ಈ ಸರಳ ವಿಧಾನಗಳನ್ನು ಅನುಸರಿಸಿ, ಕಾರನ್ನು ಬಿಸಿಲಿನಿಂದ ರಕ್ಷಿಸಿ
ನಿಮ್ಮ ಕಾರನ್ನು ಬಿಸಿಲಿನಲ್ಲಿ ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವುದನ್ನು ತಿಳಿಯಲು ಮುಂದೆ ನೋಡಿ,
ಕಾರಿನಲ್ಲಿ ಕೂರುವ ಮುನ್ನ ಎಲ್ಲ ವಿಂಡೋಗಳನ್ನು ತೆರೆದು, ಡ್ರೈವರ್ ಬಳಿಯ ಬಾಗಿಲನ್ನು ತೆಗೆದು- ಹಾಕುವುದನ್ನು ಕನಿಷ್ಠ 2 ನಿಮಿಷಗಳವರೆಗೆ ಮಾಡಿದರೆ
ಕಾರಿನಲ್ಲಿರುವ ಬಿಸಿ ಗಾಳಿ ಹೊರಗೆ ಹೋಗುತ್ತದೆ.
ಪ್ರತಿ ಬಾರಿ ಎಸಿ ಬಳಸುವುದರಿಂದ ಮುಂಗಾಜು ಬಿರುಕು ಬರುವ ಸಾಧ್ಯತೆಗಳಿರುವುದರಿಂದ, ಎಲ್ಲ ಕಿಟಕಿಗಳನ್ನು ತೆರೆದುಕೊಂಡು ವಾಹನ ಚಲಾಯಿಸುವುದು ಸೂಕ್ತ.
ಪಾರ್ಕಿಂಗ್ ಮಾಡಿದಾಗ ಕಾರನ್ನು ಕವರ್ ಮಾಡುವುದು ಉತ್ತಮ. ಇದರಿಂದ ನೇರವಾಗಿ ಬಿಸಿಲು ಕಾರಿಗೆ ತಾಗುವುದಿಲ್ಲ
ಕಾರಿನಲ್ಲಿ ಸೋಲಾರ್ ಆಧಾರಿತ ಫ್ಯಾನ್ ಗಳನ್ನು ಬಳಸಿ, ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನ ಬಾಳಿಕೆ ಬರುತ್ತವೆ.
ಕಾರಿನ ಒಳಗಡೆ ತಿಳಿ ಬಣ್ಣದ ಸೀಟ್ ಕವರ್ ಹಾಕಿಸುವುದರಿಂದ ಕಾರಿನಲ್ಲಿ ತಂಪು ವಾತಾವರಣ ಇರುತ್ತದೆ.
ಕಾರಿನಲ್ಲಿ ಕೂರುವ ಮುನ್ನ ಎಲ್ಲ ವಿಂಡೋಗಳನ್ನು ತೆರೆದಿಡಬೇಕು.