keyboard_backspace

ದೇಶದಲ್ಲಿ ವಿಪಿಎನ್‌ ಸೇವೆ ನಿಷೇಧ ಸಾಧ್ಯತೆ: ಕಾರಣವೇನು?

Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 02: ಭಾರತದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಸೈಬರ್ ಭದ್ರತೆಯ ಬೆದರಿಕೆಯಿಂದಾಗಿ ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್ (ವಿಪಿಎನ್) ಸೇವೆಗಳನ್ನು ನಿಷೇಧಿಸಲು ಸೂಚಿಸಿದೆ ಎಂದು ವರದಿಯಾಗಿದೆ. ಭಾರತದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪ್ರಕಾರ ವಿಪಿಎನ್‌ಗಳು ಅಪರಾಧಿಗಳಿಗೆ ಅನಾಮಧೇಯ ಆನ್‌ಲೈನ್‌ ಉಪಸ್ಥಿತಿಯನ್ನು ನಿರ್ಮಿಸಲು ಅವಕಾಶ ನೀಡುತ್ತವೆ. ಇನ್ನು ಈ ನಿಟ್ಟಿನಲ್ಲಿ ಸೇವೆಯನ್ನು ಶಾಶ್ವತವಾಗಿ ನಿಲ್ಲಿಸಲು ಭಾರತವು ಸಮನ್ವಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸ್ಥಾಯಿ ಸಮಿತಿ ಹೇಳಿದೆ.

ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್ ಅಥವಾ ವಿಪಿಎನ್‌, ಡೇಟಾ ಎನ್‌ಕ್ರಿಪ್ಟ್‌ ಮಾಡಲು ಹಾಗೂ ಬಳಕೆದಾರರ ಐಪಿ ವಿಳಾಸವನ್ನು ಮರೆ ಮಾಚಲು ಸಹಾಯ ಮಾಡುತ್ತದೆ. ಹಾಗೆಯೇ ಯಾವ ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಲಾಗಿದೆಯೋ ಅದನ್ನು ನೋಡಲು ಇದರ ಮೂಲಕ ಸಾಧ್ಯವಾಗುತ್ತದೆ. ವೈಫೈ ಬಳಸುವಾಗಲೂ ನಿಮ್ಮ ಆನ್‌ಲೈನ್‌ ಐಡಿಯನ್ನು ಇದು ಮರೆ ಮಾಚುತ್ತದೆ.

ಐಟಿ ಕಂಪನಿಗಳಿಗೆ 2022ರವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸರ್ಕಾರ ಸಲಹೆಐಟಿ ಕಂಪನಿಗಳಿಗೆ 2022ರವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸರ್ಕಾರ ಸಲಹೆ

ವಿಪಿಎನ್ ಸೇವೆಗಳು ರಾಷ್ಟ್ರದ ಹೆಚ್ಚಿನ ಸಂಸ್ಥೆಗಳು ತಮ್ಮ ಡಿಜಿಟಲ್ ಸ್ವತ್ತುಗಳನ್ನು ರಕ್ಷಿಸಲು ಬಳಸಿಕೊಳ್ಳುತ್ತದೆ. ಜೊತೆಗೆ ಗ್ರಾಹಕರಿಗೆ ನಿರ್ಬಂಧಿತ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಕೋವಿಡ್-ಪ್ರೇರಿತ ಲಾಕ್‌ಡೌನ್‌ಗಳ ಸಮಯದಲ್ಲಿ, ವಿಪಿಎನ್‌ಗಳು ಮನೆಯಿಂದ ಕೆಲಸ ಮಾಡಲು ಅನುಕೂಲವಾಗಿದ್ದು ಈ ಹಿನ್ನೆಲೆ ವಿಪಿಎನ್‌ ಬಹಳ ಮೌಲ್ಯಯುತ ಸಾಧನವೆಂದು ಸಾಬೀತಾಗಿದೆ ಎಂದು ಈ ಸ್ಥಾಯಿ ಸಮಿತಿ ಹೇಳಿದೆ.

 ಸ್ಥಾಯಿ ಸಮಿತಿಯು ಹೇಳುವುದು ಏನು?

ಸ್ಥಾಯಿ ಸಮಿತಿಯು ಹೇಳುವುದು ಏನು?

ಭಾರತದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪ್ರಕಾರ, ಡಾರ್ಕ್ ವೆಬ್‌ನ ತಾಂತ್ರಿಕ ತೊಂದರೆಗಳು ಮತ್ತು ವಿಪಿಎನ್ ಸೇವೆಗಳು ಸೈಬರ್ ಭದ್ರತೆಗೆ ತೊಂದರೆಯನ್ನು ಉಂಟು ಮಾಡಬಹುದು ಮತ್ತು ಅಪರಾಧಿಗಳನ್ನು ಆನ್‌ಲೈನ್‌ನಲ್ಲಿ ಅನಾಮಧೇಯವಾಗಿ ಉಳಿಯಲು ಅವಕಾಶ ಮಾಡಿಕೊಡಬಹುದು. ವರದಿಯ ಪ್ರಕಾರ ಅನೇಕ ವೆಬ್‌ಸೈಟ್‌ಗಳು ವಿಪಿಎನ್ ಸೇವೆಗಳನ್ನು ನೀಡುತ್ತವೆ, ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ಅಂತಹ ವಿಪಿಎನ್‌ಗಳನ್ನು ಪತ್ತೆಹಚ್ಚಲು ಮತ್ತು ನಿಷ್ಕ್ರಿಯಗೊಳಿಸಲು, ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವಿನ ಜಂಟಿ ಪ್ರಯತ್ನವನ್ನು ಸಮಿತಿಯು ಸೂಚಿಸಿದೆ. ಇದರ ಬದಲಾಗಿ ಐಎಸ್‌ಪಿಗಳನ್ನು (ಇಂಟರ್‌ನೆಟ್ ಸೇವಾ ಪೂರೈಕೆದಾರರು) ಕಾರ್ಯಕ್ಕಾಗಿ ಸೇರಿಸಿಕೊಳ್ಳುವಂತೆ ಸಮಿತಿಯು ಸೂಚನೆ ನೀಡಿದೆ. ಕ್ರಿಮಿನಲ್‌ಗಳಿಗೆ ಸುರಕ್ಷಿತ ತಾಣವಾಗಿರುವ ವಿಪಿಎನ್ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿಯು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ರಾಜ್ಯ ಸಮಿತಿಯು ಆಗಸ್ಟ್ 10 ರಂದು ರಾಜ್ಯಸಭೆಗೆ ನೀಡಿದ ವರದಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಮೇಲ್ವಿಚಾರಣೆ ಮತ್ತು ಕಣ್ಗಾವಲು ಸುಧಾರಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸೃಷ್ಟಿಸುವ ಮೂಲಕ ಮತ್ತು ವಿಪಿಎನ್‌ಗಳು ಮತ್ತು ಡಾರ್ಕ್ ವೆಬ್ ಅನ್ನು ನಿಲ್ಲಿಸಬೇಕು ಎಂದು ಹೇಳಿದೆ. ಇನ್ನು ಭಾರತದ ಕಾರ್ಪೊರೇಷನ್‌ಗಳು ಇದರಿಂದಾಗಿ ತಮ್ಮ ಡೇಟಾ ಭದ್ರತೆಗೆ ಅಪಾಯ ಉಂಟಾಗಬಹುದು ಎಂಬ ಕಾರಣದಿಂದಾಗಿ ಈ ಮಾಹಿತಿಯ ಬಗ್ಗೆ ಕಾಳಜಿ ವಹಿಸುತ್ತವೆ.

 ಏನಿದು ವಿಪಿಎನ್‌?

ಏನಿದು ವಿಪಿಎನ್‌?

ಈ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದ ಪ್ರಶ್ನೆ ಜನರಲ್ಲಿ ಮೂಡುವುದು ವಿಪಿಎನ್ ಎಂದರೇನು ಎಂಬುವುದು. ಮೂಲಭೂತವಾಗಿ, ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಅನ್ನು ವಿಪಿಎನ್‌ ಎಂದು ಕರೆಯಲಾಗುತ್ತದೆ. ಇದು ಸಾರ್ವಜನಿಕ ಇಂಟರ್ನೆಟ್ ಸಂಪರ್ಕದೊಳಗೆ ಖಾಸಗಿ ನೆಟ್‌ವರ್ಕ್ ಅನ್ನು ರಚಿಸುವ ಒಂದು ಮಾರ್ಗವಾಗಿದೆ. ಈ ವರ್ಚುವಲ್ ನೆಟ್‌ವರ್ಕ್ ಯಾವುದೇ ಹೊರಗಿನ ಸೈಬರ್‌ ದಾಳಿಯಿಂದ ರಕ್ಷಣೆ ನೀಡುತ್ತದೆ, ಅನಾಮಧೇಯತೆಯನ್ನು ಖಾತ್ರಿಪಡಿಸುವ ಮೂಲಕ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತದೆ.

