ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಪ್ರಕಟ

ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಪ್ರಕಟ
ಕೆರೆಮನೆ ಮಹಾಬಲ ಹೆಗಡೆ ಮತ್ತು ಡಾ। ಹಿ.ಶಿ. ರಾಮಚಂದ್ರೇಗೌಡ ಅವರಿಗೆ ವಿಶೇಷ ಪ್ರಶಸ್ತಿ

ಬೆಂಗಳೂರು : 2004ನೇ ಸಾಲಿನ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಅಕಾಡೆಮಿಯ ವಿಶೇಷ ಪ್ರಶಸ್ತಿಗಳು ಕೆರೆಮನೆ ಮಹಾಬಲ ಹೆಗಡೆ ಮತ್ತು ಡಾ। ಹಿ.ಶಿ. ರಾಮಚಂದ್ರೇಗೌಡ ಅವರಿಗೆ ಸಂದಿವೆ.

ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಬಿ.ಎಸ್‌. ಗದ್ದಿಗಿಮಠ ಪ್ರಶಸ್ತಿಯನ್ನು ಕೆರಮನೆ ಮಹಾಬಲ ಹೆಗಡೆ ಅವರಿಗೆ, ಜಾನಪದ ರಂಗದಲ್ಲಿನ ಸಾಧನೆಗಾಗಿ ಜೀಶಂಪ ಪ್ರಶಸ್ತಿಯನ್ನು ಹಿ.ಶಿ.ರಾಮಚಂದ್ರೇಗೌಡ ಅವರಿಗೆ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೆಪ್ಟೆಂಬರ್‌ ಕಡೆಯ ವಾರದಲ್ಲಿ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಜಾನಪದ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಕಾಡೆಮಿಯು ಅಕ್ಟೋಬರ್‌ನಲ್ಲಿ ಧಾರವಾಡದಲ್ಲಿ ಬೀಸು ಕಂಸಾಳೆ ಮತ್ತು ಸವದತ್ತಿಯಲ್ಲಿ ಚೌಡಿಕೆ ಕುರಿತು ತರಬೇತಿ ಕಾರ್ಯಾ ಗಾರ ನಡೆಸಲಿದೆ ಎಂದು ಶಂಭು ಹೆಗಡೆ ತಿಳಿಸಿದ್ದಾರೆ.

ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು :

