Tap to Read ➤

105 ಸಾಂಖ್ಯಿಕ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ!

ಕರ್ನಾಟಕ ಲೋಕಸೇವಾ ಆಯೋಗ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
Shivam
ಕರ್ನಾಟಕ ಲೋಕಸೇವಾ ಆಯೋಗ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 17/11/2022 ಕೊನೆಯ ದಿನವಾಗಿದೆ.
ಆಯೋಗವು ಒಟ್ಟು 105 ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ಅರ್ಜಿ ಶುಲ್ಕವನ್ನು ಪಾವತಿ ಮಾಡಲು 18/11/2022 ಕೊನೆಯ ದಿನವಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 27,650 ರಿಂದ 52,650 ರೂ. ನಿಗದಿ ಮಾಡಲಾಗಿದೆ.
ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ. ಪ್ರವರ್ಗ (2)ಎ, (2)ಬಿ, 3(ಎ), 3(ಬಿ) 38 ವರ್ಷ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಮತ್ತು 40 ವರ್ಷಗಳನ್ನು ನಿಗದಿ ಪಡಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1. Economics 2. Statistics 3.Mathematics 4. Computer Science ನಲ್ಲಿ ಪದವಿ ಹೊಂದಿರಬೇಕು
ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ. ಶುಲ್ಕ ಪಾವತಿಸಬೇಕು.
ಪ್ರವರ್ಗ (2)ಎ, (2)ಬಿ, 3(ಎ), 3(ಬಿ) ಅಭ್ಯರ್ಥಿಗಳು 300 ರೂ.ಗಳು, ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಶುಲ್ಕ ಪಾವತಿಸಬೇಕು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾದ್ದು, 35 ರೂ. ಪ್ರಕ್ರಿಯೆ ಶುಲ್ಕ ಕಟ್ಟಬೇಕು.
ಹೆಚ್ಚಿನ ಮಾಹಿತಿಗಾಗಿ ದೂ: 080-30574957/ 30574901. ಮೈಸೂರು 0821-2545956, ಬೆಳಗಾವಿ 0831-2475345 ಸಂಪರ್ಕಿಸಬಹುದು.
Read more