keyboard_backspace

ಪಲಾಯನವಾಗಿರುವ ಅಥವಾ ತಲೆಮರೆಸಿಕೊಂಡಿರುವ ಅಫ್ಘಾನ್‌ ಮಹಿಳಾ ನಾಯಕರು ಯಾರು?

Google Oneindia Kannada News

ಕಾಬೂಲ್‌, ಸೆಪ್ಟೆಂಬರ್‌ 14: ಯುಎಸ್‌ ತನ್ನ ಮಿಲಿಟರಿ ಪಡೆಯನ್ನು ಅಫ್ಘಾನಿಸ್ತಾನದಿಂದ ವಾಪಾಸ್‌ ಕರೆಸಿಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್‌ ಈಗ ಸರ್ಕಾರವನ್ನು ರಚನೆ ಮಾಡಿ ಬಿಟ್ಟಿದೆ. ಇದಕ್ಕೂ ಹಿಂದೆ ತಾನು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದ ಸಂದರ್ಭದಲ್ಲಿ ಎಲ್ಲಾ ಮಾನವ ಹಕ್ಕುಗಳನ್ನು ಪ್ರಮುಖವಾಗಿ ಮಹಿಳೆಯರ ಹಕ್ಕುಗಳನ್ನು ತಾಲಿಬಾನ್‌ ರದ್ದು ಮಾಡಿತ್ತು. ಆದರೆ ಈ ಬಾರಿ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ತಾವು ಬದಲಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದ ತಾಲಿಬಾನ್‌ ಕೊನೆಗೂ ತನ್ನ ಆ ಹಳೆ ಸಿದ್ದಾಂತವನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ. ಮಹಿಳಾ ಹಕ್ಕುಗಳನ್ನು ಕಸಿದುಕೊಂಡಿದೆ. ಈ ನಡುವೆ ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ಪ್ರಮುಖ ಮಹಿಳಾ ನಾಯಕರುಗಳು ಆಗಿದ್ದವರು ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಪಲಾಯನವಾಗಿದ್ದಾರೆ ಅಥವಾ ಅಡಗಿ ಕೂತಿದ್ದಾರೆ ಎಂದು ಮಾಧ್ಯಮದ ವರದಿಗಳು ಹೇಳುತ್ತದೆ.

ಕಾಬೂಲ್‌ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಹಿಳೆಯರು ತಮಗೆ ಉದ್ಯೋಗ ಮಾಡುವ ಹಾಗೂ ಶಿಕ್ಷಣ ಪಡೆಯುವ ಹಕ್ಕು ಬೇಕು, ನಾವು ಕೂಡಾ ಸರ್ಕಾರದಲ್ಲಿ ಪಾಲುದಾರರು ಆಗಬೇಕು ಎಂದು ಒತ್ತಾಯ ಮಾಡಿ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ತಾಲಿಬಾನ್‌ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪ್ರತಿಭಟನಾಕಾರರನ್ನು ಸ್ಥಳದಲ್ಲಿ ತೆರಳುವಂತೆ ಮಾಡಿತ್ತು. ಇನ್ನು ಈ ಪ್ರತಿಭಟನೆಗಳ ಮುಖ್ಯ ಅಂಶವು ಮಹಿಳೆಯರನ್ನು ಕೂಡಾ ಸರ್ಕಾರದಲ್ಲಿ ಸೇರಿಸಿಕೊಳ್ಳುವುದು ಆಗಿತ್ತು.

"ನಮ್ಮನ್ನು ಮದುವೆಯಾಗಿ ನಿಮ್ಮ ದೇಶಕ್ಕೆ ಕರೆದೊಯ್ಯಿರಿ"; ಅಫ್ಘನ್ ಮಹಿಳೆಯರ ಸ್ಥಿತಿ!

