Tap to Read ➤

ಮೊಬೈಲ್‌ನಲ್ಲಿಯೇ ಬೆಳೆ ಸಮಿಕ್ಷೆ ಮಾಡಬಹುದು ಗೊತ್ತೆ?

ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿದ್ದು ಈ ಆ್ಯಪ್ ಬಳಸಿಕೊಂಡು ಹೇಗೆ ಸಮಿಕ್ಷೆ ಮಾಡಬಹುದು ಎಂಬುದನ್ನು ತಿಳಿಯಿರಿ
Shivam Muradimath
ರೈತ ಬೆಳೆ ಸಮೀಕ್ಷೆ ಆ್ಯಪ್'ನಲ್ಲಿ ರೈತರು ಬೆಳೆಗಳ ಮಾಹಿತಿ ಅಪ್‌ಲೋಡ್ ಮಾಡಿದರೆ ಬೆಳೆಹಾನಿ ಆದ ಸಂದರ್ಭದಲ್ಲಿ ಬೆಳೆ ವಿಮೆ, ಪರಿಹಾರ ಧನ ವಿತರಣೆಗೂ ಸಹಾಯಕವಾಗಿದೆ.
ಸಮೀಕ್ಷೆ ಆ್ಯಪ್  ಗೂಗಲ್ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ ಲೋಡ್ ಮಾಡಿಕೊಂಡ ಬಳಿಕ ನಂತರ ವರ್ಷ, ಮುಂಗಾರು / ಹಿಂಗಾರು ಬೆಳೆ, ದೂರವಾಣಿ ಸಂಖ್ಯೆ ನಮೂದಿಸಬೇಕು.
ಗೂಗಲ್ ಪ್ಲೇ ಸ್ಟೋರ್ ನಲ್ಲಿ "Kharif Season Farmer Crop Survey" ಎಂದು ಟೈಪ್ ಮಾಡಿ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಆ್ಯಪ್ ಅನ್ನು ಬಳಸಿಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪ್‍ಲೋಡ್ ಮಾಡಬಹುದು
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಲೋಕೇಶನ್, ಮಾಲೀಕರ ವಿವರ ದಾಖಲು ಮಾಡಬೇಕು.
ರೈತರು ಬೆಳೆ ವಿವರ, ಬಳಕೆಯಾಗದ ಪ್ರದೇಶ, ಬೆಳೆ ವಿಧ, ನೀರಾವರಿ ವಿಧ, ಬೆಳೆ ವಿಸ್ತಿರ್ಣ, ಈ ಮಾಹಿತಿಯನ್ನು ನೀಡಿಬೇಕು. ನಂತರ ಬೆಳೆಯ 3 ಛಾಯಾಚಿತ್ರಗಳನ್ನು ಆಪ್‍ಲೋಡ್ ಮಾಡಬೇಕು
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ,  ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆ ಕಛೇರಿ ಅಥವಾ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 84484 47715 ಸಂಪರ್ಕಿಸಬಹುದು
More Updates