keyboard_backspace

ಡಿಜಿಟಲ್ ಮಾರ್ಕೆಟಿಂಗ್ ಡಿಪ್ಲೋಮಾ ಕೋರ್ಸ್ ಕಲಿಕೆಯಿಂದ ಆಗುವ ಪ್ರಯೋಜನವೇನು ?

Google Oneindia Kannada News

ಬೆಂಗಳೂರು, ಜು. 23: ಇದು ತಂತ್ರಜ್ಞಾನ ಯುಗ. ಅಂಗೈಯಲ್ಲಿ ಮೊಬೈಲ್ ಇದ್ದರೆ ಜಗತ್ತನ್ನೇ ಇಲ್ಲಿ ನೋಡಬಹುದು. ಅಂತರ್ಜಾಲ ಮತ್ತು ಸ್ಮಾರ್ಟ್ ಪೋನ್ ಜಮಾನ ಶುರುವಾಗಿದ್ದೆ ಇಲ್ಲಿ ಎಲ್ಲವೂ ಆನ್‌ಲೈನ್ ಮತ್ತು ಡಿಜಿಟಲ್ ಲೋಕಮಯವಾಗಿದೆ. ಇವತ್ತು ಪ್ರತಿ ಉತ್ಪಾದನಾ ವಸ್ತು,ಸೇವಾ ವಲಯ ತಮ್ಮ ವಹಿವಾಟು ವಿಸ್ತರಿಸಲು ಡಿಜಿಟಲ್ ಮಾಧ್ಯಮವನ್ನೇ ನಂಬಿ ಕೂತಿವೆ. ಈ ಪರಿಸ್ಥಿತಿಯಲ್ಲಿ ವೃತ್ತಿಪರ ಡಿಜಿಟಲ್ ಮೀಡಿಯಾ ಡಿಪ್ಲೋಮಾ ಕೋರ್ಸ್ ಕಲಿತಲ್ಲಿ ಅತಿ ಬೇಗ ಒಳ್ಳೆಯ ಉದ್ಯೋಗ ಪಡೆಯುವಲ್ಲಿ ಅನುಮಾನವೇ ಇಲ್ಲ ! ಕೆಲ ವರ್ಷಗಳ ಅನುಭವದ ಮೇಲೆ ಸ್ವಂತ ಉದ್ಯೋಗ- ಉದ್ಯಮ ಸ್ಥಾಪಿಸುವ ಅವಕಾವೂ ಇಲ್ಲಿದೆ. ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕುರಿತ ವಿವರ 'ಒನ್ಇಂಡಿಯಾ ಕನ್ನಡ' ಇಲ್ಲಿ ನೀಡುತ್ತಿದೆ.

ಕೋರ್ಸ್ ನಲ್ಲಿ ಏನು ಕಲಿಯಬಹುದು: ಡಿಜಿಟಲ್ ಮಾರ್ಕೆಟಿಂಗ್‌ಗೆ ಭಾರತದಲ್ಲಿರುವ ಮಹತ್ವ, ಇ ಕಾಮರ್ಸ್ ವೆಬ್ ತಾಣಗಳು, ಮಾರ್ಕೆಟಿಂಗ್ ಸರ್ಚ್ ಇಂಜಿನ್ ಆಪ್ಟಿಮೈಸ್ (SEO), ಬ್ಲಾಗ್ ಅಥವಾ ವೆಬ್ ತಾಣವನ್ನು ನಿರ್ವಹಣೆ ಮಾಡುವ ಕೌಶಲ್ಯ, ಗೂಗಲ್ ಜಾಹೀರಾತು ನಿರ್ವಹಣೆ, ಕಂಟೆಟ್ ಮಾರ್ಕೆಟಿಂಗ್ , ಸಾಮಾಜಿಕ ಜಾಲ ತಾಣ, ವೆಬ್ ತಾಣಗಳ ಡಿಸೈನ್ ಮತ್ತು ಮಹತ್ವ, ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಇನ್ಸ್ಟ್ರಾಗ್ರಾಂ, ಟ್ವಿಟ್ಟರ್ ಇವುಗಳ ನಿರ್ವಹಣೆ, ಕ್ಯಾಂಪೇನ್ , ಗೂಗಲ್ ಅನಾಲಿಟಿಕ್ಸ್ ಸಾಮಾಜಿಕ ಜಾಲ ತಾಣಗಳ ಅನ್ವೇಷಣೆ ಮತ್ತಿತರ ವಿಷಯಗಳ ಬಗ್ಗೆ ಕಲಿಸಿಕೊಡಲಾಗುತ್ತದೆ.

