Tap to Read ➤

ಮೇ 14: ಕರ್ನಾಟಕದ ಪ್ರಮುಖ ನಗರಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
ಬಾಗಲಕೋಟೆಯಲ್ಲಿ ಗಾಳಿಯ ವೇಗ 49ಕಿ. ಮೀ ನಂತಿದ್ದು, ತಾಪಮಾನ ಹಿಗ್ಗಿ 36 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 1.0 ಎಂಎಂ ಮಳೆ ಬಿದ್ದಿದ್ದು, ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಳೆ ಮುನ್ಸೂಚನೆ
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನ ವಾತಾವರಣ
ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ, ವ್ಯಾಪಕವಾಗಿ ಸಾಧಾರಣ ಮಳೆ ಸಾಧ್ಯತೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು 25 ಮತ್ತು 20 ಡಿಗ್ರಿ C ಇರಲಿದೆ.
ಮಂಗಳೂರು(32 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 87ರಷ್ಟಿದ್ದು, ಮಳೆ 6.3 ಎಂಎಂರಷ್ಟು ಸುರಿದಿದೆ.
ಶಿವಮೊಗ್ಗ(32 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ಕುಗ್ಗಿ 43 ಕಿ. ಮೀ ನಂತಿದೆ.
ಮೈಸೂರು (31 ಡಿಗ್ರಿ ಸೆಲ್ಸಿಯಸ್) ಮಳೆ ಅಷ್ಟಾಗಿ ಸುರಿದಿಲ್ಲ. ತೇವಾಂಶ 60% ದಾಟಿದೆ
ಬಳ್ಳಾರಿ: 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಯಚೂರು 36ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 57ರಷ್ಟಿದೆ
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ತಗ್ಗಿದೆ. 33 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಧಿಕ ಬಿಸಿಲು  ಕಂಡು ಬಂದಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಟಿದೆ
ಇನ್ನಷ್ಟು ಹವಾಮಾನ ಸುದ್ದಿ