Tap to Read ➤

ಇದು ತೇಜೊ ಮಹಾಲಯಾ ಅಥವಾ ತಾಜ್ ಮಹಲ್ ?

ಮತ್ತೆ ಭುಗಿಲೆದ್ದ ತಾಜ್ ಮಹಲ್ ವಿವಾದ. ಹಿಂದೂಗಳ ದೇವಾಲಕ್ಕೆ ತಾಜ್ ಮಹಲ್ ಎಂಬ ಹೆಸರು ಇಡಲಾಗಿದೆ. ಅಸಲಿಗೆ ಇದು ಹಿಂದೂ ದೇವಾಲಯ ಎನ್ನುವುದು ವಾದವಾಗಿದೆ.
2015 ರಲ್ಲಿ ಏಳು ಜನರ ಸಂಘಟನೆಯೊಂದು ಈ ಕುರಿತು ಕೋರ್ಟ್ ಮೇಟ್ಟಿಲೇರಿದ್ದರು.
ಹಿಂದೂಗಳ ಶಿವ ದೇವಾಲಯವನ್ನು ತಾಜ್ ಮಹಲ್ ಆಗಿ ಪರಿವರ್ತಿಸಲಾಗಿದ್ದು, ಮರಳಿ ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಕೇಳಿಕೊಂಡಿದ್ದರು.
ಮುಸ್ಲಿಂ ಸಮುದಾಯಕ್ಕೆ ನಮಾಜ್ ಮಾಡಲು ಅವಕಾಶ ನೀಡಿರುವ ಹಾಗೆ ಹಿಂದೂಗಳಿಗೆ ಸಹ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ತಾಜ್ ಮಹಲ್ ನಲ್ಲಿರುವ ಎಲ್ಲ ಕೊಠಡಿಯ ಬಾಗಿಲುಗಳನ್ನು ತರೆಯುವಂತೆ ಮನವಿ ಸಲ್ಲಿಸಿದ್ದರು.
109 ಪುರಾತನ ದಾಖಲೆಗಳಿದ್ದು, ನಿಸ್ಸಂದೇಹವಾಗಿ ಇದು ಹಿಂದೂಗಳ ದೇವಾಲಯವೇ ಎಂದು ಪಿಟಿಶನ್‌ನಲ್ಲಿ ತಿಳಿಸಲಾಗಿದೆ.
ಅಮೃತ ಶಿಲೆಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಮೂರು ದಿಕ್ಕಿನಲ್ಲಿರುವ ದ್ವಾರಗಳನ್ನು ತೆರೆಯಲಾಗಿದ್ದು, ಉತ್ತರ ದಿಕ್ಕಿನಲ್ಲಿರುವ ದ್ವಾರವನ್ನು ಮಾತ್ರ ಮುಚ್ಚಲಾಗಿದೆ
ಉತ್ತರ ಭಾರತದ ಹಿಂದೂಗಳ ಶಿವಾಲಯದ ಶೈಲಿಯಲ್ಲಿದೆ ಎಂದು ಮೊಕದ್ದಮೆ ಹೂಡಿರುವ ಹರಿಶಂಕರ ಜೈನ್ ಮತ್ತು ಇನ್ನುಳಿದವರು ಪ್ರತಿಪಾದಿಸಿದ್ದಾರೆ.
ತಾಜ್ ಮಹಲ್‌ನೊಳಗಿನ 22 ಮುಚ್ಚಿದ ದ್ವಾರಗಳ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನಗಳನ್ನು ಕೋರಿ ಅಲಹಾಬಾದ್ ನ್ಯಾಯಾಲಯದ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸ್ಥಳಿಯ ಸರ್ಕಾರಕ್ಕೆ 2017ರಲ್ಲಿ ಕೇಂದ್ರ ಮಾಹಿತಿ ಆಯೋಗವು, ಮುಸ್ಲಿಂ ಜನರದ್ದೋ ಅಥವಾ ಹಿಂದೂ ಜನರ ಶಿವ ದೇವಾಲಯವೋ ಎಂಬ ಮಾಹಿತಿಯ ನೀಡುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು..
ತಾಜ್ ಮಹಲ್ ಎ ಟ್ರು ಸ್ಟೋರಿ ಎಂಬ ಪುಸ್ತಕವನ್ನು ಪಿ.ಎನ ಓಕಾ ಎಂಬುವವರು ಬರೆದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ತಾಜ್ ಮಹಲ್ ಹಿಂದೂಗಳ ದೇವಾಲಯ ಹೊರತು ಮುಮ್ತಾಜ್‌ಳ ಸಮಾಧಿ ಅಲ್ಲ ಎಂದು ಹಲವಾರು ಪೋಸ್ಟ್‌ ಹರಿಬಿಡಲಾಗಿತ್ತು.
ಔರಂಗ್ ಜೇಬ್ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎನ್ನುವುದು ವಾದವಾಗಿದೆ.
ಅಪಘಾನಿಸ್ಥಾನ್, ಅಲ್ಜಿರಿಯಾ ದಲ್ಲಿರುವ ಯಾವುದೇ ಕಟ್ಟಡಗಳಿಗೆ ಮಹಲ್ ಎಂದು ಕರೆಯುವುದಿಲ್ಲ ಎನ್ನುವುದು ಒಕ್‌ ಅವರ ವಾದವಾಗಿದೆ.
More Stories