ವೃತ್ತಿ ಮಾರ್ಗದರ್ಶಿ: ಎಸ್ಎಸ್ಎಲ್‌ಸಿ, ಪಿಯುಸಿ ಬಳಿಕ ಮುಂದೇನು?ವೃತ್ತಿ ಮಾರ್ಗದರ್ಶಿ: ಎಸ್ಎಸ್ಎಲ್‌ಸಿ, ಪಿಯುಸಿ ಬಳಿಕ ಮುಂದೇನು?

ಡಿಜಿಟಲ್ ಮಾರ್ಕೆಟಿಂಗ್‌ಗೆ ಬಹು ಬೇಡಿಕೆ

ಡಿಜಿಟಲ್ ಮಾರ್ಕೆಟಿಂಗ್‌ಗೆ ಬಹು ಬೇಡಿಕೆ

ಇದು ಡಿಜಿಟಲ್ ಲೋಕ. ಅಂಗೈಯಲ್ಲಿ ಮೊಬೈಲ್ ವೊಂದಿದ್ದರೆ ಬಯಸ್ಸಿದ್ದನ್ನು ಇರುವಲ್ಲಿಗೆ ತರಿಸಿಕೊಳ್ಳುವ ಮಟ್ಟಿಗೆ ತಂತ್ರಜ್ಞಾನ ಬೆಳೆದು ನಿಂತಿದೆ. ಇವತ್ತು ಸಮಾಜದಲ್ಲಿ ಉತ್ಪಾದನೆಯಾಗುವ ವಸ್ತು ಅಥವಾ ಸೇವೆಯನ್ನು ಜನರಿಗೆ ತಿಳಿಸುವ ಮಾಧ್ಯಮದಲ್ಲಿ ಡಿಜಿಟಲ್ ಮೀಡಿಯ ಅಗ್ರ ಸ್ಥಾನದಲ್ಲಿ ನಿಂತಿದೆ. ಇನ್ನೂ ದಶಕಗಳ ಕಾಲ ಡಿಜಿಟಲ್ ಮೀಡಿಯಾ ಜಾಹೀರಾತು ಲೋಕವನ್ನೇ ಆಳಲಿದೆ. ಅದರಲ್ಲೂ ಇತ್ತೀಚೆಗೆ ಒಂದು ವಸ್ತುವನ್ನು ಜನರಿಗೆ ತಲುಪಿಸಲು ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯು ಟೂಬ್ ನಂತಹ ಸಾಮಾಜಿಕ ಜಾಲ ತಾಣಗಳನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ.

ಡಿಜಿಟಲ್ ಮೀಡಿಯಾ ನಿರ್ವಹಣೆ ಬಗ್ಗೆ ಕಲಿತು ಜೀವನ ನಿರೂಪಿಸಿಕೊಂಡವರು ಇದ್ದಾರೆ. ಹೀಗಾಗಿ ಎಸ್ಎಸ್ಎಲ್‌ಸಿ - ಪಿಯುಸಿ ಪಾಸಾದ ವಿದ್ಯಾರ್ಥಿಗಳು ಸೋಸಿಯಲ್ ಮೀಡಿಯಾ , ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಆಧಾರಿತ ಡಿಪ್ಲೋಮಾ ಪಡೆದರೆ ಅತಿ ಬೇಗ ಉದ್ಯೋಗ ಕಂಡುಕೊಳ್ಳುವ ಅವಕಾಶವಿದೆ. ಸೋಷಿಯಲ್ ಮೀಡಿಯಾ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ವೃತ್ತಿಪರವಾಗಿ ಕಲಿತಿದ್ದೇ ಆದಲ್ಲಿ ಇವತ್ತಿನ ಕಾಲದಲ್ಲಿ ಅತಿ ಬೇಗ ಕೆಲಸ ಪಡೆಯಬಹುದು. ಭವಿಷ್ಯದಲ್ಲಿ ಸ್ವಂತ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ರಾಜಕಾರಣಿಗಳು, ಕಂಪನಿಗಳು, ಸೇವಾ ಸಂಸ್ಥೆಗಳು ತಮ್ಮ ಉತ್ಪನ್ನ ಮತ್ತು ಸೇವೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾ ನಿರ್ವಹಣೆ ಮಾಡುವರನ್ನು ಕೈ ಬೀಸಿ ಕರೆದು ಉದ್ಯೋಗ ಕೊಡಲು ತುದಿ ಗಾಲಲ್ಲಿ ನಿಂತಿದ್ದಾರೆ.

