Tap to Read ➤

ಹೊಸಪೇಟೆ-ಹರಿಹರ ಡೆಮು ರೈಲು ವೇಳಾಪಟ್ಟಿ

ಹೊಸಪೇಟೆ-ಹರಿಹರ-ದಾವಣಗೆರೆ ನಡುವೆ ಡೆಮು ರೈಲು ಸಂಚಾರ ಆರಂಭಗೊಂಡಿದೆ.
ಹೊಸಪೇಟೆ-ಬಳ್ಳಾರಿ-ಹರಿಹರ (ದಾವಣಗೆರೆ ಮಾರ್ಗ) ನಡುವೆ ಸಂಚಾರ ನಡೆಸುವ ಡೆಮು ರೈಲಿಗೆ ಚಾಲನೆ ಸಿಕ್ಕಿದೆ. ಮಂಗಳವಾರದಿಂದ ರೈಲು ಸಂಚಾರ ನಡೆಸುತ್ತಿದೆ.
ರೈಲಿಗೆ ಚಾಲನೆ
ಹೊಸಪೇಟೆಯಿಂದ ಹರಿಹರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಲು 197 ರೂ. ವೆಚ್ಚವಾಗಲಿದೆ. ಆದರೆ ರೈಲಿನಲ್ಲಿ 35 ರೂ. ಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದರಿಂದಾಗಿ ಜನರಿಗೆ ಅನುಕೂಲವಾಗಲಿದೆ.
ಈ ವಿಶೇಷ ಡೆಮು ಪ್ಯಾಸೆಂಜರ್ ರೈಲು 10 ಬೋಗಿಯನ್ನು ಹೊಂದಿದೆ. ಪ್ರಾಯೋಗಿಕವಾಗಿ ರೈಲು ಏಪ್ರಿಲ್ 12 ರಿಂದ ಅ. 15ರವರೆಗೆ ಭಾನುವಾರ ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿದೆ.
ಭಾನುವಾರ ಸಂಚಾರವಿಲ್ಲ
ರೈಲು ಸಂಖ್ಯೆ 07395 ಬೆಳಗ್ಗೆ 7.30ಕ್ಕೆ ಬಳ್ಳಾರಿಯಿಂದ ಹೊರಟು 9.10ಕ್ಕೆ ಹೊಸಪೇಟೆಗೆ ತಲುಪಿ, ಮಧ್ಯಾಹ್ನ12.50ಕ್ಕೆ ದಾವಣಗೆರೆಗೆ ತಲುಪಿ, ಮಧ್ಯಾಹ್ನ 1.50ಕ್ಕೆ ಹರಿಹರಕ್ಕೆ ತಲುಪುತ್ತದೆ.
ಹರಿಹರದಿಂದ ರೈಲು ಸಂಖ್ಯೆ 07396 ಮಧ್ಯಾಹ್ನ 2ಕ್ಕೆ ಹೊರಟು ದಾವಣಗೆರೆ, ಹರಪನಹಳ್ಳಿ ಮಾರ್ಗವಾಗಿ ಹೊಸಪೇಟೆಗೆ ಸಂಜೆ 5.25ಕ್ಕೆ ತಲುಪಲಿದೆ. 6.30ಕ್ಕೆ ಹೊರಟು ಬಳ್ಳಾರಿಗೆ ರಾತ್ರಿ 8 ಗಂಟೆಗೆ ತಲುಪುತ್ತದೆ.
ರೈಲು ಸಂಖ್ಯೆ 07397 ಬೆಳಗ್ಗೆ 5.40ಕ್ಕೆ ಹೊಸಪೇಟೆಯಿಂದ ಹೊರಟು ಗಾದಿಗನೂರು, ತೋರಣಗಲ್ಲು, ದರೋಜಿ, ಕುಡತಿನಿ ಮಾರ್ಗವಾಗಿ ಬಳ್ಳಾರಿಗೆ ಬೆಳಗ್ಗೆ 7.20ಕ್ಕೆ ತಲುಪುತ್ತದೆ.
ರೈಲು ಸಂಖ್ಯೆ 07398 ರಾತ್ರಿ 8.10ಕ್ಕೆ ಬಳ್ಳಾರಿಯಿಂದ ಹೊರಟು ಕುಡತಿನಿ, ದರೋಜಿ, ತೋರಣಗಲ್ಲು, ಗಾದಿಗನೂರು ಮಾರ್ಗವಾಗಿ ರಾತ್ರಿ 9.45ಕ್ಕೆ ಹೊಸಪೇಟೆ ತಲುಪಲಿದೆ.
ಪೂರ್ಣ ವರದಿ ಓದಿ