Tap to Read ➤

ಕರ್ನಾಟಕದ ಪ್ರಮುಖ ಪಟ್ಟಣಗಳ ಹವಾಮಾನ ವರದಿ

ಬೇಸಿಗೆ ಬಿಸಿಲಿನ ತಾಪದ ಜೊತೆಗೆ ಕರ್ನಾಟಕದ ಹಲವೆಡೆ ಕಳೆದ 24 ಗಂಟೆಗಳಲ್ಲಿ ಮಳೆ ಸುರಿದಿದೆ. ಹವಾಮಾನ ವರದಿ ಇಲ್ಲಿದೆ..
ಬಾಗಲಕೋಟೆಯಲ್ಲಿ ಬೇಸಿಗೆ ಬಿಸಿಲಿನ ತಾಪ ಹೆಚ್ಚಳ, ತಂಪು ಗಾಳಿಯೂ ಇಲ್ಲ
ಬೆಂಗಳೂರಲ್ಲಿ ಮಳೆ 5.1 ಮಿಲಿ ಮೀಟರ್ ಸುರಿದಿದೆ. ಪ್ರತಿ ಗಂಟೆಗೆ ಸುಮಾರು 16 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಮಂಗಳೂರಲ್ಲಿ 4.1 ಮಿಲಿ ಮೀಟರ್ ಮಳೆ ಸುರಿದರೂ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ನಷ್ಟಿದೆ.
ಶಿವಮೊಗ್ಗದಲ್ಲಿ 4.3 ಮಿಲಿ ಮೀಟರ್ ಮಳೆ ಬಿದ್ದಿದೆ. ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಮೈಸೂರು ಮಳೆ ಪ್ರಮಾಣ 1 ಮಿಲಿ ಮೀಟರ್ ನಷ್ಟಿದ್ದು, ಬಿಸಿಲು ಹೆಚ್ಚಾಗಿದ್ದು, 36 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಬಳ್ಳಾರಿ ಬಿಸಿಲು ಹೆಚ್ಚಾಗಿದ್ದು, 38 ಡಿಗ್ರಿ ಸೆಲ್ಸಿಯಸ್ ದಾಟಿದೆ. ಪ್ರತಿ ಗಂಟೆಗೆ ಸುಮಾರು 26 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ರಾಯಚೂರು ಅಲ್ಪ ಪ್ರಮಾಣದಲ್ಲಿ ಮಳೆ(0.5 ಎಂಎಂ) ಕಂಡಿದೆ. ಗಾಳಿ ಪ್ರತಿ ಗಂಟೆಗೆ 21 ವೇಗದಲ್ಲಿ ಬೀಸುತ್ತಿದೆ.
ಚಿತ್ರದುರ್ಗದಲ್ಲಿ ಬೇಸಿಗೆಯಲ್ಲೂ 1.4 ಎಂಎಂ ಮಳೆ ಬಿದ್ದಿದ್ದು, ಶೇ 56ರಷ್ಟು ತೇವಾಂಶ ಹೊಂದಿದೆ.
ಕಲಬುರಗಿಯಲ್ಲಿ ಅತ್ಯಧಿಕ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಪ್ರಿಲ್ 19ರಂತೆ 1.9 ಎಂಎಂ ಮಳೆ ಸುರಿದರೂ 37 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ಮತ್ತಷ್ಟು ಮಳೆ ಸುದ್ದಿಗಾಗಿ