Tap to Read ➤

ಶಿವಮೊಗ್ಗ-ತಿರುಪತಿ-ಚೆನ್ನೈ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ

ಶಿವಮೊಗ್ಗ-ರೇಣಿಗುಂಟ (ತಿರುಪತಿ)-ಚೆನ್ನೈ ರೈಲಿಗೆ ಏ.17ರ ಭಾನುವಾರ ಚಾಲನೆ ನೀಡಲಾಗಿದೆ.
ಶಿವಮೊಗ್ಗ ಟೌನ್-ತಿರುಪತಿ-ಚೆನ್ನೈ ಸೆಂಟ್ರಲ್ ಮಲೆನಾಡು ಮತ್ತು ಮೆಟ್ರೋ ನಗರಿ ಚೆನ್ನೈ ಸಂಪರ್ಕಿಸುವ ರೈಲಿಗೆ ಭಾನುವಾರ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ.
ರೈಲಿಗೆ ಚಾಲನೆ
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು. ವಾರಕ್ಕೆ ಎರಡು ದಿನ ಈ ರೈಲು ಸಂಚಾರ ನಡೆಸಲಿದೆ.
ಶಿವಮೊಗ್ಗದಿಂದ ಹೊರಡುವ ರೈಲು ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನೈಋತ್ಯ ರೈಲ್ವೆ ಆರಂಭಿಸಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಭಾಗದಿಂದ ತಿರುಪತಿಗೆ ಹೋಗುವ ಭಕ್ತರಿಗೆ ಮತ್ತು ಚೆನ್ನೈಗೆ ಪ್ರಯಾಣಿಸುವ ಜನರಿಗೆ ಈ ರೈಲು ಅನುಕೂಲವಾಗಿದೆ.
ರೈಲು ಸಂಖ್ಯೆ 06223 ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಡಲಿದೆ. ರೇಣಿಗುಂಟಾ (ತಿರುಪತಿ) ಮಾರ್ಗವಾಗಿ ಚೆನ್ನೈ ಸೆಂಟ್ರಲ್ ನಿಲ್ದಾಣ ತಲುಪಲಿದೆ.
ರೈಲು ಸಂಖ್ಯೆ 06224 ಪ್ರತಿ ಸೋಮವಾರ ಮತ್ತು ಬುಧವಾರ ಪುರಚಿ ತಲೈವರ್ ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸಂಜೆ 7.55ಕ್ಕೆ ಹೊರಟು ರೇಣಿಗುಂಟ (ತಿರುಪತಿ) ಮಾರ್ಗವಾಗಿ ಶಿವಮೊಗ್ಗಕ್ಕೆ ತಲುಪಲಿದೆ.