ಕೋರ್ಸ್ ಅವಧಿ

ಕೋರ್ಸ್ ಅವಧಿ

ಸಾಮಾನ್ಯವಾಗಿ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್, ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳು ಲಭ್ಯವಿದೆ. ಒಂದು ವರ್ಷದ ಡಿಪ್ಲೋಮಾ ಇದೆ. ಮಾತ್ರವಲ್ಲ ಪಿಯುಸಿ ಮುಗಿಸಿ ಮೂರು ವರ್ಷದ ಪದವಿಯನ್ನು ಕೂಡ ಕೆಲವು ಕಾಲೇಜುಗಳು ಇತ್ತೀಚೆಗೆ ಪರಿಚಯಿಸಿವೆ. ಕನಿಷ್ಠ ಒಂದು ವರ್ಷದ ಡಿಪ್ಲೋಮಾ ಪಡೆಯುವುದು ಸೂಕ್ತ. ಡಿಟಿಟಲ್ ಮಾರ್ಕೆಂಟಿಗ್ ಕೋರ್ಸ್ ನ್ನೇ ಕಲಿಸುವ ವೃತ್ತಿಪರ ಅಕಾಡೆಮಿಗಳು ಬೆಂಗಳೂರಿನಲ್ಲಿವೆ. ಸೂಕ್ತವಾದದುನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ಡಿಜಿಟಲ್ ಮಾರ್ಕೆಟಿಂಗ್ ಡಿಪ್ಲೋಮಾ ಶುಲ್ಕ

ಡಿಜಿಟಲ್ ಮಾರ್ಕೆಟಿಂಗ್ ಡಿಪ್ಲೋಮಾ ಶುಲ್ಕ

ಡಿಜಿಟಲ್ ಮಾರ್ಕೆಟಿಂಗ್ ಡಿಪ್ಲೋಮಾ ಕುರಿತು ಒಂದೊಂದು ಕಡೆ ಒಂದು ಶುಲ್ಕವಿದೆ. ವಿಜ್ಞಾನ, ಕಲಾ, ವಾಣಿಜ್ಯ ವಿಭಾಗಕ್ಕೆ ಖಾಸಗಿ ಕಾಲೇಜುಗಳು ವಿಧಿಸುತ್ತಿರು ಶುಲ್ಕಕ್ಕೆ ಹೋಲಿಸಿದರೆ ಕಡಿಮೆಯೇ. ಕನಿಷ್ಠ 25 ಸಾವಿರದಿಂದ 1 ಲಕ್ಷ ರೂ. ಶುಲ್ಕ ವಿಧಿಸುವ ಅಕಾಡೆಮಿಗಳು ಇವೆ. ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಕಂಪ್ಯೂಟರ್ ಜ್ಞಾನ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯುವ ಮುನ್ನ ಬೇಸಿಕ್ ಕಂಪ್ಯೂಟರ್ ಜ್ಞಾನವಿದ್ದರೆ ಕಲಿಕೆ ಸುಲಭವಾಗುತ್ತದೆ.

ಕೋರ್ಸ್ ನಿಂದ ಆಗುವ ಲಾಭ

ಕೋರ್ಸ್ ನಿಂದ ಆಗುವ ಲಾಭ

ಭಾರತದಲ್ಲಿ ಈಗ ಸಾಮಾಜಿಕ ಮಾಧ್ಯಮಗಳು ಹಾಗೂ ಡಿಜಿಟಲ್ ಮಾಧ್ಯಮ ಶರವೇಗದಲ್ಲಿ ಬೆಳೆಯುತ್ತಿದೆ. ಡಿಪ್ಲೋಮಾ ಪಡೆದ ಕೂಡಲೇ ಬೇಗ ಕೆಲಸ ಗಿಟ್ಟಿಸಿಕೊಳ್ಳಬಹುದು. ಮಾತ್ರವಲ್ಲ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಬಹುದು. ಉದ್ಯೋಗದ ಜತೆಗೆ ಮುಂದೆ ವ್ಯಾಂಸಂಗ ಮಾಡಬಹುದು. ಡಿಜಿಟಲ್ ಮೀಡಿಯಾ ಎಂಬುದು ಇವತ್ತಿನ ದಿನ ಮಾನಗಳಲ್ಲಿ ಸಮುದ್ರ ಇದ್ದಂತೆ. ಬೇರೆ ಡಿಪ್ಲೋಮಾಗಳಿಗಿಂತಲೂ ಟ್ರೆಂಡ್‌ನಲ್ಲಿರುವ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡುವುದು ಸೂಕ್ತ ಎನ್ನುತ್ತಾರೆ ಡಿಜಿಟಲ್ ಮಾರ್ಕೆಟಿಂಗ್ ತಜ್ಞ ಸುನೀಲ್.

English summary
Basic Information about Digital marketing diploma Fees, Duration, Salary & More. Check out the Career Guidance by Oneindia Kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X