ತಾಲಿಬಾನ್‌ ಮಾತ್ರ ನಾವು ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ, ಆದರೆ ಇಸ್ಲಾಮಿಕ್‌ ಕಾನೂನಿನಡಿಯಲ್ಲಿ ನಾವು ಮಹಿಳಾ ಹಕ್ಕುಗಳನ್ನು ಗೌರವ ಮಾಡುತ್ತೇವೆ ಎಂದು ಹೇಳಿಕೊಂಡಿತ್ತು. ಹಾಗೆಯೇ ಮಹಿಳೆಯರಿಗೆ ತನ್ನ ಈ ಸರ್ಕಾರದ ಸಂದರ್ಭದಲ್ಲಿ ತಾಲಿಬಾನ್‌ ಶಿಕ್ಷಣ ಪಡೆಯಲು ಅನುಮತಿ ನೀಡಿದೆ. ಆದರೆ ಮಹಿಳೆಯರು ಹಾಗೂ ಪುರುಷರು ಪರಸ್ಪರ ಜೊತೆಯಲ್ಲಿ ಶಿಕ್ಷಣ ಪಡೆಯುವಂತಿಲ್ಲ ಎಂದು ತಿಳಿಸಿದೆ. ಹಾಗೆಯೇ ಸಾಮಾನ್ಯವಾಗಿ ಎಲ್ಲೂ ಇಲ್ಲದ ವ್ಯವಸ್ಥೆಯನ್ನು ಶಿಕ್ಷಣಾ ಕ್ಷೇತ್ರಗಳಲ್ಲಿ ಮಾಡಿದೆ. ಮಹಿಳೆಯರು ಹಾಗೂ ಪುರುಷರ ನಡುವೆ ಪರದೆಯನ್ನು ತಾಲಿಬಾನ್‌ ಶಿಕ್ಷಣ ಸಂಸ್ಥೆಗಳಲ್ಲಿ ಹಾಕಿಸಿದೆ. ಇನ್ನು ಈ ನಡುವೆ ತಾಲಿಬಾನ್‌ ತಮಗೆ ಮಹಿಳೆಯರು ಕೂಡಾ ಬೆಂಬಲ ಇದ್ದಾರೆ ಎಂಬಂತಹ ಕಾರ್ಯಕ್ರಮಗಳನ್ನು ನಡೆಸಿತ್ತು. ಕೆಲ ದಿನಗಳ ಹಿಂದೆ ಮಹಿಳೆಯರ ಗುಂಪು ತಾಲಿಬಾನ್‌ ಪರವಾಗಿ ಬ್ಯಾನರ್‌ ಅನ್ನು ಹಿಡಿದು ನಾವು ತಾಲಿಬಾನ್‌ ಪರವಾಗಿದ್ದೇವೆ, ನಮ್ಮ ದೇಶವನ್ನು ಬಿಟ್ಟು ಪರಾರಿಯಾದ ಮಹಿಳಾ ನಾಯಕರು ನಮ್ಮ ನಾಯಕರು ಅಲ್ಲ ಎಂದು ಹೇಳಿಕೊಂಡಿದೆ. ಹಾಗಾದರೆ ಅಫ್ಘಾನಿಸ್ತಾನದಿಂದ ಪರಾರಿಯಾದ ಅಥವಾ ತಲೆಮರೆಸಿಕೊಂಡಿರುವ ಮಹಿಳಾ ನಾಯಕರು ಯಾರು? ಇಲ್ಲಿದೆ ಮಾಹಿತಿ ಮುಂದೆ ಓದಿ..

