ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಗೆ ಸಿದ್ಧಗೊಂಡಿದೆ ಹೆಬ್ಬೂರು ಶ್ರೀಚಕ್ರ ಕಾಮಾಕ್ಷಿ ದೇಗುಲ

By ಎಚ್.ಎಸ್.ವಿನಯ್
|
Google Oneindia Kannada News

ನವರಾತ್ರಿ ಇನ್ನೇನು ಸನಿಹದಲ್ಲಿದೆ, ನಾಡಿನ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ನವರಾತ್ರಿ ಆಚರಿಸುತ್ತಾರೆ. ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲೂ ವಿಜೃಂಬಣೆಯಿಂದ ಆಚರಣೆ ಆಗುತ್ತದೆ. ಇಲ್ಲಿನ ಕಾಮಾಕ್ಷಿ ದೇಗುಲದಲ್ಲಿ ಚಟುವಟಿಕೆ ಮತ್ತೂ ಹೆಚ್ಚುತ್ತದೆ. ರಾಜ್ಯದ ನಾನಾ ಭಾಗಗಳಿಂದ ಬಂದು ಇಲ್ಲಿ ಪೂಜೆ ಮಾಡುತ್ತಾರೆ.

15ನೇ ಶತಮಾನದಲ್ಲಿ ಅದ್ವೈತ ಪರಂಪರೆ ಯತಿಗಳಾದ ಕೋದಂಡರಾಮಾಶ್ರಮ ಸ್ವಾಮಿಗಳು ಪೂಜಿಸಿದ ಕಾಮಾಕ್ಷಿ ಶಾರದಾಂಬೆ ನೆಲೆನಿಂತ ದೇಗುಲ ಇಲ್ಲಿದೆ. ಇಲ್ಲಿನ ಇನ್ನೊಂದು ವಿಶೇಷ ಅಂದರೆ ಮೇರು ಪ್ರಸ್ತಾರ ಚಿದಂಬರ ಶ್ರೀಚಕ್ರ. 10 ಅಂಗುಲ ಎತ್ತರ, 12 ಅಂಗುಲ ಅಗಲ, 12 ಅಂಗುಲ ಉದ್ದವಿರುವ ಇಲ್ಲಿನ ಶ್ರೀಚಕ್ರವನ್ನು ನುರಿತ ತಂತ್ರಾಗಮ ನಿಪುಣರೇ ಮಾಡಿದ್ದಾರೆ ಎಂಬುದು ನೋಡಿದ ತಕ್ಷಣವೇ ತಿಳಿಯುತ್ತದೆ.[ಮೈಸೂರಿನ ಅರಮನೆಗಳ ಇತಿಹಾಸ ಗೊತ್ತಾ?]

ಈ ಶ್ರೀಚಕ್ರದಲ್ಲಿ ಬಿಂದು, ತ್ರಿಕೋಣ, ಪಂಚಕೋಣ, ಅಷ್ಟಕೋಣ, ದ್ವಾದಶಕೋಣ, ಅಷ್ಟಾದಶ ಕೋಣ, ಪಂಚವಿಂಶತಿ ಕೋಣ ಹಾಗೂ ಪಂಚತ್ರಿಂಶತ್ ಕೋಣಗಳಿವೆ. ಅಲ್ಲದೆ ಇದಕ್ಕೆ ಕೂರ್ಮ ಪೀಠವಿದ್ದು, ಅದರ ಮೇಲೆ ಅಷ್ಟ ದಿಗ್ಗಜಗಳು, ಅಷ್ಟ ದಿಗ್ನಾಗಗಳು, ಅಷ್ಟ ಶಕ್ತಿಗಳು ಇವೆ.

ಕಮಲ ದಳ, ಸ್ವರ್ಣ ಕಳಶ

ಕಮಲ ದಳ, ಸ್ವರ್ಣ ಕಳಶ

ಭೂಪುರ ಮತ್ತು ಏಳು ಆವರಣಗಳಲ್ಲಿ 35, 25, 22, 18, 12, 8, 5ರಂತೆ ಕಮಲದ ದಳಗಳು ಮತ್ತು ಸ್ವರ್ಣಕಳಶ ರೂಪದ ಬಿಂದುವಿನ ರೀತಿಯ ರಚನೆ ಇವೆ. ಈ ದೇಗುಲವೂ ಶ್ರೀಚಕ್ರ ಮಾದರಿಯಲ್ಲೇ ಇದೆ. ಕಾಮಾಕ್ಷಿ ವಿಗ್ರಹ ಇರುವ ಪೀಠವೂ ಶ್ರೀಚಕ್ರ ಮಾದರಿಯಲ್ಲೇ ನಿರ್ಮಿಸಲಾಗಿದೆ ಮತ್ತು ಪಚ್ಚೆಯ ಮತ್ತೊಂದು ಶ್ರೀಚಕ್ರಕ್ಕೆ ದಿನವೂ ಪೂಜೆ ನಡೆಯುತ್ತದೆ.

