Tap to Read ➤

ಕೇರಳದಲ್ಲಿ ಟೊಮೇಟೋ ಜ್ವರ, ಏನಿದರ ಗುಣಲಕ್ಷಣ?

ಕೇರಳದಲ್ಲಿ ಮೇಲಿಂದ ಮೇಲೆ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತಿದ್ದು, ಹೊಸದಾಗಿ ಕಾಣಿಸಿಕೊಂಡಿರುವ ಟೋಮೆಟೋ ಜ್ವರ 82 ಜನರಲ್ಲಿ ಪತ್ತೆಯಾಗಿದೆ. ಈ ಕುರಿತ ಪೂರ್ಣ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ,
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 82 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ.
ಟೊಮೇಟೊ ಜ್ವರ ಅಪರೂಪದ ವೈರಲ್ ಸೋಂಕಾಗಿದ್ದು, ಮಕ್ಕಳಲ್ಲಿ ದದ್ದು ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ.
ಟೊಮೇಟೋ ಜ್ವರದ ಲಕ್ಷಣಗಳನ್ನು ತಿಳಿಯಿರಿ,
* ಟೊಮೇಟೋ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೋ ಗಾತ್ರದ ಕೆಂಪು ದದ್ದುಗಳು ಕಂಡು ಬಂದಿವೆ
* ಅಧಿಕ ಜ್ವರ, ದೇಹದ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ
* ಸೋಂಕಿತ ಮಗುವಿಗೆ ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಉಂಟಾಗುತ್ತದೆ
* ಕೈಗಳು, ಮೊಣಕಾಲುಗಳು, ಪೃಷ್ಠದ ಬಣ್ಣವು ಇತರ ಕೆಲವು ಲಕ್ಷಣಗಳಾಗಿವೆ
* ದದ್ದುಗಳ ಮೇಲೆ ಉಂಟಾಗುವ ಹುಣ್ಣುಗಳಿಂದ ಹುಳುಗಳು ಹೊರಬರುತ್ತವೆ ಎಂದು ಕೆಲವು ರೋಗಿಗಳು ಹೇಳುತ್ತಾರೆ
More updates