 ಫೌಸಿಯಾ ಕೂಫಿ (46), ಮಾಜಿ ಸಂಸತ್ತು ಸದಸ್ಯೆ

ಫೌಸಿಯಾ ಕೂಫಿ (46), ಮಾಜಿ ಸಂಸತ್ತು ಸದಸ್ಯೆ

ಉತ್ತರ ಬಾದಕ್ಷನ್‌ ಪ್ರಾಂತ್ಯದ 46 ವರ್ಷದ ಫೌಸಿಯಾ ಕೂಫಿ, ಅಫ್ಘಾನಿಸ್ತಾನದ ರಾಷ್ಟ್ರೀಯ ಸಂಸತ್ತಿನ ಉಪಾಧ್ಯಕ್ಷೆ ಆಗಿದ್ದರು. ತಾಲಿಬಾನ್‌ ಅಫ್ಘಾನ್‌ ರಾಜಧಾನಿ ಕಾಬೂಲ್‌ ಅನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಒಂದು ತಿಂಗಳಿಗೂ ಮುಂಚೆ ಈ ಮಹಿಳಾ ನಾಯಕಿ ಫೌಸಿಯಾ ಕೂಫಿ ತಾಲಿಬಾನ್‌ ನಾಯರಕುಗಳೊಂದಿಗೆ ಕುಳಿತು ಮಾತುಕತೆ ನಡೆಸಿದ್ದರು. ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ರಚನೆಯಾದರೆ ಮಹಿಳೆಯರು ಕೂಡಾ ಸರ್ಕಾರದಲ್ಲಿ ಭಾಗಿಯಾಗಬೇಕು, ಸರ್ಕಾರದ ಯಾವುದೇ ಯೋಜನೆಯ ನಿರ್ಧಾರದಲ್ಲಿ ಮಹಿಳೆಯರು ಕೂಡಾ ಭಾಗಿಯಾಗಬೇಕು ಎಂದು ತಾಲಿಬಾನ್‌ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಳ್ಳುವ ಮುನ್ನ ಮಾತುಕತೆಯಲ್ಲಿ ತಿಳಿಸಿದ್ದರು. ಫೌಸಿಯಾ ಕೂಫಿ ಸಂಗಾತಿಯಿಲ್ಲದೆಯೇ ಒಬ್ಬರೇ ತನ್ನ ಮಕ್ಕಳನ್ನು ಸಾಕುತ್ತಿರುವುದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಚಾರದಲ್ಲೇ ಫೌಸಿಯಾ ಕೂಫಿಯ ಹತ್ಯೆಗೆ ಹಲವಾರು ಬಾರಿ ಪ್ರಯತ್ನಗಳು ಕೂಡಾ ನಡೆದಿದ್ದವು. ಕಳೆದ ವರ್ಷವೂ ಕೂಡಾ ಫೌಸಿಯಾ ಕೂಫಿಯ ಹತ್ಯೆಗೆ ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ನೂಬಲ್‌ ಪುರಸ್ಕಾರಕ್ಕಾಗಿ 2020 ರಲ್ಲಿನ ಪಟ್ಟಿಯಲ್ಲಿ ಫೌಸಿಯಾ ಕೂಫಿ ಹೆಸರು ಕೂಡಾ ಇತ್ತು. ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ಎರಡು ವಾರಗಳಲ್ಲೇ ಫೌಸಿಯಾ ಕೂಫಿ ಅಫ್ಘಾನಿಸ್ತಾನವನ್ನು ತೊರೆದಿದ್ದಾರೆ.

ಮಹಿಳೆಯರು ಇರುವುದು ಮಂತ್ರಿ ಆಗುವುದಕ್ಕಲ್ಲ, ಜನ್ಮ ನೀಡುವುದಕ್ಕೆ: ಅಫ್ಘಾನ್ ಸಚಿವನ ನುಡಿಮುತ್ತು!

