Tap to Read ➤

ವಾಟ್ಸಪ್‌ ಚಾಟ್ ಡಿಲೀಟ್‌ ಆದ್ರೆ ಚಿಂತೆ ಮಾಡುವ ಬದಲು ಈ ರೀತಿ ಮಾಡಿ

ಹಲವಾರು ಬಾರಿ ಪ್ರಮುಖ ಸಂದೇಶಗಳು ಆಕಸ್ಮಿಕವಾಗಿ ಅಳಿಸಿ ಹೋಗುವುದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ತಲೆನೋವಿನಿಂದ ಪಾರಾಗಲು ನಿಮಗಾಗಿ ಕೆಲವು ಟಿಪ್ಸ್‌
Shivam Muradimath
ನಿಮ್ಮ ಅಳಿಸಿ ಹೋದ ವಾಟ್ಸಪ್‌ ಸಂದೇಶಗಳನ್ನು ಈ ರೀತಿ ಪಡೆದುಕೊಳ್ಳಿ
ನಿಮ್ಮ ಮೊಬೈಲ್‌ನ ಫೈಲ್ ಮ್ಯಾನೇಜರ್ ಆಪ್‌ಗೆ ಹೋಗಿ, ಒಂದು ವೇಳೆ ಕಾಣದಿದ್ದರೆ ಆಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.
ಇಂಟರ್ನಲ್‌ ಸ್ಟೋರೇಜ್‌ನಲ್ಲಿರುವ ವಾಟ್ಸ್‌ಪ್‌ ಆಪ್‌ ಫೋಲ್ಡರ್‌ ಫೋಲ್ಡರ್‌ಗೆ ಹೋಗಿ.
ವಾಟ್ಸಪ್‌ ಫೋಲ್ಡರ್‌ನಲ್ಲಿ ಡಾಟಾಬೆಸಸ್‌ ಅನ್ನು ಆಯ್ಕೆ ಮಾಡಿ, ಇಲ್ಲಿ ದಿನಾಂಕಗಳ ಪ್ರಕಾರ ನಿಮ್ಮ ಎಲ್ಲಾ ಚಾಟ್‌ಗಳು ಬ್ಯಾಕ್‌ಅಪ್ ಆಗಿರುತ್ತದೆ.
ವಾಟ್ಸಪ್‌ ಚಾಟ್‌ ಹಿಸ್ಟರಿಯಲ್ಲಿ ನೀವು ಮರು ಪಡೆಯಲು ಬಯಸುತ್ತಿರುವ ದಿನಾಂಕದಲ್ಲಿ ಬ್ಯಾಕ್‌ಅಪ್‌ಅನ್ನು ಆಯ್ಕೆ ಮಾಡಿಕೊಳ್ಳಿ.
ಒಂದು ವೇಳೆ ಬ್ಯಾಕ್‌ಅಪ್ ನಿಮ್ಮ ಹೆಚ್ಚುವರಿ ಮೆಮೊರಿ ಕಾರ್ಡ್‌ನಲ್ಲಿದ್ದರೆ, ಅದನ್ನು ಕಾಪಿ ಮಾಡಿ ಇಂಟರ್ನಲ್‌ ಸ್ಟೋರೇಜ್‌ಗೆ ಪೇಸ್ಟ್ ಮಾಡಿಕೊಳ್ಳಬೇಕು.
ನಂತರ msgstore.db.crypt12 ಎಂಬ ಹೆಸರಿನ ಫೈಲ್‌ಗಳನ್ನು msgstore_BACKUP.db.crypt12 ಎಂದು ಬದಲಿಸಬೇಕು.
ನಂತರ msgstore-YYY-MM-DD.1.db.crypt12. ಹುಡುಕಿ, ಅದನ್ನು msg.db.crypt12. ಬದಲಾಯಿಸಬೇಕು.
ನಂತರ ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್‌ಅನ್ನು ಡಿಲೀಟ್‌ ಮಾಡಿ ಮತ್ತೆ ಇನ್‌ಸ್ಟಾಲ್ ಮಾಡಿ, ನಿಮ್ಮ ಮೊಬೈಲ್ ನಂತರ ಮೂಲಕ ಸೈನ್‌ ಇನ್‌ ಆಗಿ ಮತ್ತು Restore ಅನ್ನು ಕ್ಲಿಕ್‌ ಮಾಡಿ. ಆಗ ಡಿಲೀಟ್‌ ಆಗಿರುವ ನಿಮ್ಮೆಲ್ಲಾ ಸಂದೇಶಗಳನ್ನು ಮರಳಿಪಡೆಯಬಹುದು.
More Stories