Tap to Read ➤

ಸೈಕ್ಲೋನ್ ಎದುರಿಸುವ ಮುನ್ನ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ದಕ್ಷಿಣ ಅಂಡಮಾನ್‌ನಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಸೈಕ್ಲೋನ್‌ ಗೆ ಅಸಾನಿ ಎಂದು ಕರೆಯಲಾಗಿದೆ. ಈ ಹಿನ್ನಲೆಯಲ್ಲಿ ಅತಿ ಮುಖ್ಯವಾಗಿ ವಹಿಸಬೇಕಾದ ಮುನ್ನೆಚರಿಕೆ ಕ್ರಮಗಳ ಕುರಿತು ತಿಳಿದುಕೊಳ್ಳೊಣ ಬನ್ನಿ.
ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಕಿಟಕಿ, ಬಾಗಿಲು ಸೇರಿದಂತೆ ಟೈಲ್ಸ್‌ಗಳನ್ನು ದುರಸ್ತಿಗೊಳಿಸಿ
ಮನೆಯ ಹತ್ತಿರದಲ್ಲಿರುವ ಮರಗಳ ಒಣಗಿದ ಕಟ್ಟಿಗೆ, ತರೆದ ಇಟ್ಟಿಗೆ, ತಗಡು, ಶೇಖರವಾಗದಂತೆ ನೋಡಿಕೊಳ್ಳಬೇಕು.
ವೇಗವಾಗಿ ಬಿಸುವ ಗಾಳಿಗೆ ಶೆಡ್‌ಗಳು ತೂರಿಕೊಂಡು ಹೊಗುವ ಕಾರಣ ಸುತ್ತಲು ಇರುವ ಶೆಡ್‌ಗಳಲ್ಲಿ ವಾಸಿಸುವುದು ಬೇಡ.
ಮರದ ಬೋರ್ಡ್‌ಗಳನ್ನು ಕಿಟಕಿಯ ಹತ್ತಿರದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಅವಶ್ಯಕವಾದರೆ ತೇಲಲು ಉಪಯೋಗಿಸಬಹುದು.
ಸೀಮೆಎಣ್ಣೆಯುಕ್ತವಾಗಿರುವ ಲ್ಯಾಪ್‌, ಲಾಟೀನು ಜೊತೆಗೆ ಡ್ರೈ ಇರುವ ಶೆಲ್‌ಗಳನ್ನು ಒಂದೆಡೆ ಸಂಗ್ರಹಿಸಿಟ್ಟಕೊಂಡಿರುವುದು.
ಶಿಥಿಲಗೊಂಡಿರುವ ಕಟ್ಟಡಗಳನ್ನು ನೆಲಸಮ ಮಾಡುವುದು.
ಹೆಚ್ಚಿನ ಪ್ರಮಾಣದಲ್ಲಿ ಲೈಟ್ ಬ್ಯಾಟರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ.
ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಲು ಕೆಲವು ಡ್ರೈ ಪ್ರುಟ್ಸ್‌ ಮತ್ತು ಪ್ರೋಟಿನ್ ಯುಕ್ತ ಆಹಾರವನ್ನು ಸಂಗ್ರಹಿಸುವುದು.
More Updates