 ನಹೀದ್ ಫರೀದ್, (37) ಮಾಜಿ ಸಂಸತ್ತು ಸದಸ್ಯೆ

ನಹೀದ್ ಫರೀದ್, (37) ಮಾಜಿ ಸಂಸತ್ತು ಸದಸ್ಯೆ

37 ವರ್ಷದ ನಹೀದ್ ಫರೀದ್ ಸಂಸತ್ತಿನ ಮಹಿಳಾ ವ್ಯವಹಾರಗಳ ಆಯೋಗದ ಅಧ್ಯಕ್ಷರಾಗಿದ್ದರು. ಹಾಗೆಯೇ ತನ್ನ 27 ವರ್ಷದ ವಯಸ್ಸಿನಲ್ಲೇ ಪಶ್ಚಿಮ ಹೆರಾತ್‌ ನಗರವನ್ನು ಪ್ರತಿನಿಧಿಸಿದ್ದರು. ಜಾರ್ಜ್ ವಾಷಿಂಗ್ಟನ್‌ ಯೂನಿವರ್ಸಿಟಿಯಿಂದ ನಹೀದ್ ಫರೀದ್ ಅಂತಾರಾಷ್ಟ್ರೀಯ ಸಂಬಂಧದ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ತನ್ನ ಪ್ರಗತಿಶೀಲ ವಿಚಾರಗಳಿಗೆ ನಹೀದ್ ಫರೀದ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಭಾರೀ ಉತ್ತಮ ಬದಲಾವಣೆಗೆ ನಹೀದ್ ಫರೀದ್ ನಾಂದಿ ಹಾಡಿದ್ದರು. ಅಫ್ಘಾನಿಸ್ತಾನದಲ್ಲಿ ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ಕೂಡಾ ಹಾಕಲು ಅನುಮತಿ ನೀಡುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದರು, ಹಾಗೆಯೇ ಯಶಸ್ವಿಯಾಗಿ ಜಾರಿಗೆ ತಂದಿದ್ದರು. ಯುನೈಟೆಡ್‌ ನೇಷನ್ಸ್‌, ಯುಎಸ್‌ ಹಾಗೂ ಇತರೆ ರಾಷ್ಟ್ರಗಳಲ್ಲಿ ತಾಲಿಬಾನ್‌ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲದಿದ್ದರೆ, ಬೆಂಬಲವಿಲ್ಲದಿದ್ದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಬರೀ ಭಯೋತ್ಪಾದನೆಯ ಆಡಳಿತವಾಗಲಿದೆ ಎಂದು ನಹೀದ್ ಫರೀದ್ ಹೇಳಿದ್ದರು. ತನ್ನ ಹಾಗೂ ತನ್ನ ಮಕ್ಕಳ ಪ್ರಾಣಕ್ಕೆ ಈ ತಾಲಿಬಾನ್‌ ಬೆದರಿಕೆಯಾಗಬಹುದು ಎಂದು ಆತಂಕಕ್ಕೆ ಒಳಗಾಗಿ ನಹೀದ್ ಫರೀದ್, ತನ್ನ ಮಕ್ಕಳೊಂದಿಗೆ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಬಿಬಿಸಿ ಮಾಧ್ಯಮ ವರದಿ ಮಾಡಿದೆ.

