದ ಕಲಾಕೃತಿಗಳ ಮಾರಾಟ ಮಳಿಗೆ. ''ಗುಡಿ'' ಕಲಾಕೃತಿಗಳ ಮಾರಾಟಕ್ಕೆ ಮಿತಿಗೊಳ್ಳದೆ ಸಮುದಾಯದ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವ ಬದ್ದತೆಯನ್ನು ಹೊಂದಿದೆ.

ಸ್ಥಳ:
''ಗುಡಿ''
ನಂ. 3352, ಕೆ.ಆರ್.ರಸ್ತೆ, ಬಿಎಸ್‌ಕೆ 2ನೇ ಹಂತ,
ಬೆಂಗಳೂರು-560 070
ದೂರವಾಣಿ : 2676 1122
ಮೊಬೈಲ್ ಸಂಖ್ಯೆ : 94480 94494

(ದಟ್ಸ್‌ಕನ್ನಡ ಸಭೆ-ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+