Tap to Read ➤

ಮೊಬೈಲ್ ಮೂಲಕ ಬಿಎಂಟಿಸಿ ಪಾಸು ಪಡೆಯುವುದು ಹೇಗೆ?

ಬಿಎಂಟಿಸಿ ದಿನ, ವಾರ, ಮಾಸಿಕ ಪಾಸ್ ಮೊಬೈಲ್ ಅಪ್ಲಿಕೇಶನ್ ಮೂಲ ಪಡೆಯಿರಿ
ಬಿಎಂಟಿಸಿಯ ದಿನ, ವಾರ, ಮಾಸಿಕ ಬಸ್ ಪಾಸುಗಳು ಮೊಬೈಲ್ ಮೂಲಕ ಪಡೆಯುವ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.
ಬಸ್ ಪಾಸು ಪಡೆಯಿರಿ
ಬಿಎಂಟಿಸಿ ಪಾಸು ವಿತರಣೆಗೆ ಟುಮೋಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೂರು ತಿಂಗಳು ಪ್ರಾಯೋಗಿಕವಾಗಿ ವೋಲ್ವೋ ಮತ್ತು 200 ಸಾಮಾನ್ಯ ಬಸ್‌ಗಳಲ್ಲಿ ಡಿಜಿಟಲ್ ಪಾಸು ಪರಿಚಯಿಸಲಾಗುತ್ತಿದೆ
ಇಷ್ಟು ದಿನ ಪ್ರಯಾಣಿಕರು ಟಿಟಿಎಂಸಿ, ಬಸ್ ನಿಲ್ದಾಣದಲ್ಲಿ ಕಾದು ನಿಂತು ಪಾಸು ಪಡೆಯಬೇಕಿತ್ತು. ಈಗ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪಾಸು ಪಡೆಯಬಹುದು.
ಬಿಎಂಟಿಸಿಯು ಮೊಬೈಲ್ ಮೂಲಕ ಪಾಸು ವಿತರಣೆ ಮಾಡಲು ಟುಮೋಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ವಿವರ ತುಂಬಿ ಪಾಸು ಪಡೆಯಬಹುದು.
ಪಾಸು ಪಡೆದ ದಿನದಿಂದ 30 ದಿನಗಳ ತನಕ ಡಿಜಿಟಲ್ ಪಾಸು ಅವಧಿ ಹೊಂದಿರುತ್ತದೆ. ಆದರೆ ಕಾಗದದ ಪಾಸುಗಳು ತಿಂಗಳ 1ನೇ ತಾರೀಕಿನಿಂದ 31ರ ತನಕ ಮಾತ್ರ ಮಾನ್ಯತೆ ಪಡೆದಿರುತ್ತವೆ.
ಡಿಜಿಟಲ್ ಪಾಸು ಪಡೆಯುವವರು ಮೊಬೈಲ್‌ಗೆ Tummoc ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಮೊಬೈಲ್ ಸಂಖ್ಯೆ, ಹೆಸರು, ವಯಸ್ಸು ನಮೂದು ಮಾಡಬೇಕು. ಸರ್ಕಾರಿ ಗುರುತಿನ ಚೀಟಿ ಸಂಖ್ಯೆ ಸೇರಿಸಬೇಕು.
ಇತ್ತೀಚಿನ ಫೋಟೋ ಸೇರಿಸಬೇಕು. ಬಳಿಕ ಪಾಸ್ ಮೊತ್ತವನ್ನು ಆಯ್ಕೆ ಮಾಡಿಕೊಂಡು ಫೋನ್ ಪೇ, ಗೂಗಲ್ ಪೇ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ಕ್ಯಾಶ್ ಲೆಸ್ ಪಾವತಿ
ಮೊಬೈಲ್ ಮೂಲಕ ಡಿಜಿಟಲ್ ಪಾಸು ಪಡೆದವರು ಬಸ್ ಹತ್ತುವಾಗ ನಿರ್ವಾಹಕರಿಗೆ ನೀಡಲಾದ ಕ್ಯೂ ಆರ್ ಕೋಡ್‌ಗೆ ಸ್ಕ್ಯಾನ್ ಮಾಡಬೇಕು. ಇದಕ್ಕಾಗಿ Tummoc ನಿರ್ವಾಹಕರಿಗೆ ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ನೀಡಲಿದೆ.
ಇನ್ನಷ್ಟು ವಿವರಕ್ಕಾಗಿ ಓದಿ