 ಸೀಮಾ ಸಮರ್, (64) ಮಾನವ ಹಕ್ಕುಗಳ ಆಯುಕ್ತರು

ಸೀಮಾ ಸಮರ್, (64) ಮಾನವ ಹಕ್ಕುಗಳ ಆಯುಕ್ತರು

ಅಲ್ಪಸಂಖ್ಯಾತ ಹಜಾರಾ ಸಮುದಾಯಕ್ಕೆ ಸೇರಿದ ವೈದ್ಯೆ ಸೀಮಾ ಸಮರ್‌ ಅನ್ನು 1980 ರಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡುವಂತೆ ಒತ್ತಡ ಹೇರಲಾಗಿದ್ದು, ಆಕೆ ಪಾಕಿಸ್ತಾನದಲ್ಲಿ ನಿರಾಶ್ರಿತರಾದರು. ಹಮೀದ್‌ ಕಜ್ಜಾಯಿ ನೇತೃತ್ವದ 2000 ರ ಅಫ್ಘಾನಿಸ್ತಾನ ಸರ್ಕಾರದಲ್ಲಿ ಮಹಿಳಾ ವ್ಯವಹಾರಗಳ ಸಚಿವೆ ಆಗಿದ್ದರು ಸೀಮಾ ಸಮರ್‌. ಮಹಿಳೆಯರು ಶಿಕ್ಷಣ ಪಡೆಯಲು ಹಾಗೂ ಉದ್ಯೋಗಕ್ಕೆ ತೆರಳಲು ಈ ಸರ್ಕಾರದ ಸಂದರ್ಭದಲ್ಲಿ ಆರಂಭ ಮಾಡಲು ಸಾಧ್ಯವಾಗಿದೆ. ಈ ಹಿನ್ನೆಲೆಯಿಂದಾಗಿ ಸೀಮಾ ಸಮರ್‌ ಹತ್ಯೆಗಾಗಿ ಪ್ರಯತ್ನಗಳು ನಡೆದಿದ್ದವು. ಬಳಿಕ ಸೀಮಾ ಸಮರ್ ಬುರ್ಖಾವನ್ನು ಧರಿಸದ ಮಹಿಳೆಯರ ಪರವಾಗಿ ವಾದ ಮಾಡಿದರು. ಹಾಗೆಯೇ ತನ್ನ ಈ ಹಕ್ಕನ್ನು ಪ್ರತಿಪಾದಿಸಲು ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಅಫ್ಘಾನಿಸ್ತಾನದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸಿದರು. ಹಾಗೆಯೇ ಸ್ವತಂತ್ಯ್ರ ಮಹಿಳಾ ಹಕ್ಕುಗಳು ಆಯೋಗದ ಮುಖ್ಯಸ್ಥೆಯಾದರು. ಆದರೆ ಈಗ ಅಫ್ಘಾನಿಸ್ತಾನವನ್ನು ತಾಲಿಬಾನ್‌ ತನ್ನ ವಶಕ್ಕೆ ಪಡೆದುಕೊಂಡಿರುವ ಸಂದರ್ಭದಲ್ಲಿ ಸೀಮಾ ಸಮರ್ ಎಲ್ಲಿದ್ದಾರೆ, ದೇಶ ಬಿಟ್ಟು ತೆರಳಿದ್ದಾರೆಯೇ, ಇಲ್ಲೇ ತಲೆ ಮರೆಸಿಕೊಂಡಿದ್ದಾರೆಯೇ ಯಾವುದೇ ಮಾಹಿತಿ ಇಲ್ಲ.

'ಅಫ್ಘಾನ್‌ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ'ಅಫ್ಘಾನ್‌ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ

 ಹಬೀಬಾ ಸರಬಿ, (65) ತಾಲಿಬಾನ್ ಮಾತುಕತೆಯಲ್ಲಿ ಮಾಜಿ ಸಂಧಾನಕಾರೆ

ಹಬೀಬಾ ಸರಬಿ, (65) ತಾಲಿಬಾನ್ ಮಾತುಕತೆಯಲ್ಲಿ ಮಾಜಿ ಸಂಧಾನಕಾರೆ

ಯುಎಸ್‌ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಾಸ್‌ ಪಡೆದುಕೊಳ್ಳುವ ಮುನ್ನ ನಡೆಸಿದ ಮಾತುಕತೆಯಲ್ಲಿ ಇದ್ದ ನಾಲ್ಕು ಮಹಿಳಾ ನಾಯಕರ ಪೈಕಿ ಹಬೀಬಾ ಸರಬಿ ಕೂಡಾ ಒಬ್ಬರಾಗಿದ್ದರು. 65 ವರ್ಷ ಪ್ರಾಯದ ಹಬೀಬಾ ಸರಬಿ ಹಜಾರಾ ಸಮುದಾಯದ ನಾಯಕಿಯಾಗಿದ್ದು, ವೈದ್ಯೆಯಾಗಿದ್ದಾರೆ. 2002 ರಿಂದ ಎರಡು ವರ್ಷಗಳ ಕಾಲ ಹಬೀಬಾ ಸರಬಿ ಅಫ್ಘಾನಿಸ್ತಾನದಲ್ಲಿ ಮಹಿಳಾ ವ್ಯವಹಾರಗಳ ಸಚಿವೆಯಾಗಿದ್ದರು. ಹಾಗೆಯೇ ಪಶ್ಚಿಮ ಕಾಬೂಲ್‌ನ ಬಾಮ್ಯಾನ್ ಪ್ರಾಂತ್ಯದ ಮೊದಲ ಮಹಿಳಾ ಗವರ್ನರ್‌ ಹಬೀಬಾ ಸರಬಿ ಆಗಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಹಬೀಬಾ ಸರಬಿ ಮಾಡಿದ ಕಾರ್ಯಗಳಿಗೆ ಹಲವಾರು ಪುರಸ್ಕಾರವನ್ನು ಪಡೆದಿದ್ದಾರೆ. ಹಾಗೆಯೇ ತಾಲಿಬಾನ್‌ ವಿರುದ್ದ ನಿರಂತರವಾಗಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಹಬೀಬಾ ಸರಬಿ ಯಾವ ಸ್ಥಳದಲ್ಲಿ ಇದ್ದಾರೆ ಎಂದು ತಿಳಿದಿಲ್ಲ. ಹಬೀಬಾ ಸರಬಿಯು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

