Tap to Read ➤

ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ 2022

ಬೆಂಗಳೂರಿನ ಪಾರಂಪರಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭಾನುವಾರ(ನ.20) ಸಂಜೆ ಚಾಲನೆ ಸಿಕ್ಕಿದೆ
Mahesh Malnad
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಮುಖಂಡರಾದ ರವಿ ಸುಬ್ರಹ್ಮಣ್ಯ, ಗರುಡಾಚಾರ್, ಕಟ್ಟೆ ಸತ್ಯ,ಜೆಡಿಎಸ್ ಮುಖಂಡ ಶರವಣ ಉಪಸ್ಥಿತಿ
ದೊಡ್ಡ ಬಸವಣ್ಣನಿಗೆ ಕಡಲೆಕಾಯಿಯ ಮಹಾ ಅಭಿಷೇಕ ಸೋಮವಾರ ಬೆಳಗ್ಗೆ 6 ಗಂಟೆಗೆ ನಡೆಯಲಿದೆ
ಕಡಲೆಕಾಯಿ ಪರಿಷೆ ಅಂಗವಾಗಿ ಬ್ಯೂಗಲ್ ರಾಕ್ ಉದ್ಯಾನವನ, ನರಸಿಂಹಸ್ವಾಮಿ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಪಾಸ್ಟಿಕ್ ಬಳಕೆ ಮಾಡಬೇಡಿ, ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಸೋಣ ಎಂದು ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ಕರೆ ಕೊಟ್ಟಿದ್ದು, ಜನರಲ್ಲಿಯೂ ಜಾಗೃತಿ ಮೂಡಿಸುತ್ತಿವೆ
ಕಾನೂನು ಸುವ್ಯವಸ್ಥೆ ಕಾಪಾಡಲು 600 ಪೊಲೀಸ್, ಹೋಂ ಗಾರ್ಡ್ಸ್‌, ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ
ವಾಹನ ಪಾರ್ಕಿಂಗ್
ಎಪಿಎಸ್ ಕಾಲೇಜು ಮೈದಾನ, ಕೊಹಿನೂರು ಆಟದ ಮೈದಾನ ಮತ್ತು ಆಶ್ರಮ ವೃತ್ತದಲ್ಲಿ ಜಾಗ ಕಲ್ಪಿಸಲಾಗಿದೆ
ದಶಕಗಳ ಬಳಿಕ ಕಡಲೆಕಾಯಿ ಪರಿಷೆಯ ಸಮಯದಲ್ಲಿ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಪರಿಷೆಗೆ 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ.
ಕಡ್ಲೇಕಾಯಿ ಪರಿಷೆ ಸುದ್ದಿ