Tap to Read ➤

ಏ. 30, ಸೂರ್ಯಗ್ರಹಣ: ಈ ಕೆಲಸ ಮಾಡದಿರಿ ಎಚ್ಚರ

ಈ ವರ್ಷದ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ, ನಾವು ನೋಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..
ಏಪ್ರಿಲ್ 30ರಂದು ಸೂರ್ಯಗ್ರಹಣ ಆಗುತ್ತಿದೆ. ಈ ಸಂದರ್ಭದಲ್ಲಿ ಖಗೋಳ ವೀಕ್ಷಕರು ಸರಿಯಾದ ಸುರಕ್ಷತಾ ಸಾಧನಗಳ ಮೂಲಕ ಗ್ರಹಣ ವೀಕ್ಷಿಸಬೇಕು.
ಮಾಮೂಲಿಯ ಕನ್ನಡಕ, ಕೂಲಿಂಗ್ ಗ್ಲಾಸ್, ಸ್ಮೋಕ್ಡ್ ಗ್ಲಾಸ್, ಎಕ್ಸರೇ ಫಿಲಂ, ನೆಗಟಿವ್ ಫಿಲಂಗಳ ಬಳಕೆ ಬೇಡ
ಕ್ಯಾಮೆರಾದ ಟೆಲಿಫೋಟೋ ಲೆನ್ಸ್ ಮೂಲಕವಾಗಲೀ, ಟೆಲಿಸ್ಕೋಪ್ ಮೂಲಕವಾಗಲೀ ಸೂರ್ಯನನ್ನು ನೇರವಾಗಿ ನೋಡದಿರಿ.
ಯಾವುದೇ ನೀರಿನ ಬಿಂಬದ ಮೂಲಕವೂ ಗ್ರಹಣದ ದೃಶ್ಯ ವೀಕ್ಷಿಸುವ ಪ್ರಯತ್ನ ಬೇಡ
ಶೇ. 99ರಷ್ಟು ಸೂರ್ಯನ ಭಾಗವು ಚಂದ್ರನ ಹಿಂದೆ ಮರೆಯಾಗಿದ್ದಾಗಲೂ ಸೂರ್ಯನ ಶೇ. 1 ಭಾಗದಿಂದ ಬರುವ ಕಿರಣ ನಮ್ಮ ಕಣ್ಣಿಗೆ ಹಾನಿಮಾಡಬಲ್ಲುವು.
ಕಲರ್ ಫಿಲಂಸ್, ಸನ್ ಗ್ಲಾಸ್ ಇತ್ಯಾದಿ ಅಸುರಕ್ಷಿತ ಫಿಲ್ಟರ್ ಸಾಧನಗಳನ್ನ ಸೂರ್ಯಗ್ರಹಣ ವೀಕ್ಷಣೆಗೆ ಬಳಸಬೇಡಿ.
More