Tap to Read ➤

ಭಾರತದ 50ನೇ ಸಿಜೆಐ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಕುರಿತ ಮಾಹಿತಿ!

ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿರುವ ಧನಂಜಯ ವೈ. ಚಂದ್ರಚೂಡ್‌ ಭಾರತದ ಸಿಜೆಐಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Shivam
ಧನಂಜಯ್ ಅವರು ನವೆಂಬರ್ 11ರಂದು 1959 ರಲ್ಲಿ ಮುಂಬೈನಲ್ಲಿ ಜನಿಸಿದರು.
ಚಂದ್ರಚೂಡ್ ಅವರು 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿವಂಗತ ವೈವಿ ಚಂದ್ರಚೂಡ್ ಅವರ ಪುತ್ರರಾಗಿದ್ದಾರೆ.
ಧನಂಜಯ್ ಅವರು ದೆಹಲಿ ವಿವಿಯಿಂದ ಕಾನೂನು ಪದವಿ ಮತ್ತು ಅಮೆರಿಕದ ಹಾರ್ವರ್ಡ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಅ. 31ರ 2013ರಂದು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ನಂತರದಲ್ಲಿ ಚಂದ್ರಚೂಡ್ ಅವರು ಮೇ 13, 2016ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಅಯೋಧ್ಯೆ ಭೂ ವಿವಾದ ಮತ್ತು ಖಾಸಗಿತನದ ಹಕ್ಕು ಸೇರಿದಂತೆ ಹಲವಾರು ಸಂವಿಧಾನ ಪೀಠಗಳು ಮತ್ತು ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ.
ಐಪಿಸಿಯ ಸೆಕ್ಷನ್ 377, ಆಧಾರ್ ಯೋಜನೆಯ ಸಿಂಧುತ್ವ ಮತ್ತು ಶಬರಿಮಲೆ ಸಮಸ್ಯೆ, ಸಲಿಂಗ ಸಂಬಂಧಗಳನ್ನು ಅಪರಾಧೀಕರಿಸುವ ಕುರಿತು ನಿರ್ಣಾಯಕ ತೀರ್ಪುಗಳನ್ನು ನೀಡಿದ ಪೀಠಗಳ ಭಾಗವಾಗಿದ್ದರು.
ಸಿಜೆಐ ಡಿವೈ ಚಂದ್ರಚೂಡ್ ಅವರು 2024 ನವೆಂಬರ್ 10ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.
Know more