Tap to Read ➤

ಹಾಸನ ಕೆಎಸ್ಆರ್‌ ಬೆಂಗಳೂರು ಡೆಮು ರೈಲು ವೇಳಾಪಟ್ಟಿ

ನೈಋತ್ಯ ರೈಲ್ವೆ ಬೆಂಗಳೂರು-ಹಾಸನ ನಡುವೆ ಏಪ್ರಿಲ್ 8ರಿಂದ ಡೆಮು ರೈಲು ಸಂಚಾರ ಆರಂಭಿಸಲಿದೆ.
ಬೆಂಗಳೂರು-ಹಾಸನ ನಡುವೆ ನೈಋತ್ಯ ರೈಲ್ವೆ ಡೆಮು ರೈಲು ಸಂಚಾರವನ್ನು ಪುನಃ ಆರಂಭಿಸುತ್ತಿದೆ. ಕೋವಿಡ್ ಸಮಯದಲ್ಲಿ ಈ ರೈಲು ಸ್ಥಗಿತಗೊಂಡಿತ್ತು.
ರೈಲು ಸ್ಥಗಿತವಾಗಿತ್ತು
ಕೆಎಸ್ಆರ್ ಬೆಂಗಳೂರು-ಹಾಸನ ನಡುವೆ ಏಪ್ರಿಲ್ 8ರಿಂದ ಈ ರೈಲು ಭಾನುವಾರ ಹೊರತುಪಡಿಸಿ ಉಳಿದ ದಿನ ಪ್ರತಿನಿತ್ಯ ಸಂಚಾರ ನಡೆಸಲಿದೆ.
ಕೋವಿಡ್ ಪರಿಸ್ಥಿತಿಗೂ ಮೊದಲು ಯಶವಂತಪುರ-ಹಾಸನ ನಡುವೆ ರೈಲು ಸಂಚಾರ ನಡೆಸುತ್ತಿತ್ತು. ಈಗ ಕೆಎಸ್ಆರ್ ಬೆಂಗಳೂರು-ಹಾಸನ ನಡುವೆ ರೈಲು ಸಂಚಾರ ನಡೆಸಲಿದೆ.
ಕೆಎಸ್ಆರ್‌ ಬೆಂಗಳೂರು ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 9.45ಕ್ಕೆ ಹೊರಡುವ ರೈಲು 9.57ಕ್ಕೆ ಯಶವಂತಪು ತಲುಪಲಿದೆ. ಅಲ್ಲಿಂದ 9.59ಕ್ಕೆ ಹೊರಟು 1.45ಕ್ಕೆ ಹಾಸನ ತಲುಪಲಿದೆ.
ಹಾಸನದಿಂದ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು ಸಂಜೆ 6 ಗಂಟೆಗೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ ತಲುಪಲಿದೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳು ಈ ರೈಲು ಸಂಚಾರ ನಡೆಸಲಿದೆ.
ಬೋಗಿಗಳ ಈ ರೈಲು ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮಾರ್ಗವಾಗಿ ಸಂಚಾರ ನಡಡೆಸಲಿದೆ. ಬೆಂಗಳೂರು-ಹಾಸನ ನಡುವಿನ 15 ನಿಲ್ದಾಣಗಳಲ್ಲಿಯೂ ನಿಲುಗಡೆ ಇದೆ.
ಬೆಂಗಳೂರು-ಹಾಸನ ನಡುವೆ ಸರ್ಕಾರಿ, ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಇದರ ಪ್ರಯಾಣ ದರಗಳು ಹೆಚ್ಚಿವೆ. ಈ ಹಿನ್ನಲೆಯಲ್ಲಿ ಡೆಮು ರೈಲು ಜನರಿಗೆ ಸಹಾಯಕವಾಗಲಿದೆ.