Tap to Read ➤

ನ.17: ಅಪಸ್ಮಾರದ ಬಗ್ಗೆ ಜಾಗೃತಿಗೊಂದು ದಿನ

ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 17 ರಂದು ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ
Mahesh Malnad
ಅಪಸ್ಮಾರ(Epilepsy) ಮೆದುಳಿನ ದೀರ್ಘಕಾಲದ ಅಸ್ವಸ್ಥತೆ ಲಕ್ಷಣ, ಮೂರ್ಛೆ ರೋಗ ಎಂದು ಕರೆಯಲಾಗುತ್ತದೆ
ಎಪಿಲೆಪ್ಸಿ ದೀರ್ಘಕಾಲದ ಮೆದುಳಿನ ಅಸ್ವಸ್ಥತೆಯಾಗಿದೆ. ಇದು ಮರುಕಳಿಸುವುದರಿಂದ ಫಿಟ್ಸ್‌ಗೆ ಕಾರಣವಾಗುತ್ತದೆ
ನರಕೋಶಗಳು ಅಥವಾ ಮೆದುಳಿನ ಕೋಶಗಳಲ್ಲಿ ಹಠಾತ್ ಬದಲಾವಣೆಯಿಂದ ಎಪಿಲೆಪ್ಸಿ ಸಂಭವಿಸುತ್ತವೆ
ಅಪಸ್ಮಾರ ರೋಗವು ಮನುಷ್ಯನ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿರುತ್ತವೆ
WHO ಪ್ರಕಾರ, ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅಪಸ್ಮಾರ ಹೆಚ್ಚಾಗಿ ಕಾಣಿಸುತ್ತದೆ
ಜಗತ್ತಿನಲ್ಲಿ ಸುಮಾರು 50 ಮಿಲಿಯನ್ ಜನರು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ 80 ರಷ್ಟು ಮಂದಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ
ಭಾರತದಲ್ಲಿ ಸುಮಾರು 10 ಮಿಲಿಯನ್ ಜನರು ಅಪಸ್ಮಾರಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಅಪಸ್ಮಾರ ರೋಗವನ್ನು ಸರಿಯಾದ ಔಷಧಿಗಳ ಮೂಲಕ ಗುಣಪಡಿಸಬಹುದು ಎಂಬುದನ್ನು ಮರೆಯಬೇಡಿ. ಆದರೆ ನಾವು ಚಿಕಿತ್ಸೆಯನ್ನು ವಿಳಂಬ ಮಾಡಬಾರದು
ಆರೋಗ್ಯ ಸುದ್ದಿ