ವಿವಿಧ ಹೋಮ, ವಿಶೇಷ ಪೂಜೆ

ವಿವಿಧ ಹೋಮ, ವಿಶೇಷ ಪೂಜೆ

ಮಹಾಲಯ ಅಮಾವಾಸ್ಯೆ ಅಮ್ಮನವರಿಗೆ ನವಕಾಭಿಷೇಕ, ದುರ್ಗಾಹೋಮದಿಂದ ಪ್ರಾರಂಭವಾಗಿ ಒಂಬತ್ತು ದಿನವೂ ವಿವಿಧ ಹೋಮ, ವಿಶೇಷ ಪೂಜೆಗಳು ನಡೆಯುತ್ತವೆ. ಲಲಿತಾ ಪಂಚಮಿಯಂದು ಲಲಿತಾಹೋಮ, ದುರ್ಗಾಷ್ಟಮಿಯಂದು ದುರ್ಗಾ ಹೋಮಗಳು ನಡೆಯುತ್ತವೆ. ಅಷ್ಟಮಿ ಹಾಗೂ ಪಂಚಮಿ ಹೊರತುಪಡಿಸಿ ಎಲ್ಲ ದಿನವೂ ಚಂಡಿಕಾ ಹೋಮ ನಡೆಯುತ್ತದೆ.

ರಸ್ತೆಯೂ ಚೆನ್ನಾಗಿದೆ

ರಸ್ತೆಯೂ ಚೆನ್ನಾಗಿದೆ

ಇನ್ನು ಹೆಬ್ಬೂರಿಗೆ ತುಮಕೂರಿನ ಕಡೆಯಿಂದ ಬಂದರೆ ಇಪ್ಪತ್ಮೂರು ಕಿ.ಮೀ ಆಗುತ್ತದೆ. ಇನು ಕುಣಿಗಲ್ ಕಡೆಯಿಂದ ಬರುವುದಾದರೆ ಹದಿನೈದು ಕಿ.ಮೀ. ಎರಡೂ ಕಡೆಯಿಂದ ರಸ್ತೆ ತುಂಬ ಚೆನ್ನಾಗಿದೆ.

ಭಕ್ತರಿಗೆ ಪ್ರಸಾದ

ಭಕ್ತರಿಗೆ ಪ್ರಸಾದ

ಮಠವು ಈ ವರೆಗೆ 11 ಪೀಠಾಧಿಪತಿಗಳನ್ನು ಕಂಡಿದೆ. ಹಿಂದಿನ ಪೀಠಾಧಿಪತಿಗಳಾದ ನಾರಾಯಣಾಶ್ರಮ ಸ್ವಾಮಿಗಳ ಕಾಲದಲ್ಲಿ ಅಭಿವೃದ್ಧಿ ಹೊಂದಿದ್ದು, ಸದ್ಯಕ್ಕೆ ಮಠವನ್ನು ಮಾಧವಾಶ್ರಮ ಸ್ವಾಮಿಗಳು ಮುನ್ನಡೆಸುತ್ತಿದ್ದಾರೆ. ಮಹಾಲಯ ಅಮಾವಾಸ್ಯೆಯಿಂದ ಆರಂಭವಾಗಿ ನವರಾತ್ರಿ ಪೂರ್ಣವಾಗುವವರೆಗೆ ಮಠಕ್ಕೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ.

ಒಂಬತ್ತು ದಿನದ ವಿಶೇಷ

ಒಂಬತ್ತು ದಿನದ ವಿಶೇಷ

ನವರಾತ್ರಿಯ ಒಂಬತ್ತು ದಿನದಲ್ಲಿ ದೇವಿಯು ದುರ್ಗಾ, ಆರ್ಯಾ, ಭಗವತೀ, ಕುಮಾರಿ, ಅಂಬಿಕಾ, ಮಹಿಷ ಮರ್ದಿನಿ, ಚಂಡಿಕಾ, ಸರಸ್ವತಿ ಹಾಗೂ ವಾಗೀಶ್ವರಿಯ ರೂಪದಲ್ಲಿ ಇರುತ್ತಾಳೆ ಎಂಬುದು ನಂಬಿಕೆ.

English summary
Tumkur district, Hebbur Kamakshi temple dasra celebration is very popular. People of different parts of Karnataka participate in the celebration. It starts from Mahalaya Amavasya and ends in Vijaya dashami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X