Tap to Read ➤

ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಉದ್ಘಾಟನೆ

ನರೇಂದ್ರ ಮೋದಿ ದೆಹಲಿಯಲ್ಲಿ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲ ಉದ್ಘಾಟಿಸಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು. ಮೊದಲ ಟಿಕೆಟ್ ಖರೀದಿಸಿ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟರು.
ದೇಶ ಕಂಡ ಈ ಹಿಂದಿನ 14 ಪ್ರಧಾನ ಮಂತ್ರಿಗಳ ಕೊಡುಗೆ, ಜೀವನವನ್ನು ತೆರೆದಿಡುವ ವಸ್ತು ಸಂಗ್ರಹಾಲಯವನ್ನು ನರೇಂದ್ರ ಮೋದಿ ಉದ್ಘಾಟಿಸಿದರು.
ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯವಿದೆ. ಮೊದಲ ಟಿಕೆಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಖರೀದಿ ಮಾಡಿದರು.
ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯವನ್ನು 271 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2018ರಲ್ಲಿ ಈ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿತ್ತು.
46 ಗ್ಯಾಲರಿಗಳನ್ನು ಈ ವಸ್ತು ಸಂಗ್ರಹಾಲಯ ಹೊಂದಿದೆ. ರೈಸಿಂಗ್ ಇಂಡಿಯಾ ಎಂಬ ಪರಿಕಲ್ಪನೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇದನ್ನು ನಿರ್ಮಿಸಲಾಗಿದೆ.
ಈ ವಸ್ತು ಸಂಗ್ರಹಾಯಲದ ಲಾಂಛನ ಜನರು ಕೈಯಲ್ಲಿ ಧರ್ಮ ಚಕ್ರವನ್ನು ಹಿಡಿದಿರುವ ಮಾದರಿಯಲ್ಲಿದೆ. ಇದು ದೇಶ ಮತ್ತು ಪ್ರಜಾಪ್ರಭುತ್ವವನ್ನು ಸೂಚಿಸುತ್ತದೆ.
ಸ್ವಾತಂತ್ರ್ಯ ನಂತರದ ಭಾರತದ ಪ್ರಧಾನಿಗಳ ಜೀವನ, ಸಾಧನೆಗಳ ಕುರಿತು ಜನರಿಗೆ ಸಂಗ್ರಹಾಲಯ ಮಾಹಿತಿಯನ್ನು ನೀಡುತ್ತದೆ. ವಿಶೇಷವಾದ ಚಿತ್ರಗಳು ಸಹ ಇಲ್ಲಿವೆ.
ದೇಶದ ಎಲ್ಲಾ ಪ್ರಧಾನಿಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ.
ಪ್ರಧಾನಿಗಳು ಜಗತ್ತಿನಾದ್ಯಂತ ಪಡೆದುಕೊಂಡ ಉಡುಗೊರೆಗಳನ್ನು ಇದೇ ಮೊದಲ ಬಾರಿಗೆ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ.
ಕಂಪ್ಯೂಟರೈಸ್ಡ್‌ ಕೆತ್ತನೆಗಳು, ಹೋಲೋಗ್ರಾಮ್, ವರ್ಚುವಲ್ ರಿಯಾಲಿಟಿ, ಸ್ಮಾರ್ಟ್‌ ಫೋನ್ ಅಪ್ಲಿಕೇಶನ್‌ಗಳನ್ನು ಈ ಸಂಗ್ರಹಾಲಯ ಒಳಗೊಂಡಿದೆ.
ವಿವರಗಳು