Tap to Read ➤

ಕೋವಿಡ್ 19: ಸಿಎಂಗಳ ಜೊತೆ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಸಲಹೆಗಳು

ಪ್ರಧಾನ ಮಂತ್ರಿಯವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ.
ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿನ ಕೋವಿಡ್ 19 ಪರಿಸ್ಥಿತಿಯನ್ನು ಪ್ರಧಾನಿ ಮೋದಿಗೆ ವಿವರಿಸಿದರು
ಟೆಸ್ಟ್, ಟ್ರ್ಯಾಕ್, ಟ್ರೇಸ್ ಮತ್ತು ಟೀಕಾ - ಈ ನಾಲ್ಕು T ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
6-12 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದನ್ನೇ ಶಾಲೆಯಲ್ಲಿ ಅಭಿಯಾನದಂತೆ ಆರಂಭಿಸಬೇಕು
ಸಾರ್ವಜನಿಕವಾಗಿ ಜನರು ಮಾಸ್ಕ್ ಧರಿಸದೇ ಓಡಾಡಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
15-18 ವರ್ಷದವರಿಗೆ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು
ಕೋವಿಡ್ - 19 ಸೋಂಕಿತರಿಗೆ ಆಸ್ಪತ್ರೆಗಳನ್ನು ಸಿದ್ದಪಡಿಸಬೇಕು
ಎರಡೂ ಡೋಸ್ ಲಸಿಕೆ ತೆಗೆದುಕೊಳ್ಳದೇ ಇರುವವರ ಮನವೊಲಿಸುವ ಕೆಲಸವನ್ನು ಮಾಡಬೇಕು
ಜನರು ಅನಾವಶ್ಯಕವಾಗಿ ಆತಂಕ, ಗಾಬರಿಗೊಳಗಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ನಿರ್ಬಂಧ ಸದ್ಯಕ್ಕೆ ಅವಶ್ಯವಿಲ್ಲ.
ಆತಂಕ ಬೇಡ: ಮೋದಿ
ಇನ್ನಷ್ಟು ಮಾರ್ಗಸೂಚಿಗಳು