Tap to Read ➤

ಮಂಗಳೂರು ಜೋಡಿಯ ಮಂತ್ರ ಮಾಂಗಲ್ಯ ವಿವಾಹ

ಮಂಗಳೂರಿನ ಜೋಡಿಯೊಂದು ಕುವೆಂಪು ಪರಿಕಲ್ಪನೆಯ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆಯಾಗಿದ್ದಾರೆ.
Created by potrace 1.15, written by Peter Selinger 2001-2017
ಕಡಲ ನಗರಿ ಮಂಗಳೂರು ಅಪರೂಪದ ಮಂತ್ರ ಮಾಂಗಲ್ಯ ವಿವಾಹಕ್ಕೆ ಸಾಕ್ಷಿಯಾಗಿದೆ. ಮಲೆನಾಡು ಭಾಗದಲ್ಲಿ ಮಾತ್ರ ನಡೆಯುತ್ತಿದ್ದ ವಿವಾಹ ಮಂಗಳೂರಿನಲ್ಲಿಯೂ ಈಗ ನಡೆದಿದೆ.
Created by potrace 1.15, written by Peter Selinger 2001-2017
ಮಂತ್ರ ಮಾಂಗಲ್ಯ ವಿವಾಹ
ಮಂತ್ರ ಮಾಂಗಲ್ಯ ಮಾದರಿಯಲ್ಲಿ ಛಾಯಾಗ್ರಾಹಕ ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಮಂಗಳೂರಿನಲ್ಲಿ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಹೆತ್ತವರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆಯಲ್ಲಿ ವಿವಾಹವಾದರು.
Created by potrace 1.15, written by Peter Selinger 2001-2017
ಮಂತ್ರ ಮಾಂಗಲ್ಯ ವಿವಾಹ ಅತ್ಯಂತ ಸರಳವಾದ ವಿವಾಹ ಪದ್ಧತಿಯಾಗಿದೆ. ಕುವೆಂಪು ಈ ಪರಿಕಲ್ಪನೆಯಲ್ಲಿ ತಮ್ಮ ಪುತ್ರ ಪೂರ್ಣ ಚಂದ್ರ ತೇಜಸ್ವಿ ಮದುವೆ ಮಾಡಿಸಿದ್ದರು.
Created by potrace 1.15, written by Peter Selinger 2001-2017
ಮಂತ್ರ ಮಾಂಗಲ್ಯ ವಿವಾಹ ಪರಿಕಲ್ಪನೆ ಅನ್ವಯ ವಿವಾಹದ ಯಾವೊಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಕೂಡದು. ವಿವಾಹಕ್ಕೆ ಆಹ್ವಾನಿಸುವವರ ಸಂಖ್ಯೆಗೆ ಸಹ ಮಿತಿ ಇದೆ.