Tap to Read ➤

ಚಂದ್ರಗಹಣ ಕುರಿತ ಕುತೂಹಲಕಾರಿ ಮಾಹಿತಿ

ಬಾನಂಗಳದಲ್ಲಿ ಗೋಚರಿಸಿದ ರೋಮಾಂಚಕಾರಿ ದೃಶ್ಯವನ್ನು ನಾಸಾದ ಸೈಟ್ ಮತ್ತು ಟ್ವಿಟ್ಟರ್ ಮೂಲಕ ಭಾರತೀಯರು ವಿಕ್ಷಿಸಿದ್ದಾರೆ.
Shivam Muradimath
ವರ್ಷದ ಮೊದಲ ಚಂದ್ರಗ್ರಹಣವನ್ನು ನಾಸಾದ ಲೈವ್ ಸ್ಟ್ರೀಮ್ ಮೂಲಕ ಭಾರತೀಯರು ಬ್ಲಡ್ ಮೂನ್ ನೋಡಲು ಸಾಧ್ಯವಾಯಿತು.
ಚಂದ್ರಗ್ರಹಣದ ದಿನದಂದು ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.
ಭಾರತದ ಸಮಯದ ಪ್ರಕಾರ ಮೇ.15 ರಾತ್ರಿ 9.40ಕ್ಕೆ ಆರಂಭವಾಗಿ 16ರಂದು ಮಧ್ಯಾಹ್ನ12.20ರ ವರೆಗೆ ಗೋಚರಿಸಿತು.
ಈ ಕುರಿತು ನಾಸಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಂಚಿಕೊಂಡಿದೆ.
ಸೂರ್ಯ ಹಾಗೂ ಚಂದ್ರರ ನಡುವೆ ಭೂಮಿ ಬಂದಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರ ಗ್ರಹಣ ಉಂಟಾಗುತ್ತಿದೆ.
ಭಾರತವನ್ನು ಹೊರತುಪಡಿಸಿ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಆಫ್ರಿಕಾ ದ ಪಶ್ವಿಮ ಭಾಗ, ನ್ಯೂಜಿಲ್ಯಾಂಡ್, ಪೂರ್ವ ಯುರೋಪ್ ಜನರು ಭಾಗಶಃ ಚಂದ್ರಗ್ರಹಣ ವೀಕ್ಷಿಸಿದ್ದಾರೆ.
More Stories