Tap to Read ➤

ಬೆಂಗಳೂರು-ತುಮಕೂರು ನಡುವೆ ಹೆಚ್ಚುವರಿ ರೈಲುಗಳು

ಏಪ್ರಿಲ್ 8 ರಿಂದ ಡೆಮು ಬದಲು ಮೆಮು ರೈಲುಗಳು ಸಂಚಾರ ನಡೆಸಲಿವೆ. ಇದರಿಂದಾಗಿ ನೂರಾರು ಜನರಿಗೆ ಸಹಾಯಕವಾಗಲಿದೆ.
Created by potrace 1.15, written by Peter Selinger 2001-2017
ನೈಋತ್ಯ ರೈಲ್ವೆ ಬೆಂಗಳೂರು-ತುಮಕೂರು ನಡುವೆ ಹೆಚ್ಚುವರಿ ರೈಲನ್ನು ಓಡಿಸಲು ತೀರ್ಮಾನಿಸಿದೆ. ಏಪ್ರಿಲ್ 8ರಿಂದ ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ.
Created by potrace 1.15, written by Peter Selinger 2001-2017
16 ಬೋಗಿಗಳ ರೈಲು
ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ನಡುವೆ ಇದುವರೆಗೂ 8 ಬೋಗಿಗಳ ಡೆಮು ರೈಲು ಸಂಚರಿಸುತ್ತಿತ್ತು. ಈಗ ಡೆಮು ರೈಲು ಬದಲು 16 ಬೋಗಿಗಳ ಮೆಮು ರೈಲು ಓಡಿಸಲಾಗುತ್ತಿದೆ.
Created by potrace 1.15, written by Peter Selinger 2001-2017
ಮೆಮು ರೈಲುಗಳ ಸಂಚಾರ
ಹಲವು ವರ್ಷಗಳಿಂದ ಬೆಂಗಳೂರು-ತುಮಕೂರು ನಡುವೆ ಹೆಚ್ಚುವರಿ ರೈಲು ಓಡಿಸಬೇಕು ಎಂಬ ಬೇಡಿಕೆ ಇತ್ತು. ಈಗ ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಮೆಮು ರೈಲುಗಳನ್ನು ಓಡಿಸಲಾಗುತ್ತಿದೆ.
Created by potrace 1.15, written by Peter Selinger 2001-2017
ಬೆಂಗಳೂರಿನಿಂದ ಮಧ್ಯಾಹ್ನ 1.50ಕ್ಕೆ ಹೊರಡುವ ರೈಲು ಮಧ್ಯಾಹ್ನ 3.20ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಡುವ ರೈಲು 5.25ಕ್ಕೆ ಕೆಎಸ್ಆರ್‌ ನಿಲ್ದಾಣಕ್ಕೆ ವಾಪಸ್ ಆಗಲಿದೆ.
Created by potrace 1.15, written by Peter Selinger 2001-2017
ಬೆಂಗಳೂರು-ಅರಸೀಕೆರೆ
ಬೆಂಗಳೂರು-ಅರಸೀಕೆರೆ ನಡುವೆ 8 ಬೋಗಿಗಳ ಡೆಮು ರೈಲು ಬದಲು 17 ಐಸಿಎಫ್ ಕೋಚ್‌ಗಳ ಸಾಂಪ್ರದಾಯಿಕ ರೈಲು ಏಪ್ರಿಲ್ 8ರಿಂದ ತನಕ ಸಂಚಾರ ನಡೆಸಲಿದೆ. ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದ್ದ ರೈಲನ್ನು ಚನ್ನಪಟ್ಟಣದ ತನಕ ವಿಸ್ತರಣೆ ಮಾಡಲಾಗಿದೆ.
Created by potrace 1.15, written by Peter Selinger 2001-2017
ಜನರಿಗೆ ಅನುಕೂಲ
ಬೆಂಗಳೂರು-ಅರಸೀಕೆರೆ ನಡುವಿನ ರೈಲನ್ನು ಚನ್ನಪಟ್ಟಣದ ತನಕ ವಿಸ್ತರಣೆ ಮಾಡಿರುವುದರಿಂದ ನೂರಾರು ಜನರಿಗೆ ಸಹಾಯಕವಾಗಲಿದೆ. ಅರಸೀಕೆರೆಯಿಂದ ಚನ್ನಪಟ್ಟಣಕ್ಕೆ ಬರುವ ರೈಲು ಸಂಜೆ 4.50ಕ್ಕೆ ಚನ್ನಪಟ್ಟಣದಿಂದ ಹೊರಟು ಅರಸೀಕೆರೆಗೆ ಸಾಗಲಿದೆ.