ಸಪ್ತಪದಿ ಉಚಿತ ಸರಳ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಸಪ್ತಪದಿ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ
2020ರ ಜನವರಿ 10ರಂದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಯೋಜನೆಯನ್ನು ಆರಂಭಿಸಿದ್ದರು. ಮುಜರಾಯಿ ಇಲಾಖೆಯ ಆಯ್ದ ದೇವಾಲಯಗಳಲ್ಲಿ ಸರಳವಾಗಿ ವಿವಾಹ ಆಯೋಜನೆ ಮಾಡುವುದು ಈ ಯೋಜನೆ ಉದ್ದೇಶ.
ದಿನಾಂಕಗಳು
ವಿವಾಹವಾಗುವ ಜೋಡಿಗೆ ಸರ್ಕಾರ ಅಂಗಿ, ಧೋತಿ, ಮಂಗಳಸೂತ್ರ, ಸೀರೆ ಇವುಗಳ ಖರ್ಚಿಗೆ ಸುಮಾರು 55 ಸಾವಿರ ರೂ. ಸಹಾಯಧ ನೀಡುತ್ತದೆ. ವಧುವಿನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
ನಿಯಮಗಳು
ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಆಯ್ದ ದೇವಾಲಯಗಳಲ್ಲಿ ಮಾತ್ರ ಮದುವೆ ನಡೆಯಲಿದೆ. ಎರಡೂ ಕಡೆ ಪೋಷಕರು ಹಾಜರಿದ್ದರೆ ಮಾತ್ರ ವಿವಾಹ.
ಪ್ರೇಮ ವಿವಾಹಕ್ಕೆ ಈ ಯೋಜನೆ ಅನ್ವಯವಾಗುವುದಿಲ್ಲ. ನಿಮ್ಮ ಸಮೀಪದ ದೇವಾಲಯದಲ್ಲಿ ಈ ಕುರಿತು ವಿಚಾರಿಸಿ, 30 ದಿನ ಮೊದಲು ಆಫ್ಲೈನ್ ಮೂಲಕ ಅರ್ಜಿ ಪಡೆದು ಸಲ್ಲಿಕೆ ಮಾಡಬೇಕು. ಅರ್ಜಿ ಪರಿಶೀಲಿಸಿ, ದಿನಾಂಕ ತಿಳಿಸಲಾಗುತ್ತದೆ.
ಅರ್ಜಿ ಸಲ್ಲಿಸುವಾಗ ಆಧಾರ್, ವಿಳಾಸದ ಪುರಾವೆ, ನಿವಾಸಿ ಪ್ರಮಾಣ ಪತ್ರ, ವಯಸ್ಸಿನ ಪುರಾವೆ, ಜಾತಿ ಪ್ರಮಾಣ ಪತ್ರ, ಪೋಷಕರ ಒಪ್ಪಿಗೆ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ವಿವಾಹದ ದಿನಾಂಕವನ್ನು ಸರ್ಕಾರವೇ ತೀರ್ಮಾನ ಮಾಡುತ್ತದೆ.