Tap to Read ➤

ಜನ್ಮ ದಿನಾಂಕ 9ನೇ ಸಂಖ್ಯೆ ಗುಣ-ಸ್ವಭಾವ ತಿಳಿಯಿರಿ

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಅವರ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 9 ವಿವರ ಮುಂದಿದೆ..
Mahesh Malnad
ಒಂಬತ್ತನೇ ತಾರೀಖಿನಂದು ಹುಟ್ಟಿದವರು ಒಂದು ಸಿದ್ಧಾಂತವನ್ನು ನಂಬಿ ಬದುಕುವವರು ಮತ್ತು ಮಾನವತಾವಾದಿಗಳು
ಉದಾರ ಮನೋಭಾವ ಮತ್ತು ತಾಳ್ಮೆಯ ನಿಮ್ಮ ವ್ಯಕ್ತಿತ್ವದಲ್ಲಿ ಏರಿಳಿತವಾದರೂ ಸಾಕಷ್ಟು ಜನರಿಗೆ ಪರಿಚಿತರು
ಮತ್ತೊಬ್ಬರ ವಿಷಯದಲ್ಲಿ ಹೆಚ್ಚು ತಲೆಹಾಕದ ಸ್ವಭಾವದವರು, ನಿಮ್ಮ ಜೀವನದ ಮುಖ್ಯ ವಿಷಯವನ್ನು ಮರೆಯುವುದುಂಟು
ಕಷ್ಟದಲ್ಲಿರುವವರನ್ನು ನೋಡಿ ಅನುಕಂಪ ಪಡುವುದಷ್ಟೇ ಅಲ್ಲ, ಅವರಿಗೆ ನೆರವಾಗುವುದಕ್ಕೆ ಮುಂದಾಗುವ ಸ್ವಭಾವದವರು
ದೇವರು, ದೈವದ ಬಗ್ಗೆ ಭಕ್ತಿ ಅಧಿಕ, ಆಧಾತ್ಮ ಪಥವನ್ನು ಮೆಚ್ಚುವವರು, ವಾದ, ಹಠ, ಛಲ ನಿಯಂತ್ರಣ ಅಗತ್ಯ
ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಹೊಟ್ಟೆನೋವು, ಹಲ್ಲು ನೋವು, ಪಾದಗಳ ಊತ, ಉಷ್ಣ ಸಂಬಂಧಿ ಕಾಯಿಲೆ ಸಾಮಾನ್ಯವಾಗಿ ಕಾಡುತ್ತವೆ
ಆತ್ಮಗೌರವಕ್ಕೆ ಚ್ಯುತಿ ಬಂದರೆ ಜಗಳ ನಿಲ್ಲುವವರು, ಇದರಿಂದ ಜೀವನದಲ್ಲಿ ನಿತ್ಯ ಕದನ, ಕಿರಿಕಿರಿ ಅನುಭವಿಸಬಹುದು
ಬಯಸಿದ ಸ್ಥಾನ ದೊರೆತಾಗ ಮಾತ್ರ ಶಕ್ತಿಮೀರಿ ಕಾರ್ಯ ನಿರ್ವಹಿಸುವವರು, ಇಲ್ಲದಿದ್ದರೆ, ನಿರಾಸಕ್ತಿ ಹೊಂದುತ್ತೀರಿ
ಗುಂಡೇಟಿನಂಥ ಮಾತುಗಾರಿಕೆ ಕೆಲವೊಮ್ಮೆ ಆಪ್ತರನ್ನೇ ದೂರಾಗಿಸಬಹುದು, ಸಂಗಾತಿ ಜೊತೆ ಮಾತಿನ ಸ್ಪರ್ಧೆಗಿಳಿದು ಸೋಲಬಹುದು.
8ನೇ ಸಂಖ್ಯೆ ಬಗ್ಗೆ