Tap to Read ➤

ಕಣ್ಮನ ಸೆಳೆದ ದಸರಾ ಡಾಗ್ ಶೋ!

ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಹಲವಾರು ಬಗೆಯ ಶ್ವಾನಗಳು ಮತ್ತು ಸಾಕು ಪ್ರಾಣಿಗಳು ಭಾಗವಹಿಸುವ ಮೂಲಕ ಪ್ರೇಕ್ಷರನ್ನು ರಂಜಿಸಿದವು.
Shivam
ದಸರಾ ಅಂಗವಾಗಿ ಮೈಸೂರು ವಿವಿ ಮೈದಾನದಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಚಾರ್ಲಿ ಸಿನಿಮಾದಲ್ಲಿ ಅಭಿನಯಿಸಿರುವ ಶ್ವಾನ ಮುಖ್ಯ ಅತಿಥಿಯಾಗಿ ಆಗಮಿಸಿತ್ತು.
ಸ್ಪರ್ಧೆಯಲ್ಲಿ ಸುಮಾರು 250 ತಳಿಯ 500 ಶ್ವಾನಗಳು ಭಾಗವಹಿಸಿದ್ದವು.
ಮೈಸೂರು ಸೇರಿದಂತೆ ವಿವಿಧ ಜಿಲ್ಲೆ ಮತ್ತು ದೆಹಲಿ, ಮುಂಬೈ, ಕೊಲ್ಕತಾ, ಗೋವಾ, ಗುಜರಾತ್ ರಾಜ್ಯಗಳಿಂದ ವಿಶೇಷ ಶ್ವಾನಗಳು ಭಾಗವಹಿಸಿದ್ದವು.
ಪಗ್, ಜರ್ಮನ್ ಶಪರ್ಡ್, ಗ್ರೇಟ್ ಡೇನ್, ಗೋಲ್ಡನ್ ರೆಟ್ರಿವರ್, ಮುಧೋಳ್, ರಾಟ್ ವಿಲ್ಲರ್, ಬಾಕ್ಸರ್, ಬ್ರಿಟಿಷ್ ಬುಲ್ಡಾಗ್, ಪ್ರೆಂಚ್ ಬುಲ್, ಡಾಗ, ಮಲ್ಟಿ ಶ್, ಚೌ ಚೌ, ಪಿಟ್ ಬುಲ್, ಅಮೆರಿಕನ್ ಬುಲ್ಲಿ, ಸೈಬೀರಿಯನ್ ಹಸ್ಕಿ ಹೀಗೆ ವಿವಿಧ ತಳಿಯ ಶ್ವಾನಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಶ್ವಾನಗಳು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷರನ್ನು ರಂಜಿಸಿದವು.
ಶ್ವಾನಗಳೊಂದಿಗೆ ಪೋಟೋ ತೆಗಿಸಿಕೊಳ್ಳಲು ಜನರು ದುಂಬಾಲು ಹಾಕಿದರು.
Read more