Tap to Read ➤

ಕರ್ನಾಟಕದಲ್ಲಿ ಎಲ್ಲಿ ಮಳೆ, ಎಲ್ಲಿ ಸುಡು ಬಿಸಿಲು

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
Mahesh Malnad
ಬಾಗಲಕೋಟೆಯಲ್ಲಿ ಗಾಳಿಯ ವೇಗ 35 ಕಿ. ಮೀ ನಂತಿದ್ದು, ತಾಪಮಾನ ಹಿಗ್ಗಿ 40 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬೆಂಗಳೂರಲ್ಲಿ 7.6 ಎಂಎಂ ಮಳೆ ಬಿದ್ದಿದ್ದು, ತೇವಾಂಶ 59% ದಾಟಿದೆ. ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು(33 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 67ರಷ್ಟಿದ್ದು, ಮಳೆ 5.3 ಎಂಎಂರಷ್ಟು ಸುರಿದಿದೆ.
ಶಿವಮೊಗ್ಗ(34 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ಹಿಗ್ಗಿ 38 ಕಿ. ಮೀ ನಂತಿದ್ದು, 5.5 ಎಂಎಂ ಮಳೆ ಬಿದ್ದಿದೆ
ಮೈಸೂರು (34 ಡಿಗ್ರಿ ಸೆಲ್ಸಿಯಸ್) ಮಳೆ 7.6 ಎಂಎಂ ನಷ್ಟು ಸುರಿದಿದೆ. ಗಾಳಿ ವೇಗ 34 ಕಿ.ಮೀ ಪ್ರತಿ ಗಂಟೆಯಷ್ಟಿದೆ.
ಬಳ್ಳಾರಿ ಬಿರು ಬಿಸಿಲಿನ ಜೋರಾಗಿದ್ದು, 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ
ರಾಯಚೂರು 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 46ರಷ್ಟಿದೆ
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ 1.0 ಎಂಎಂ ಮಳೆ ಬಿದ್ದಿದೆ. 36 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ಕಲಬುರಗಿಯಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು. ರಾಜ್ಯದಲ್ಲೇ ಅತ್ಯಧಿಕ ಬಿಸಿಲು ಕಂಡು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 1.0 ಎಂಎಂ ಮಳೆ ಬಿದ್ದಿದೆ. ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದೆ
ಇನ್ನಷ್ಟು ಹವಾಮಾನ ಸುದ್ದಿ