Tap to Read ➤

ತಿರುಮಲ ಶ್ರೀವಾರಿಮೆಟ್ಟು ಮಾರ್ಗ ಭಕ್ತರಿಗೆ ಮುಕ್ತ

ಮಳೆಯಿಂದ ಹಾನಿಯಾಗಿದ್ದ ಶ್ರೀವಾರಿಮೆಟ್ಟು ಮಾರ್ಗವನ್ನು ದುರಸ್ತಿ ನಂತರ ಸಾರ್ವಜನಿಕರಿಗೆ ಮೇ 05ರಂದು ಮುಕ್ತಗೊಳಿಸಲಾಗಿದೆ.
ಮಳೆಯಿಂದ ಹಾನಿಯಾಗಿದ್ದ ಶ್ರೀವಾರಿಮೆಟ್ಟು ಮಾರ್ಗದಲ್ಲಿ ಸಂಚರಿಸಲು ಭಕ್ತರಿಗೆ ಮುಕ್ತಗೊಳಿಸುವ ಮೊದಲು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಶ್ರೀವಾರಿಮೆಟ್ಟುವಿನಲ್ಲಿ ನಡೆದ ಪೂಜೆಯಲ್ಲಿ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ, ಸಿಇಒ ಕೆ. ಎಸ್. ಜವಾಹರರೆಡ್ಡಿ ಹಾಗೂ ಹೆಚ್ಚುವರಿ ಇಒ ಎ. ವಿ .ಧರ್ಮಾರೆಡ್ಡಿ ಪಾಲ್ಗೊಂಡಿದ್ದರು
ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಪಾದಚಾರಿ ಮಾರ್ಗದ ಮೆಟ್ಟಿಲುಗಳಿಗೆ ಹಾನಿಯಾಗಿತ್ತು
ಶ್ರೀವಾರಿಮೆಟ್ಟು ಮಾರ್ಗದಲ್ಲಿ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ
2021ರಲ್ಲಿ ಸುರಿದ ಭಾರಿ ಮಳೆಯಿಂದ ತಿರುಪತಿ, ನೆಲ್ಲೂರು, ತಿರುಮಲ ಬೆಟ್ಟ, ಘಾಟ್ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿತ್ತು
ಗೋವಿಂದನ ದರ್ಶನಕ್ಕೆ ಹಾದಿ
ಪ್ರತಿ ದಿನ ಸುಮಾರು 6 ಸಾವಿರಕ್ಕೂ ಅಧಿಕ ಭಕ್ತಾದಿಗಳು ಈ ಮಾರ್ಗದಿಂದ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಾರೆ
ತ್ವರಿತಗತಿಯಲ್ಲಿ ನಡೆದ ದುರಸ್ತಿ ಕಾರ್ಯಕ್ಕೆ ಸುಮಾರು 3.60 ಕೋಟಿ ರು ವ್ಯಯಿಸಲಾಗಿದೆ
ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಹಾದಿ
ಇದೇ ಮಾರ್ಗದಲ್ಲೇ ತೆರಳಿ ಏಳುಬೆಟ್ಟದ ಒಡೆಯ ತಿಮ್ಮಪ್ಪನ ದರ್ಶನವನ್ನು ಶ್ರೀಕೃಷ್ಣದೇವರಾಯ ಅರಸರು ಪಡೆಯುತ್ತಿದ್ದರು ಎಂಬ ಪ್ರತೀತಿ ಇದೆ
ತಿರುಪತಿ ಬಗ್ಗೆ ಇನ್ನಷ್ಟು ಸುದ್ದಿ