Tap to Read ➤

ಏ.29: ಕರ್ನಾಟಕದ ಪಟ್ಟಣಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಬಿಸಿಲು ಮತ್ತೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ಬಿಸಿ ಗಾಳಿ, ತಾಪಮಾನ ವರದಿ ಇಲ್ಲಿದೆ...
Mahesh Malnad
ಬಾಗಲಕೋಟೆಯಲ್ಲಿ ಗಾಳಿಯ ವೇಗ ತಗ್ಗಿ 26 ಕಿ. ಮೀ ನಂತಿದ್ದು, ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬೆಂಗಳೂರಲ್ಲಿ ಸಂಜೆ ಮಳೆ ಬಿದ್ದಿದ್ದು, ತೇವಾಂಶ 38% ದಾಟಿದೆ. ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು (33 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 55ರಷ್ಟಿದ್ದು, 1 ಎಂಎಂ ಮಳೆ ಬಿದ್ದಿದೆ.
ಶಿವಮೊಗ್ಗ(38 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ತಗ್ಗಿ 25 ಕಿ. ಮೀ ನಂತಿದ್ದರೂ ಧಗೆ ಇಳಿಕೆಯಾಗಿಲ್ಲ
ಮೈಸೂರು (39 ಡಿಗ್ರಿ ಸೆಲ್ಸಿಯಸ್) ಮಳೆ ಬಿದ್ದಿಲ್ಲ, ಗಾಳಿ ವೇಗ 26 ಕಿ.ಮೀ ಪ್ರತಿ ಗಂಟೆಯಷ್ಟಿದೆ
ಬಳ್ಳಾರಿ ಬಿರು ಬಿಸಿಲಿನ ಜೋರಾಗಿದ್ದು, 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ರಾಯಚೂರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 32ರಷ್ಟಿದೆ
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಬಿದ್ದಿಲ್ಲ, 38 ಡಿಗ್ರಿ ಸೆಲ್ಸಿಯಸ್ ನಂತೆ ತಾಪಮಾನವಿದೆ.
ರಾಜ್ಯದಲ್ಲೇ ಅತ್ಯಧಿಕ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಟಿದೆ
ಹವಾಮಾನ ಸುದ್ದಿಗಳು