Tap to Read ➤

ಬಿಡಿಎ ವೆಬ್‌ತಾಣ ಬಳಸಿ ಆಸ್ತಿ ತೆರಿಗೆ ಪಾವತಿ ಹೇಗೆ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆನ್‌ಲೈನ್ ಪೋರ್ಟಲ್ ಬಳಸಿ ಆಸ್ತಿ ತೆರಿಗೆ ಪಾವತಿಸುವ ಸರಳ ವಿಧಾನ ಇಲ್ಲಿದೆ..
ಬೆಂಗಳೂರಿನ ನಿವಾಸಿಗಳು ತಮ್ಮ ಸ್ಥಿರಾಸ್ತಿ ತೆರಿಗೆ ಪಾವತಿಸಲು ಬಿಡಿಎ ವೆಬ್‌ತಾಣ (https://propertytax.bdabangalore.org/)ಕ್ಕೆ ಭೇಟಿ ಕೊಡಿ
ಬಿಡಿಎ ಅಧಿಕೃತ ವೆಬ್‌ತಾಣದ ಮುಖ್ಯಪುಟದಲ್ಲಿ ನಿಮ್ಮ ಪ್ರಾಪರ್ಟಿ ನಂಬರ್,ಸೈಟ್ ನಂಬರ್, ನಿಮ್ಮ ಹೆಸರು ದಾಖಲಿಸಿ.
ಪ್ರಾಪರ್ಟಿ ನಂಬರ್: ಹಳೆ ತೆರಿಗೆ ಪಾವತಿಸಿದ ರಸೀತಿಯಲ್ಲಿರುವ 10 ಅಂಕಿಯುಳ್ಳ ಸಂಖ್ಯೆ

ಸೈಟ್ ಐಡಿ: ಹಳೆ ತೆರಿಗೆ ಪಾವತಿಸಿದ ರಸೀತಿಯಲ್ಲಿರುವ ನಿವೇಶನ ಸಂಖ್ಯೆ
ಪ್ರಾಪರ್ಟಿ ನಂಬರ್, ಸೈಟ್ ಐಡಿ, ಹೆಸರು Submit ಮಾಡಿ, ನಂತರ ಮೊಬೈಲ್ ಸಂಖ್ಯೆ, ಇಮೇಲ್ ನಮೂದಿಸಿ
ನಿಮ್ಮ ನೋಂದಾಯಿತ ಮೊಬೈಲ್ ಹಾಗೂ ಇಮೇಲ್ ಐಡಿಗೆ One Time Passwod (ಒಟಿಪಿ) ಬರಲಿದೆ. ಒಟಿಪಿ ಸಲ್ಲಿಸಿ
ನಿಮ್ಮ ಆಸ್ತಿ ವಿವರ, ತೆರಿಗೆ ಮೊತ್ತ ವಿವರ ತೋರಿಸಲಾಗುತ್ತದೆ, ತೆರಿಗೆ ಮೊತ್ತ ಆಯ್ಕೆ ಮಾಡಿ,ಪಾವತಿ ವಿಭಾಗಕ್ಕೆ ತೆರಳಿ, ಸರಳ ವಿವರಣಾತ್ಮಕ ವಿಧಾನದ ಮೂಲಕ ಮೊತ್ತ ಪಾವತಿಸಿ
ಮೊತ್ತ ಪಾವತಿಸಲು ಅನೇಕ ಆಯ್ಕೆಗಳಿದ್ದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬಹುದು
ಹಣ ಪಾವತಿ ಯಶಸ್ವಿಯಾದ ಬಳಿಕ, ರಸೀತಿಯನ್ನು ಪ್ರಿಂಟ್ ಮಾಡಿಕೊಳ್ಳಿ,

ಕಚೇರಿ ವಿಳಾಸ: ಬಿಡಿಎ ಕಚೇರಿ, ಕುಮಾರ ಪಾರ್ಕ್ ಪಶ್ಚಿಮ, ಟಿ ಚೌಡಯ್ಯ ರಸ್ತೆ, ಬೆಂಗಳೂರು-560020
ಇನ್ನಷ್ಟು ವಿವರ