Tap to Read ➤

2022ರಲ್ಲಿ 3 ತಿಂಗಳಲ್ಲಿ 3 ಮುಖ್ಯ ನ್ಯಾಯಮೂರ್ತಿಗಳು

ಮೂರೇ ತಿಂಗಳಲ್ಲಿ ದೇಶದ ನ್ಯಾಯಾಂಗದ ಅತ್ಯುನ್ನತ ಹುದ್ದೆಯನ್ನು ಮೂವರು ಮುಖ್ಯ ನ್ಯಾಯಮೂರ್ತಿಗಳು ಅಲಂಕರಿಸಿದ್ದಾರೆ.
2022ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೂರು ಮುಖ್ಯ ನ್ಯಾಯಮೂರ್ತಿಗಳು ಹುದ್ದೆಯನ್ನು ಅಲಂಕರಿಸಲಿರುವುದು ವಿಶೇಷ
ಹಾಲಿ ಸಿಜೆಐ ಎನ್.ವಿ ರಮಣ ತಮ್ಮ 16 ತಿಂಗಳ ಅಧಿಕಾರಾವಧಿ ಬಳಿಕ ಆಗಸ್ಟ್ 26ರಂದು ನಿವೃತ್ತಿಯಾಗಲಿದ್ದಾರೆ. ಇವರ ಸ್ಥಾನವನ್ನು ಜಸ್ಟೀಸ್ ಯು.ಯು ಲಲೀತ್ ಅಲಂಕರಿಸಲಿದ್ದಾರೆ.
ಉದಯ್ ಯು ಲಲಿತ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಅಲಂಕರಿಸಲಿದ್ದು, ಕೇವಲ ಎರಡು ತಿಂಗಳು ಮಾತ್ರ ಸಿಜೆಐ ಆಗಲಿದ್ದಾರೆ.
ಉದಯ್ ಯು ಲಲಿತ್ ಬಳಿಕ ನವೆಂಬರ್ 8ರಂದು ಧನಂಜಯ ವೈ ಚಂದ್ರಚೂಡ್ ಈ ವರ್ಷದ 3ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸುವರು
1991ರಲ್ಲಿ ಮೂರು ತಿಂಗಳ ಅವಧಿಯಲ್ಲಿ ಮೂರು ನ್ಯಾಯಮೂರ್ತಿಗಳನ್ನು ಕಾಣಲಾಗಿತ್ತು. ಇದಾದ ಬಳಿಕ ಇಂಥ ನಿದರ್ಶನ ಇದೇ ಮೊದಲು
ಜಸ್ಟೀಸ್ ಸಿಂಗ್ ಕೇವಲ 17 ದಿನಗಳ ಅವಧಿಗೆ ಸಿಜೆಐ ಆಗಿದ್ದರು, ನಂತರ ಜಸ್ಟೀಸ್ ಎಂ.ಎಚ್ ಕನಿಯಾ ಡಿಸೆಂಬರ್ 13,1991ರಿಂದ ನವೆಂಬರ್ 17, 1992ರ ತನಕ ಸಿಜೆಐ ಆಗಿದ್ದರು.
ಹಿರಿತನದ ಆಧಾರದ ಮೇಲೆ ಸಿಜೆಐ ನೇಮಕ ನಡೆಯಲಿದ್ದು, ಸುಪ್ರೀಂಕೋರ್ಟ್ ಜಡ್ಜ್ ನಿವೃತ್ತಿ ವಯೋಮಿತಿ ಗರಿಷ್ಠ 65 ವರ್ಷ ಎಂದು ಸಂವಿಧಾನ ನಿಗದಿ ಪಡಿಸಿದೆ
ಸುಪ್ರೀಂಕೋರ್ಟ್ ಸುದ್ದಿಗಳು