Tap to Read ➤

ಮೈಕ್ರೋಬ್ಲಾಗಿಂಗ್ ಅಪ್ಲಿಕೇಷನ್ ಟ್ವಿಟ್ಟರ್ ಮಾರಾಟಕ್ಕೆ

ಮೈಕ್ರೋಬ್ಲಾಗಿಂಗ್ ಅಪ್ಲಿಕೇಷನ್ ಟ್ವಿಟ್ಟರ್ ಖರೀದಿಗೆ ಆಸಕ್ತಿ ತೋರಿರುವ ಟೆಸ್ಲಾ ಕಂಪನಿ ಒಡೆಯ ಎಲಾನ್ ಮಸ್ಕ್.
ಟ್ವಿಟ್ಟರ್ ಹಾಗೂ ಎಲಾನ್ ಮಸ್ಕ್ ನಡುವಿನ ವಹಿವಾಟು ಮಾತುಕತೆಯು ಅಂತಿಮ ಹಂತದಲ್ಲಿದೆ
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಅಪ್ಲಿಕೇಷನ್ ಟ್ವಿಟ್ಟರ್ ಅನ್ನು 43 ಶತಕೋಟಿ ಡಾಲರ್‌ಗೆ ಖರೀದಿ ಮಾಡುವ ಸಾಧ್ಯತೆ.
ಫೋರ್ಬ್ಸ್‌ನ ಲೆಕ್ಕಾಚಾರದ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ
ಟ್ವಿಟ್ಟರ್ ಖರೀದಿಗೆ ಹೂಡಬೇಕೆಂದಿರುವ 46.5 ಬಿಲಿಯನ್ ಡಾಲರ್ ಹಣದ ಪೈಕಿ 33.5 ಬಿಲಿಯನ್ ಡಾಲರ್ ಹಣವನ್ನು ತಾವೇ ಖುದ್ದಾಗಿ ಹೊಂದಿಸಿದ್ದಾರೆ
ಟೆಸ್ಲಾ ಕಂಪನಿಯ ಷೇರುಗಳ ಮೇಲೆ ಸಾಲ ಮಾಡಿ ಒಂದಷ್ಟು ಹಣವನ್ನು ಮಸ್ಕ್ ಒಟ್ಟುಗೂಡಿಸಿದ್ದಾರೆ
ಮಾರ್ಗನ್ ಸ್ಟಾನ್ಸೀ ಎಂಬ ಖಾಸಗಿ ಹೂಡಿಕೆ ಸಂಸ್ಥೆಯು 13 ಬಿಲಿಯನ್ ಡಾಲರ್ ಹಣದ ಸಾಲ ನೀಡಲು ತಯಾರಾಗಿದೆ ಎಂದು ಕೂಡಾ ವರದಿಯಾಗಿದೆ
21 ಮಾರ್ಚ್ 2006ರಲ್ಲಿ ಟ್ವಿಟ್ಟರ್ ಪ್ರಾರಂಭವಾಯಿತು. ಜಾಕ್ ಡೋರ್ಸಿ ಎರಡು ಬಾರಿ ಸಿಇಒ ಆಗಿ ಸಂಸ್ಥೆಯನ್ನು ಬೆಳೆಸಿದರು. ಸದ್ಯ ಪರಾಗ್ ಅಗರವಾಲ್ ಸಿಇಒ ಆಗಿದ್ದಾರೆ
ಇನ್ನಷ್ಟು ಸುದ್ದಿ