Tap to Read ➤

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ 176 ಹುದ್ದೆಗಳ ನೇಮಕಾತಿ

ಬಿಡಿಎ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 18/6/2022 ರಂದು ಕೊನೆಯ ದಿನ ನಿಗದಿಪಡಿಸಿದೆ.
Shivam Muradimath
ಬಿಡಿಎ ಪ್ರಥಮ ದರ್ಜೆ ಸಹಾಯಕ 78, ದ್ವಿತೀಯ ದರ್ಜೆ ಸಹಾಯಕ 98 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ.
18/6/2022ರ ಒಳಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೋರಲಾಗಿದೆ.
ಹೆಸರು, ಜನ್ಮ ದಿನಾಂಕ, ಸರ್ಕಾರದ ಸೇವೆಗೆ ಸೇರಿದ ದಿನಾಂಕ, ಇಲಾಖೆ, ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆ ಮತ್ತು ಕಚೇರಿ ವಿಳಾಸ, ವಿದ್ಯಾರ್ಹತೆ ಮತ್ತು ಅನುಭವ ಮಾಹಿತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು
ಕಳೆದ 10 ವರ್ಷಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇರವಾಗಿ ಪ್ರ. ದ. ಸ/ ಎ. ದ. ಸ/ ತತ್ಸಮಾನ ಹುದ್ದೆಗಳಿಗೆ ನೇಮಕವಾಗಿರುವವರಿಗೆ ಆದ್ಯತೆ
ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಗಳಲ್ಲಿ ಪ್ರ. ದ. ಸ/ ಎ. ದ. ಸ ಹಾಗೂ ತತ್ಸಮಾನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ನೌಕರರ ನಿಯೋಜನೆಗೆ ಆದ್ಯತೆ
ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕುಮಾರ ಪಾರ್ಕ್‌ ಪಶ್ಚಿಮ, ಟಿ. ಚೌಡಯ್ಯ ರಸ್ತೆ, ಬೆಂಗಳೂರು 560020 ಇವರಿಗೆ ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಿ.
More Info