Tap to Read ➤

ಉಡುಪಿ ಮನೆಯ ಟಾರಸಿಯಲ್ಲಿ ಅರಳಿತು ಮಲ್ಲಿಗೆ ತೋಟ

ಎಲ್ಲಾ ಶುಭ ಕಾರ್ಯಕ್ಕೂ ಬೇಕಾಗುವ ಮಲ್ಲಿಗೆಯನ್ನು ಟಾರಸಿಯಲ್ಲೇ ಬೆಳೆಯಬಹುದು
ಹೂವಿಗೆ ಬೇಡಿಕೆ
ಕರಾವಳಿಯಲ್ಲಿ ಮಲ್ಲಿಗೆ ಹೂವಿಗೆ ಬೇಡಿಕೆ ಹೆಚ್ಚು. ಎಲ್ಲಾ ಶುಭ ಕಾರ್ಯಕ್ರಮಗಳಿಗೂ ಮಲ್ಲಿಗೆಯ ಕಂಪೂ ಬೇಕು. ಹೆಣ್ಣು ಮಕ್ಕಳು ತಲೆಗೆ ಮಲ್ಲಿಗೆ ಮುಡಿದರೆ ಲಕ್ಷಣವಾಗಿ ಕಾಣಿಸುತ್ತಾರೆ ಅನ್ನೋದು ಬಹುಜನರ ಅಭಿಪ್ರಾಯ.
ಮಲ್ಲಿಗೆ ಬೆಳೆ ಎಲ್ಲಾ ಕಡೆಯಲ್ಲೂ ಬೆಳೆಯಲು ಆಗಲ್ಲ ಎಂಬುದು ರೈತರ ವಾದ. ಹವಾಗುಣದ ಬದಲಾವಣೆ ಸರಿ ಹೊಂದಲ್ಲ ಅಂತ ಕೃಷಿಕರ ವಾದ. ಆದರೆ ಉಡುಪಿಯ ಕೃಷಿಕರಿಬ್ಬರು ಇದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ.
ಮಲ್ಲಿಗೆ ಘಮ
ಮಲ್ಲಿಗೆ ಹೂ
ತಮ್ಮ ಮನೆಯ ಟಾರೆಸಿನಲ್ಲೇ ಮಲ್ಲಿಗೆ ಬೆಳೆ ಬೆಳೆದು ಸಾಧಿಸಿ ತೋರಿಸಿದ್ದಾರೆ. ಮಲ್ಲಿಗೆ ಹೂವಿನ ಮಾರಾಟದಿಂದ ತಿಂಗಳಿಗೆ 10 ಸಾವಿರ ಆದಾಯ ಪಡೆಯುತ್ತಿದ್ದಾರೆ.
ಖರ್ಚು ಕಡಿಮೆ
ಉಡುಪಿಯ ಕಾಪು ತಾಲೂಕಿನ ಇನ್ನಂಜೆಯ ಉದಯ್ ಎಂಬುವವರು ತೋರಿಸಿ ಕೊಟ್ಟಿದ್ದಾರೆ. ಟಾರಸಿಯಲ್ಲಿ ಸುಮಾರು 100 ಗಿಡ ನೆಟ್ಟು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಮಲ್ಲಿಗೆ ಕೃಷಿ


ವಾಣಿಜ್ಯ ಉದ್ದೇಶದಿಂದ  ಕೃಷಿ ಆರಂಭ ಮಾಡಿರಲಿಲ್ಲ. ಸ್ವಲ್ಪ ಗಿಡ ನೆಟ್ಟು ಪ್ರಯೋಗ ಮಾಡಿದರು. ಪ್ರಯೋಗ ಫಲ ನೀಡಿತು. ಬೆಳೆ ನಿರೀಕ್ಷೆಗಿಂತಲೂ ಹೆಚ್ಚು ಫಸಲು ನೀಡಿತು.
ಕೃಷಿಗೆ ಸಹಾಯ
ಮಲ್ಲಿಗೆಯಿಂದ ತಿಂಗಳಿಗೆ 10 ಸಾವಿರ ರೂಪಾಯಿ ಸಂಪಾದನೆ. ಮನೆಯವರು  ಸಹಾಯ ಮಾಡುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ. ಮೂರು ಲಕ್ಷ ಆದಾಯ ಬರುವಂತೆ ಬೆಳೆಯುವ ಗುರಿ ಇದೆ.
ಭಾರೀ ಬೇಡಿಕೆ
ಹೂವಿನ ಕೃಷಿ
ನೆಲೆದ ಮೇಲೆ ಮಾಡುವ ಮಲ್ಲಿಗೆ ಕೃಷಿಗೆ ಹೋಲಿಸಿದರೆ ಟಾರಸಿ ಮೇಲಿನ ಮಲ್ಲಿಗೆ ಕೃಷಿ ಉತ್ತಮ. ಅಲ್ಲದೇ ಕಳೆ ಗಿಡಗಳ ಕಾಟವೂ ಮಲ್ಲಿಗೆಗೆ ಇಲ್ಲ. ಖರ್ಚು ಕಮ್ಮಿಯ ಜೊತೆಗೆ ಹೆಚ್ಚು ನೀರಿನ ಅವಶ್ಯಕತೆ ಟಾರಸಿ ಮಲ್ಲಿಗೆ ಕೃಷಿಗೆ ಇಲ್ಲ.
ಕಡಿಮೆ ನೀರು