ಕಾಶ್ಮೀರ ಕಣಿವೆಯ ಹಿಮರೂಪಿ ಅಮರನಾಥ ದರ್ಶನಕ್ಕೆ ಯಾತ್ರೆಗೆ ಜೂನ್ 30ರಂದು ಚಾಲನೆ. ಯಾತ್ರೆಗೆ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ ಇಲ್ಲಿದೆ ವಿಧಾನ...
ಅಮರನಾಥ ದೇಗುಲದ ವಾರ್ಷಿಕ ಯಾತ್ರೆಗೆ ಜೂನ್ 30ರಂದು ಚಾಲನೆ, ಏಪ್ರಿಲ್ 11ರಿಂದ ನೋಂದಣಿ, ಟಿಕೆಟ್ ಬುಕ್ಕಿಂಗ್ ಆರಂಭ
ಯಾತ್ರೆಗೆ ನೋಂದಣಿ ಆರಂಭ
ಅಮರನಾಥ ದೇವಾಲಯ
ಕಾಶ್ಮೀರದ ಒಂದು ಗುಹೆಯೊಳಗೆ ಮಂಜಿನ ಗೆಡ್ಡೆ ಲಿಂಗದ ಆಕಾರವನ್ನು ಹೊಂದಲಿದ್ದು, ಇದನ್ನು ಶಿವನ ಪ್ರತಿರೂಪ ಎಂದು ಪೂಜಿಸಲಾಗುತ್ತದೆ
ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಯಾತ್ರೆ ಸರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ ಉಗ್ರರ ಉಪಟಳ, ಕೊರೊನಾ ಸಾಂಕ್ರಾಮಿಕದ ಕಾಟ, ಹವಾಮಾನ ವೈಪರೀತ್ಯ ಎಲ್ಲವೂ ಕಾರಣವಾಗಿತ್ತು.
ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ನಿಂದ ಹಾಗೂ ಗಂದರ್ಬಾಲ್ ಜಿಲ್ಲೆಯ ಬಾಲ್ಟಲ್ ಎರಡು ಮಾರ್ಗಗಳಿಂದ ಮಾತ್ರ ತೆರಳಲು ಅನುಮತಿ ನೀಡಲಾಗಿದೆ.
ಎರಡು ಮಾರ್ಗಗಳಿವೆ
ಜಮ್ಮು-ಪಹಲ್ಗಾಮ್ ಮಾರ್ಗ ಮತ್ತು ಜಮ್ಮು-ಬಲ್ತಾಲ್ ರಸ್ತೆಯ ದಾರಿಯುದ್ದಕ್ಕೂ 40,000ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಸಿಆರ್ಪಿಎಫ್ ಮತ್ತು ರಾಜ್ಯ ಪೊಲೀಸ್ ಪಹರೆ
ಯಾತ್ರೆಗೆ ನೋಂದಣಿ ಹೇಗೆ? ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಹಾಗೂ ಕಾಶ್ಮೀರ ಬ್ಯಾಂಕ್, ಯೆಸ್ ಬ್ಯಾಂಕ್ನ ದೇಶದ ಎಲ್ಲಾ ಶಾಖೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು
ನೋಂದಣಿ ಪ್ರಕ್ರಿಯೆ, ಅರ್ಜಿ ಹಾಗೂ ರಾಜ್ಯಾವಾರು ಬ್ಯಾಂಕ್ ಶಾಖೆಗಳ ಸಂಪೂರ್ಣ ವಿವರ ಮಂಡಳಿಯ ವೆಬ್ ಸೈಟ್ನಲ್ಲಿ ಲಭ್ಯವಿದೆ- ಯಾತ್ರೆ ಮಂಡಳಿ ಮುಖ್ಯಸ್ಥ ನಿತಿಶ್ವರ್ ಕುಮಾರ್
ಯಾತ್ರೆಗೆ ಏನೆಲ್ಲಾ ಅವಶ್ಯಕ?
ಆರೋಗ್ಯ ಪ್ರಮಾಣಪತ್ರ ಹಾಗೂ ಫೋಟೊವುಳ್ಳ ಗುರುತು ಪತ್ರ ನೋಂದಣಿ ಅರ್ಜಿ ತುಂಬಿಸಿ, ಮೊಬೈಲ್ ನಂಬರ್ ಪರಿಶೀಲನೆ ನೋಂದಾಯಿತ ಮೊಬೈಲ್ಗೆ ದೃಢೀಕರಣ ಸಂದೇಶ ಬರಲಿದೆ ನೋಂದಣಿ ನಂತರ ಯಾತ್ರಾ ಪರ್ಮಿಟ್ ಡೌನ್ಲೋಡ್
13 ವರ್ಷಕ್ಕಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧ ನೋಂದಣಿ ಮಾಡಲು ಬಯಸುವವರು www.shriamarnathjishrine.com ಅಥವಾ jksab.nic.inಗೆ ಭೇಟಿ ನೀಡಬಹುದಾಗಿದೆ.