'ಮದುವೆಯಾಗಲು ಹುಡುಗಿ ಬೇಕು': ಅಂಗಡಿ ಎದುರು ಬೋರ್ಡ್ ಹಾಕಿದ ಯುವಕನಿಗೆ ವಿದೇಶದಿಂದ ಕರೆ!'ಮದುವೆಯಾಗಲು ಹುಡುಗಿ ಬೇಕು': ಅಂಗಡಿ ಎದುರು ಬೋರ್ಡ್ ಹಾಕಿದ ಯುವಕನಿಗೆ ವಿದೇಶದಿಂದ ಕರೆ!

 ವಿಪಿಎನ್‌ ಅನ್ನು ಏಕೆ ಬಳಸಲಾಗುತ್ತದೆ?

ವಿಪಿಎನ್‌ ಅನ್ನು ಏಕೆ ಬಳಸಲಾಗುತ್ತದೆ?

ವಿಪಿಎನ್‌ ನಿಮ್ಮ ಅಂತರ್ಜಾಲದಲ್ಲಿ ನಿಮ್ಮ ಉಪಸ್ಥಿತಿಯನ್ನು ಯಶಸ್ವಿಯಾಗಿ ಮರೆಮಾಚಬಲ್ಲ ಕಾರಣದಿಂದಾಗಿ ಹಲವಾರು ಐಟಿ ಕಂಪನಿಗಳು ಹಾಗೂ ಪ್ರತಿಷ್ಠಿತ ಮಾಧ್ಯಮಗಳು ವಿಪಿಎನ್‌ ಅನ್ನು ಬಳಸುತ್ತದೆ. ಇದನ್ನು ಆನ್‌ಲೈನ್ ಕಾರ್ಯಾಚರಣೆಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತದೆ. ವಿಪಿಎನ್‌ ಬಳಕೆ ಮಾಡುವುದರಿಂದಾಗಿ ನಿಮ್ಮ ಆನ್‌ಲೈನ್‌ ಚಟುವಟಿಕೆಯ ಕದ್ದಾಳಿಕೆಯನ್ನು ತಡೆಯಬಹುದಾಗಿದೆ.

ತಾಲಿಬಾನಿಗರು ಮಲಯಾಳಂ ಮಾತನಾಡುತ್ತಾರೆಯೇ, ಪ್ರಶ್ನೆ ಹುಟ್ಟಿದಾದರೂ ಯಾಕೆ?ತಾಲಿಬಾನಿಗರು ಮಲಯಾಳಂ ಮಾತನಾಡುತ್ತಾರೆಯೇ, ಪ್ರಶ್ನೆ ಹುಟ್ಟಿದಾದರೂ ಯಾಕೆ?

 ವಿಪಿಎನ್‌ ನಿಷೇಧವಾದರೆ ಯಾರಿಗೆ ತೊಂದರೆ?

ವಿಪಿಎನ್‌ ನಿಷೇಧವಾದರೆ ಯಾರಿಗೆ ತೊಂದರೆ?

ಇನ್ನು ಭಾರತದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಈ ಶಿಫಾರಸ್ಸನ್ನು ಸರ್ಕಾರವು ಅನುಸರಿಸಿ ದೇಶದಲ್ಲಿ ವಿಪಿಎನ್ ಸೇವೆಗಳನ್ನು ನಿಷೇಧಿಸಿದರೆ. ಈ ವಿಪಿಎನ್‌ ಮೂಲಕವೇ ಕಾರ್ಯ ನಿರ್ವಹಿಸುವ ಐಟಿ ವ್ಯವಹಾರಗಳು ಮತ್ತು ಆನ್‌ಲೈನ್ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕುಗಳಿಗೆ ಪ್ರಮುಖ ತೊಂದರೆ ಉಂಟಾಗಬಹುದು.

(ಒನ್‌ ಇಂಡಿಯಾ ಸುದ್ದಿ)

English summary
What is a VPN and why does the parliamentary standing committee on home affairs want to ban it? Here is all you need to know in Kannada. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X