 ಶುಕ್ರಿಯಾ ಬರಾಕ್‌ಜಾಯ್, (51) ನಾರ್ವೆಯ ಮಾಜಿ ರಾಯಭಾರಿ

ಶುಕ್ರಿಯಾ ಬರಾಕ್‌ಜಾಯ್, (51) ನಾರ್ವೆಯ ಮಾಜಿ ರಾಯಭಾರಿ

51 ವರ್ಷ ಪ್ರಾಯದ ಶುಕ್ರಿಯಾ ಬರಾಕ್‌ಜಾಯ್ ನಾರ್ವೆಯ ಮಾಜಿ ರಾಯಭಾರಿ ಆಗಿದ್ದರು. ಈ ಹಿಂದೆ ಪತ್ರಕರ್ತೆ ಆಗಿದ್ದ ಶುಕ್ರಿಯಾ ಬರಾಕ್‌ಜಾಯ್ ಬಳಿ ರಾಜಕೀಯಕ್ಕೆ ಕಾಲಿಟ್ಟರು. ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ಮತ್ತೆ ತನ್ನ ಅಧಿಕಾರವನ್ನು ಪಡೆಯುತ್ತಿದ್ದಂತೆ ಶುಕ್ರಿಯಾ ಬರಾಕ್‌ಜಾಯ್ ದೇಶದಿಂದ ಪಲಾಯನವಾಗಿದ್ದಾರೆ. 2014 ರಲ್ಲಿ ಆತ್ಮಾಹುತಿ ಬಾಂಬ್‌ ಕೋರರ ದಾಳಿಯಿಂದ ಶುಕ್ರಿಯಾ ಬರಾಕ್‌ಜಾಯ್ ಬದುಕುಳಿದಿದ್ದಾರೆ. 2001 ರಲ್ಲಿ ತಾಲಿಬಾನ್‌ ಅನ್ನು ಯುಎಸ್‌ ಸೋಲಿಸಿದ ಸಂದರ್ಭದಲ್ಲಿ ಶುಕ್ರಿಯಾ ಬರಾಕ್‌ಜಾಯ್ ಮಹಿಳಾ ಪರ ವಕೀಲೆಯಾಗಿದ್ದರು. 2005 ರಲ್ಲಿ ಆಡಳಿತದ ಪತನದ ಕೆಲವೇ ತಿಂಗಳುಗಳ ನಂತರ, ಐನಾ-ಇ-ಜಾನ್ ಅಥವಾ ಮಹಿಳಾ ಕನ್ನಡಿ ರಾಷ್ಟ್ರೀಯ ವಾರಪತ್ರಿಕೆಯನ್ನು ಶುಕ್ರಿಯಾ ಬರಾಕ್‌ಜಾಯ್ ಸ್ಥಾಪನೆ ಮಾಡಿದ್ದರು. ಇದು ಮಹಿಳಾ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ರಾಷ್ಟ್ರೀಯ ವಾರಪತ್ರಿಕೆ ಆಗಿದೆ. ನಿರ್ಣಾಯಕ ವಿಷಯಗಳನ್ನು ಚರ್ಚಿಸಲು ನಡೆಯುವ ಭವ್ಯ ರಾಷ್ಟ್ರೀಯ ಸಭೆಯಾದ ಲೋಯ ಜಿರ್ಗದಲ್ಲಿ ಶುಕ್ರಿಯಾ ಬರಾಕ್‌ಜಾಯ್ ಭಾಗವಹಿಸಿದ್ದಾರೆ. ಬಳಿಕ 2004 ರಲ್ಲಿ ಹೊಸ ಆಧುನಿಕ ಸಂವಿಧಾನವನ್ನು ಜಾರಿಗೆ ತರಲು ಶುಕ್ರಿಯಾ ಬರಾಕ್‌ಜಾಯ್ ಸಹಾಯ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕಾಬೂಲ್‌ನಲ್ಲಿ ಶಾಸಕರಾಗಿ ಆಯ್ಕೆಯಾದರು.

