Tap to Read ➤

ಬೂಮ್ ಬೂಮ್ ಬೆಕರ್

ಎಂಬತ್ತು ತೊಂಬತ್ತರ ದಶಕದಲ್ಲಿ ವಿಶ್ವದ ಅಗ್ರಮಾನ್ಯ ಟೆನಿಸ್ ಆಟಗಾರರಾಗಿ ಮಿಂಚಿದ್ದ ಬೋರಿಸ್ ಬೆಕರ್ ಇಂದು ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.
ಮಾಜಿ ಟೆನಿಸ್ ಆಟಗಾರ ಬೋರಿಸ್ ಬೆಕರ್ ಅವ್ಯವಹಾರ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲುಶಿಕ್ಷೆಗೆ ಒಳಗಾಗಿದ್ದಾರೆ.
ಬೂಮ್ ಬೂಮ್ ಬೋರಿಸ್
17ರ ಹರೆಯದಲ್ಲಿ ಗ್ರ್ಯಾನ್ ಸ್ಲಾಂ ಗೆದ್ದು ಇತಿಹಾಸ ನಿರ್ಮಿಸಿದ್ದ ಬೋರಿಸ್ ಬೆಕರ್ ಬೂಮ್ ಬೂಮ್ ಬೋರಿಸ್ ಎಂದೇ ಖ್ಯಾತರಾಗಿದ್ದರು.
ನಿವೃತ್ತಿ ನಂತರ ನೊವಾಕ್ ಜೋಕೊವಿಚ್ ಅವರಿಗೆ ಕೋಚ್ ಆಗಿಯೂ ಬೆಕರ್ ಕೆಲಸ ಮಾಡಿದ್ದಾರೆ.
ಬೋರಿಸ್ ಬೆಕರ್
ಸಾಲ ಮರುಪಾವತಿ ಮಾಡದೇ ಬೋರಿಸ್ ಬೆಕರ್ ದಿವಾಳಿಯಾದ ಪ್ರಕರಣದಲ್ಲಿ ಸತ್ಯ ಮರೆಮಾಚಿದ ಆರೋಪ ಸಾಬೀತಾಗಿದೆ.
ಬೆಕರ್ ಅವರು ಆಟಗಾರನಾಗಿದ್ದಾಗ ಗಳಿಸಿದ್ದ ಪದಕಗಳು, ಆಸ್ತಿ ಇತ್ಯಾದಿ ವಿವರ ಮರೆಮಾಚಿ ವಂಚಿಸಿದ್ದಾರೆ.
ಆಟಗಾರನಾಗಿ ಗಳಿಸಿದ್ದ ಕೋಟ್ಯಂತರ ಹಣವನ್ನು ನಿವೃತ್ತಿ ಬಳಿಕ ಬೋರಿಸ್ ಬೆಕರ್ ಕಳೆದುಕೊಂಡಿದ್ದಾರೆ.
ಐಷಾರಾಮಿ ಜೀವನ
ಐಷಾರಾಮಿ ಜೀವನ, ಆಡಂಬರ, ಅನೈತಿಕ ಸಂಬಂಧಗಳಿಂದಾಗಿ ಬೋರಿಸ್ ಬೆಕರ್ ಹಣ, ಹೆಸರು ಎಲ್ಲವನ್ನೂ ಕಳೆದುಕೊಂಡಿದ್ದಾರೆ.
ಬೋರಿಸ್ ಬೆಕರ್ ಕತೆ ವ್ಯಥೆ