Tap to Read ➤

2022: ಭಾರತದ ಟಾಪ್ 10 ಅತ್ಯಂತ ಶ್ರೀಮಂತರು

2022ರ ಮೊದಲ ತ್ರೈಮಾಸಿಕ ಅವಧಿಯಂತೆ ಭಾರತದ ಅತ್ಯಂತ ಶ್ರೀಮಂತರ ವಿವರ ಇಲ್ಲಿದೆ..
ಗುಜರಾತ್ ಮೂಲದ ಅದಾನಿ ಸಮುದಾಯದ ಸ್ಥಾಪಕ ಹಾಗೂ ಚೇರ್ಮನ್ ಗೌತಮ್ ಅದಾನಿ ಅತ್ಯಂತ ಶ್ರೀಮಂತರಾಗಿದ್ದು, 107.6 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಗೌತಮ್ ಅದಾನಿ
ಮುಕೇಶ್ ಅಂಬಾನಿ
ಮುಂಬೈ ಮೂಲದ ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಸಿಇಒ ಹಾಗೂ ಚೇರ್ಮನ್. ಸರಿ ಸುಮಾರು 101.6 ನಿವ್ವಳ ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ.
ಶಿವ ನಾಡರ್
ಎಚ್ ಸಿ ಎಲ್ ಟೆಕ್ನಾಲಜೀಸ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಶಿವ್ ನಾಡಾರ್ ಅವರು ತಮ್ಮದೇ ಹೆಸರಿನ ಫೌಂಡೇಶನ್ ಹೊಂದಿದ್ದಾರೆ. ಇವರು ನಿವ್ವಳ 28.3 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಸೈರಸ್ ಪೂನಾವಾಲ
ಸೈರಸ್ ಪೂನಾವಾಲ ಸಮೂಹ ಸಂಸ್ಥೆ, ಕೊರೊನಾ ಲಸಿಕೆ ಉತ್ಪಾದಕ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಒಡೆಯರಾಗಿರುವ ಇವರ ಆಸ್ತಿ ನಿವ್ವಳ 25.2 ಬಿಲಿಯನ್ ಡಾಲರ್.
ಸಾವಿತ್ರಿ ಜಿಂದಾಲ್ ಹಾಗೂ ಕುಟುಂಬ
ಓ.ಪಿ ಜಿಂದಾಲ್ ಸಮೂಹ ಸಂಸ್ಥೆಯ ಒಡತಿ, ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಯಾಗಿರುವ ಇವರ ನಿವ್ವಳ ಆಸ್ತಿ ಮೌಲ್ಯ 19.3 ಬಿಲಿಯನ್ ಡಾಲರ್.
ಲಕ್ಷ್ಮಿ ಮಿತ್ತಲ್
ಉಕ್ಕು ಉದ್ಯಮದ ದಿಗ್ಗಜ ಲಕ್ಷ್ಮಿ ನಿವಾಸ್ ಮಿತ್ತಲ್ ಅವರು ಭಾರತದ ಮೂಲದ ಉದ್ಯಮಿಯಾಗಿದ್ದು, ಯುನೈಟೆಡ್ ಕಿಂಗ್ಡಮ್ ನಲ್ಲಿ ನೆಲೆಸಿದ್ದಾರೆ. ಇವರ ಆಸ್ತಿ ಮೌಲ್ಯ 18.5 ಬಿಲಿಯನ್ ಡಾಲರ್ ನಷ್ಟಿದೆ.
ಕುಮಾರ್ ಬಿರ್ಲಾ
ಕುಮಾರ್ ಬಿರ್ಲಾ ಭಾರತೀಯ ಉದ್ಯಮಿ ಹಾಗೂ ಮಹಾದಾನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಒಡೆಯರಾಗಿರುವ ಇವರ ಆಸ್ತಿ ಮೌಲ್ಯ 17.1 ಬಿಲಿಯನ್ ಡಾಲರ್.
ದಿಲಿಪ್ ಶಾಂಘ್ವಿ: ಸನ್ ಫಾರ್ಮಾಸ್ಯೂಟಿಕಲ್ಸ್ ಸ್ಥಾಪಕರಾಗಿರುವ ದಿಲಿಪ್ ಸಾಂಘ್ವಿ ಅವರ ಆಸ್ತಿ ಮೌಲ್ಯ 16.2 ಬಿಲಿಯನ್ ಡಾಲರ್.
ಸುನೀಲ್ ಮಿತ್ತಲ್
ಸುನೀಲ್ ಭಾರ್ತಿ ಮಿತ್ತಲ್ ಅವರು ಭಾರ್ತಿ ಏರ್ ಟೆಲ್ ಸೇರಿದಂತೆ ಸಮೂಹ ಸಂಸ್ಥೆ ಮಾಲೀಕರಾಗಿದ್ದಾರೆ. ಇವರ ನಿವ್ವಳ ಮೌಲ್ಯ 15.5 ಬಿಲಿಯನ್ ಡಾಲರ್.
ಒನ್ಇಂಡಿಯಾ ಕನ್ನಡ ಪ್ರಸ್ತುತಿ
ಇನ್ನಷ್ಟು ವೆಬ್ ಸ್ಟೋರಿಸ್ ನೋಡಲು ಕ್ಲಿಕ್ ಮಾಡಿ