Tap to Read ➤

ಯುಎಸ್ ಕಾಂಗ್ರೆಸ್‌ನ ಅಧಿವೇಶನದಲ್ಲಿ ಅನ್ಯಗ್ರಹ ಜೀವಿಗಳ ಬಗ್ಗೆ ಚರ್ಚೆ ಯಾಕೆ?

ಯುಎಸ್‌ ಕಾಂಗ್ರೆಸ್‌ನ ವಿಶೇಷ ಅಧಿವೇಶನದಲ್ಲಿ ಯುಎಫ್ಒ ರಿಸರ್ಚ್ ಮೂಲಕ ಅನ್ಯಗ್ರಹಗಳ ಬಗ್ಗೆ ರಹಸ್ಯಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.
Minnudin Nadaf
ಯುಎಫ್ಒ ರಿಸರ್ಚ್ ಅಸೋಸಿಯೇಷನ್ ​​ಪ್ರಕಾರ ಕಳೆದ ವರ್ಷ ಯುಕೆನಲ್ಲಿ 250 ಕ್ಕೂ ಹೆಚ್ಚು ಅನ್ಯಲೋಕದ ದೃಶ್ಯಗಳು ಕಂಡುಬಂದಿವೆ!
ಮಂಗಳವಾರ ಯುಎಸ್‌ ಕಾಂಗ್ರೆಸ್ (ಸಂಸತ್ತು)ನಲ್ಲಿ ಮೊದಲ ಬಾರಿಗೆ ಯುಎಫ್‌ಒ (Unidentified Flying Object) ಕುರಿತು ಮುಕ್ತ ವಿಚಾರಣೆ ನಡೆಯಲಿದೆ.
ಭಾರತೀಯ ಕಾಲಮಾನದ ಪ್ರಕಾರ ಈ ವಿಷಯದ ವಿಚಾರಣೆಯು ಅಧಿವೇಶನದಲ್ಲಿ ಇಂದು ಸಂಜೆ 6:30ರಿಂದ ಪ್ರಾರಂಭವಾಗಲಿದೆ.
ಪ್ರಪಂಚದಾದ್ಯಂತ ಅನ್ಯಗ್ರಹಗಳಲ್ಲಿ ಅನ್ಯ ಜೀವಿಗಳು ಇವೆ ಎಂದು ಉಹಿಸಲಾಗಿದೆ.
ಅಮೆರಿಕದ ರಕ್ಷಣಾ ಪ್ರಧಾನ ಕಛೇರಿ ಪೆಂಟಗನ್ ತನ್ನ ವರ್ಗೀಕೃತ ಕಡತಗಳ ಆಧಾರದ ಮೇಲೆ ಅನ್ಯಗ್ರಹ ಜೀವಿಗಳ ಬಗ್ಗೆ ಇದುವರೆಗೆ ಅವರ ಬಳಿ ಇರುವ ಮಾಹಿತಿ ಏನು ಎಂಬುದನ್ನು ತಿಳಿಸಲಿದೆ.
ಕಳೆದ 50 ವರ್ಷಗಳಲ್ಲಿ ಮೊದಲ ಸೆಷನ್ ಇದಾಗಿದ್ದು, ಅನ್ಯಗ್ರಹ ಜೀವಿಗಳು ಅಥವಾ ಯುಎಫ್ಒ ವೀಕ್ಷಣೆಗಳ ಬಗ್ಗೆ ಸತ್ಯವನ್ನು ಕಂಡು ಹಿಡಿಯಲು ಆಯೋಜಿಸಲಾಗುತ್ತಿದೆ.
ಒನ್ ಇಂಡಿಯಾ ಸ್ಟೋರಿಗಳಿಗಾಗಿ