 ಜರೀಫಾ ಗಫಾರಿ, (29) ಮಾಜಿ ಮೇಯರ್

ಜರೀಫಾ ಗಫಾರಿ, (29) ಮಾಜಿ ಮೇಯರ್

ಇತ್ತೀಚಿನವರೆಗೂ ಉತ್ತರ ಕಾಬೂಲ್‌ನ ಮೈದಾನ್‌ ಶಹರ್‌ ನಗರದ ಮೇಯರ್‌ ಆಗಿದ್ದ 29 ಜರೀಫಾ ಗಫಾರಿ ಅತೀ ಸಣ್ಣ ವಯಸ್ಸಿನ ಮೇಯರ್‌ ಆಗಿದ್ದರು. ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಕಳೆದ ತಿಂಗಳು ಜರೀಫಾ ಗಫಾರಿ ಹಾಗೂ ಆಕೆಯ ಕುಟುಂಬವು ಜರ್ಮನಿಗೆ ಪಲಾಯನವಾಗಿದೆ. ಮೇಯತ್‌ ಆಗಿದ್ದ ಸಂದರ್ಭದಲ್ಲಿ ಆರು ಬಾರಿ ನಡೆದ ಹತ್ಯೆ ಯತ್ನದಲ್ಲಿ ಜರೀಫಾ ಗಫಾರಿ ಬದುಕುಳಿದಿದ್ದಾರೆ. ಮೇಯರ್‌ ಸ್ಥಾನದಿಂದ ಜರೀಫಾ ಗಫಾರಿ ಕೆಳಕ್ಕೆ ಇಳಿಯಬೇಕು ಎಂದು ವಾದ ಮಾಡಿದ್ದ ವ್ಯಕ್ತಿಯೋರ್ವ ಕಳೆದ ವರ್ಷ ಜರೀಫಾ ಗಫಾರಿರ ತಂದೆಯನ್ನು ಹತ್ಯೆ ಮಾಡಿದ್ದಾನೆ. ಧೈರ್ಯ ಮತ್ತು ಮಹಿಳೆಯರು ಸಾರ್ವಜನಿಕ ಸ್ಥಳದಲ್ಲಿ ಸ್ವಾತಂತ್ಯ್ರವಾಗಿ ಇರಲು ಬೇಕಾದ ಎಲ್ಲಾ ಅವಕಾಶಗಳನ್ನು ಮಾಡಿಕೊಟ್ಟ ದೃಢತೆಗಾಗಿ ಜರೀಫಾ ಗಫಾರಿಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ 2020 ರಲ್ಲಿ ಅಂತಾರಾಷ್ಟ್ರೀಯ ಧೈರ್ಯದ ಮಹಿಳೆ ಪ್ರಶಸ್ತಿಯನ್ನು ನೀಡಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Most of Afghanistan's top female leaders who emerged over the past two decades have fled or are in hiding.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X