Tap to Read ➤

ಟ್ವಿಟ್ಟರ್ ಸಂಸ್ಥೆಯನ್ನು ಅತಿ ಶ್ರೀಮಂತ ಮಸ್ಕ್ ಖರೀದಿಸಿದ ಕಥೆ

ನಿರೀಕ್ಷಿಸಿದಂತೆ ಹೆಸರಾಂತ ಉದ್ಯಮಿ ಎಲಾನ್ ಮಸ್ಕ್ 44 ಶತಕೋಟಿ ಡಾಲರ್ (ಸುಮಾರು 3.36 ಲಕ್ಷಕೋಟಿ ರೂ) ಹಣದಿಂದ ಟ್ವಿಟ್ಟರ್ ಖರೀದಿಸಿದ್ದಾರೆ. ಇನ್ನಷ್ಟು ವಿವರ ಮುಂದಿದೆ..
ಟ್ವಿಟ್ಟರ್ ಅನ್ನು ಮಸ್ಕ್‌ಗೆ ಮಾರಾಟ ಮಾಡಲು ಟ್ವಿಟ್ಟರ್ ಮಂಡಳಿ ಸಮ್ಮತಿಸಿದೆ. ಖರೀದಿ ವ್ಯವಹಾರದ ಪ್ರಕ್ರಿಯೆ ವರ್ಷಾಂತ್ಯದೊಳಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಟ್ವಿಟ್ಟರ್ ಮುಕ್ತ ವಾಕ್ ಸ್ವಾತಂತ್ರ್ಯದ ಮಾದರಿ ವೇದಿಕೆಯಾಗಿ ಮಾಡುವುದು ಸೇರಿದಂತೆ ಹಲವು ಬದಲಾವಣೆಗೆ ಎಲಾನ್ ಮಸ್ಕ್ ಯೋಜಿಸಿದ್ದಾರೆ.
ಟ್ವಿಟ್ಟರ್ ಅನ್ನು ಷೇರುಪೇಟೆ ಲಿಸ್ಟಿಂಗ್‌ನಿಂದ ಹೊರತಂದು ಸಂಪೂರ್ಣ ಖಾಸಗಿ ಕಂಪನಿ ಮಾಡುವ ಸಾಧ್ಯತೆ ಇದೆ
2006ರಲ್ಲಿ ಜ್ಯಾಕ್ ಡೋರ್ಸಿ, ನೋವಾ ಗ್ಲಾಸ್, ಬಿಜ್ ಸ್ಟೋನ್ ಮತ್ತು ಇವಾನ್ ವಿಲಿಯಮ್ಸ್ ಈ ನಾಲ್ವರು ಸೇರಿ ಟ್ವಿಟ್ಟರ್ ಸ್ಥಾಪಿಸಿದರು
ಟ್ವಿಟ್ಟರ್ ಮಂಡಳಿಯ ನಿಯಮದ ಪ್ರಕಾರ ಶೇ 9ಕ್ಕಿಂತ ಹೆಚ್ಚಿನ ಪಾಲನ್ನು ಯಾರೂ ಹೊಂದುವಂತಿರಲಿಲ್ಲ
ಮಸ್ಕ್ ಈ ವರ್ಷದ ಆರಂಭದಿಂದ ಟ್ವಿಟ್ಟರ್‌ನ ಷೇರುಗಳನ್ನು ರಹಸ್ಯವಾಗಿ ಖರೀದಿಸುತ್ತಾ ಬಂದು ಶೇ. 9.2 ಷೇರುಗಳ ಒಡೆಯರಾದರು.
ಟ್ವಿಟ್ಟರ್ ಬೋರ್ಡ್ ನಿರ್ದೇಶಕ ಸ್ಥಾನದ ಆಫರ್ ತಿರಸ್ಕರಿಸಿದ್ದ ಎಲಾನ್ ಮಸ್ಕ್ ಅಂತಿಮವಾಗಿ ಕಂಪನಿಯ ಎಲ್ಲಾ ಷೇರುಗಳನ್ನೂ ಖರೀದಿ ಮಾಡಿದ್ದಾರೆ
ಟ್ವಿಟ್ಟರ್‌ನ ಸಹ-ಸಂಸ್ಥಾಪಕ ಜ್ಯಾಕ್ ಡೋರ್ಸಿ ಅವರು ಎಲಾನ್ ಮಸ್ಕ್ ಅವರಿಂದ ಕಂಪನಿಯ ಮೂಲ ಉದ್ದೇಶ ಸಾಕಾರಗೊಳ್ಳಲಿದೆ ಎಂದು ಆಶಿಸಿದ್ದಾರೆ
ಜ್ಯಾಕ್ ಡೋರ್ಸಿ ಎರಡು ಬಾರಿ ಸಿಇಒ ಮತ್ತು ಒಮ್ಮೆ ಛೇರ್ಮನ್ ಆಗಿದ್ದರು. ಅವರ ನಿರ್ಗಮನದ ನಂತರ ಪರಾಗ್ ಅಗರ್ವಾಲ್ ಸಿಇಒ ಆಗಿದ್ದಾರೆ
ಫೋರ್ಬ್ಸ್ ಪಟ್ಟಿ ಪ್ರಕಾರ ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ. ಟೆಸ್ಲಾ, ಸ್ಪೇಸ್‌ಎಕ್ಸ್ ಮೊದಲಾದ ಕಂಪನಿಗಳ ಒಡೆಯ.
ಮಂಗಳ ಗ್ರಹದಲ್ಲಿ ಮಾನವನ ವಸಾಹತು ಸ್ಥಾಪಿಸುವುದು ಅವರ ಕನಸು. ಇವರ ಕಂಪನಿಯ ರಾಕೆಟ್‌ಗಳನ್ನು ನಾಸಾ ಬಾಡಿಗೆಗೆ ಪಡೆಯುತ್ತದೆ
ಬಹಳ ದೂರದೃಷ್ಟಿ ಉಳ್ಳ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಂಥ ಅದ್ಭುತ ಸೋಷಿಯಲ್ ಮೀಡಿಯಾ ಕಂಪನಿಯನ್ನು ಇನ್ನಷ್ಟು ಮೇಲೆ ಕರೆದೊಯ್ಯುವ ನಿರೀಕ್ಷೆ ಇದೆ
ಟ್ವಿಟ್ಟರ್-ಮಸ್ಕ್ ಡೀಲ್ ಸುದ್ದಿ