ಕರಗ ಕುಣಿತ ಕಲಾ ಪ್ರಕಾರ - ಬೆಂಗಳೂರು ನಗರದ ಚೂಡಪ್ಪ
ಮೂಡಲಪಾಯ ಪ್ರಕಾರ - ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುನಿಬಸಪ್ಪ
ಭಾಗವತ ತತ್ವಪದ ಪ್ರಕಾರ - ಕೋಲಾರ ಜಿಲ್ಲೆಯ ವೆಂಕಟರಮಣಪ್ಪ
ಬುಡಕಟ್ಟು ಕಾವ್ಯವಿಭಾಗ - ತುಮಕೂರಿನ ಲಕ್ಕವನಹಳ್ಳಿ ಗೊಲ್ಲರಹಟ್ಟಿ ನಿಂಗಜ್ಜ
ಕೋಲಾಟ ಪ್ರಕಾರ - ಚಿತ್ರದುರ್ಗ ಜಿಲ್ಲೆಯ ಗಂಗಾಧರಪ್ಪ ಪಾಳ್ಯ
ತಾಳಮದ್ದಳೆ ಪ್ರಕಾರ - ಶಿವಮೊಗ್ಗ ಜಿಲ್ಲೆಯ ಎಂ.ಆರ್‌. ಲಕ್ಷ್ಮೀನಾರಾಯಣ
ಲಾವಣಿ ಪ್ರಕಾರ - ದಾವಣಗೆರೆಯ ಯುಗಧರ್ಮ ರಾಮಣ್ಣ
ಜನಪದ ಕತೆಗಾರ ವಿಭಾಗ -ಮೈಸೂರು ಜಿಲ್ಲೆಯ ದುಂಡಪ್ಪ
ಸೋಬಾನೆ - ಮಂಡ್ಯ ಜಿಲ್ಲೆಯ ಸಾಕಮ್ಮ
ಯಕ್ಷಗಾನ -ದಕ್ಷಿಣ ಕನ್ನಡ ಜಿಲ್ಲೆಯ ಕೆ. ಗೋವಿಂದಭಟ್ಟ
ಉಮ್ಮತ್ತಾಟ ಪ್ರಕಾರ - ಕೊಡಗು ಜಿಲ್ಲೆಯ ಬಾದುಮಂಡ ಕಾಮವ್ವ ಮುದ್ದಪ್ಪ
ವೀರಗಾಸೆ - ಚಿಕ್ಕ ಮಗಳೂರಿನ ಬಿ.ಕೆ. ಶಿವನಂಜಪ್ಪ
ಕರಾಪಲಮೇಳ ಪ್ರಕಾರ - ಹಾಸನದ ಚೆನ್ನಪ್ಪ
ತಂಬೂರಿಪದ ಪ್ರಕಾರ - ಚಾಮರಾಜನಗರದ ಬಸವಯ್ಯ
ಮದ್ದಳೆವಾದನ - ಉಡುಪಿ ಜಿಲ್ಲೆಯ ರಾಮಚಂದ್ರಭಟ್ಟ ಉಪ್ಪುಂದ
ಸಣ್ಣಾಟ - ಬೆಳಗಾವಿ ಜಿಲ್ಲೆಯ ರಾಯಗೌಡ ಅಪ್ಪರಾಯಗೌಡ ಪಾಟೀಲ
ಭಾಗವತರು ಪ್ರಕಾರ - ಉತ್ತರ ಕನ್ನಡ ಜಿಲ್ಲೆಯ ಕೊಪ್ಪದಮಕ್ಕಿ ಈರಪ್ಪ ಭಾಗವತ
ಹಾಡುಗಾರಿಕೆ -ಧಾರವಾಡದ ಕಾಳವ್ವ ಹೊಂಗಲ್‌
ಕಸೂತಿ - ಬಿಜಾಪುರದ ಜಕ್ಕವ್ವ ಬಗಲಿ
ಶಹನಾಯಿ ಪ್ರಕಾರ - ಹಾವೇರಿಯ ಹನುಮಂತಪ್ಪ ಭಜಂತ್ರಿ
ದೊಡ್ಡಾಟ ಪ್ರಕಾರ - ಗದಗ ಜಿಲ್ಲೆಯ ಸಿದ್ದಪ್ಪ ಮುದುಕಪ್ಪ ಮೇದಾರ,
ಗೊಂದಲಿಕೆ ಪ್ರಕಾರ - ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಅಂಬಾಜಿ ಸುಗತೇಕರ್‌
ಡೊಳ್ಳು ವಿಭಾಗ - ಗುಲ್ಬರ್ಗಾದ ಶ್ರೀಮಂತ ಕೆ. ಅಲ್ದಿ
ಹಾಡುಗಾರಿಕೆ - ಬೀದರ್‌ ಜಿಲ್ಲೆಯ ನಬಿಲಾಲ್‌
ತಮಟೆ ಪ್ರಕಾರ - ರಾಯಚೂರಿನ ಲಚ್ಮಣ್ಣ ಪೂಜಾರ್‌
ಬಯಲಾಟ ಸಾರಥಿ ವಿಭಾಗ - ಬಳ್ಳಾರಿ ಜಿಲ್ಲೆಯ ಕೆ. ಪಂಪಾಪತಿ
ತೊಗಲುಗೊಂಬೆ ಆಟ - ಕೊಪ್ಪಳ ಜಿಲ್ಲೆಯ ಭೀಮವ್ವ ದೊಡ್ಡಬಾಳಪ್ಪ ಕಿಳ್ಳೆಕ್ಯಾತರ
ವೇಷ ಭೂಷಣ ನಿರ್ಮಾಣ ವಿಭಾಗ - ಉತ್ತರ ಕನ್ನಡದ ದೇವಿ ಗಜಾನನ ವೀರಭದ್ರ ಬಂಡಾರಿ
ಹೊರನಾಡ ಕಲಾವಿದರು ವಿಭಾಗ - ಮದೂರು ಗಣಪತಿರಾವ್‌
ಜನಪದ ವೈದ್ಯ ವಿಭಾಗ - ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಸಿರುವ ಹುಣಸೂರಿನ ಮಾಸ್ತಮ್ಮ

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+